ಉರಿಬಿಸಿಲಲ್ಲೂ ನಿಲ್ಲದ ರೈತರ ಧರಣಿ: ಎರಡನೇ ದಿನವೂ ಹೆದ್ದಾರಿಗಳು ಸಂಪೂರ್ಣ ಬಂದ್
ಹಿರೇಬಾಗೇವಾಡಿ (ಬೆಳಗಾವಿ): ಕಬ್ಬಿಗೆ ₹5,500 ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರವೂ ಉಗ್ರ ಹೋರಾಟ ನಡೆಸಿದರು. ಮೂರು ಕಡೆ ರಾಷ್ಟ್ರೀಯ ಹೆದ್ದಾರಿ ತಡೆದರು. ಜಿಲ್ಲೆಯ ವಿವಿಧೆಡೆಯೂ ರಸ್ತೆ ಸಂಚಾರ ಬಂದ್ ಮಾಡಿದರು.ಮಂಗಳವಾರ ರಾತ್ರಿಯಿಡೀ 500ಕ್ಕೂ ಹೆಚ್ಚು ರೈತರು ಟೋಲ್ ನಾಕಾದಲ್ಲಿಯೇ ರಾಷ್ಟ್ರೀಯ ಹೆದ್ದಾರ

ಹಿರೇಬಾಗೇವಾಡಿ (ಬೆಳಗಾವಿ): ಕಬ್ಬಿಗೆ ₹5,500 ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರವೂ ಉಗ್ರ ಹೋರಾಟ ನಡೆಸಿದರು. ಮೂರು ಕಡೆ ರಾಷ್ಟ್ರೀಯ ಹೆದ್ದಾರಿ ತಡೆದರು. ಜಿಲ್ಲೆಯ ವಿವಿಧೆಡೆಯೂ ರಸ್ತೆ ಸಂಚಾರ ಬಂದ್ ಮಾಡಿದರು.ಮಂಗಳವಾರ ರಾತ್ರಿಯಿಡೀ 500ಕ್ಕೂ ಹೆಚ್ಚು ರೈತರು ಟೋಲ್ ನಾಕಾದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಮೇಲೆ ಮಲಗಿದರು. ಇಲ್ಲೇ ಊಟ ಮಾಡಿದರು.ಬುಧವಾರ ಬೆಳಿಗ್ಗೆ ಮತ್ತೆ ಜಮಾವಣೆಗೊಂಡ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಮೊಳಗಿಸಿದರು.ದನ-ಕರುಗಳನ್ನು ತಂದು ಹೆದ್ದಾರಿ ಮೇಲೆ ಕಟ್ಟಿದರು. ಟ್ರ್ಯಾಕ್ಟರುಗಳನ್ನು ಅಡ್ಡ ನಿಲ್ಲಿಸಿ ಸಂಚಾರ ಸಂಪೂರ್ಣ ಬಂದ್ ಮಾಡಿದರು. ಆಂಬುಲೆನ್ಸ್ ಮತ್ತು ಶಾಲಾ, ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ ಒಂದು ಕಡೆ ಪೂರ್ಣ ರಸ್ತೆ ಬಿಟ್ಟುಕೊಟ್ಟರು.ಅಲ್ಲದೇ, ನಿಪ್ಪಾಣಿ ತಾಲ್ಲೂಕಿನ ಕೂಗನೊಳ್ಳಿ ಹಾಗೂ ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಟೋಲುಗಳಲ್ಲೂ ಅಪಾರ ಸಂಖ್ಯೆಯ ರೈತರು ಧರಣಿ ಮುಂದುವರಿಸಿದರು.
Read the complete story at Prajavani