50 ಲಕ್ಷ ನನಗೆ ಬಂದಿದ್ರೆ ಅಮ್ಮಂಗೆ ಹೂವಿನ ಅಂಗಡಿ, ಅಕ್ಕನಿಗೆ ಪಾರ್ಲರ್ ಇಟ್ಟುಕೊಡ್ತಿದ್ದೆ: ಬಿಗ್ಬಾಸ್ ಮಂಜ
– ನಾನು ಮಹಿಳಾ ದ್ವೇಷಿ ಅಲ್ಲ, ನನ್ನ ಮಾತುಗಳ ಬಗ್ಗೆ ರಿಗ್ರೆಟ್ ಇಲ್ಲ ಎಂದ ಮಾಡರ್ನ್ ಮಹಾಕವಿ ಕಳೆದ ವಾರ ಬಿಗ್ಬಾಸ್ ಮನೆಯಿಂದ ಕಿಕ್ಔಟ್ ಆದ ಮಾಡರ್ನ್ ಮಹಾಕವಿ ಮಂಜ (Modern Mahakavi Manja) ʻಪಬ್ಲಿಕ್ ಟಿವಿʼ ಜೊತೆಗೆ ಮನಬಿಚ್ಚಿ ಮಾತನಾಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ತಮ್ಮ ಆಟ, ಆಡಿದ ಮಾತುಗಳು ಹಾಗೂ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ. ನಾನು ದೊ

– ನಾನು ಮಹಿಳಾ ದ್ವೇಷಿ ಅಲ್ಲ, ನನ್ನ ಮಾತುಗಳ ಬಗ್ಗೆ ರಿಗ್ರೆಟ್ ಇಲ್ಲ ಎಂದ ಮಾಡರ್ನ್ ಮಹಾಕವಿ ಕಳೆದ ವಾರ ಬಿಗ್ಬಾಸ್ ಮನೆಯಿಂದ ಕಿಕ್ಔಟ್ ಆದ ಮಾಡರ್ನ್ ಮಹಾಕವಿ ಮಂಜ (Modern Mahakavi Manja) ʻಪಬ್ಲಿಕ್ ಟಿವಿʼ ಜೊತೆಗೆ ಮನಬಿಚ್ಚಿ ಮಾತನಾಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ತಮ್ಮ ಆಟ, ಆಡಿದ ಮಾತುಗಳು ಹಾಗೂ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ. ನಾನು ದೊಡ್ಮನೆಗೆ ಒಳ್ಳೊಳ್ಳೆ ಕಂಟೆಂಟ್ ಕೊಡಬೇಕು ಅಂತಾ ಹೋಗಿದ್ದೆ, ಆದ್ರೆ, ಇತರ ಸ್ಪರ್ಧಿಗಳ ವರ್ತನೆಯಿಂದಾಗಿ ಕೆಲವು ಸಂದರ್ಭಗಳಲ್ಲಿ ಹಾಗೆ ನಡೆದುಕೊಳ್ಳಬೇಕಾಯಿತು. ಎಲ್ಲ ಮಹಿಳೆಯರ ಕ್ಯಾರೆಕ್ಟರ್ ಬಗ್ಗೆ ನಾನು ಮಾತನಾಡಿಲ್ಲ. ಎದುರಿಗಿದ್ದ ಹುಡುಗಿಯ ವರ್ತನೆಯ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಸೌಂದರ್ಯ ಕೂಡ ಆ ರೀತಿ ನಡೆದುಕೊಂಡಿದ್ದರು ಎಂದಿರುವ ಮಂಜ ನನಗೆ ಎಲ್ಲ ಮಹಿಳೆಯರ ಮೇಲೂ ಗೌರವವಿದೆ. ನಾನು ಮಹಿಳಾ ದ್ವೇಷಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಮ್ಮ ಹೂ ಮಾರ್ತಾರೆ, ಅಕ್ಕ ಪಾರ್ಲರ್ ಕೆಲಸ ಮಾಡ್ತಾರೆ ತಮ್ಮ ಕುಟುಂಬದ ಪರಿಸ್ಥಿತಿಯ ಬಗ್ಗೆಯೂ ಮನಬಿಚ್ಚಿ ಮಾತನಾಡಿರುವ ಮಂಜ, ಅಮ್ಮ ಹೂವು ಮಾರುತ್ತಾರೆ, ಅಕ್ಕ ಪಾರ್ಲರ್ನಲ್ಲಿ ಕೆಲಸಕ್ಕೆ ಹೋಗುತ್ತಾರೆ. ನಾನು ಮನೆಯಿಂದ ಆಚೆ ಬಂದಾಗ, ಅವಕಾಶ ಹಾಳುಮಾಡಿಕೊಂಡೆ ಅಂತಾ ಎಲ್ಲರೂ ಬೈದರು. 50 ಲಕ್ಷ ರೂ. ನನಗೆ ಬಂದಿದ್ದರೇ ಅಮ್ಮನಿಗೆ ಹೂವಿನ ಅಂಗಡಿ ಹಾಗೂ ಅಕ್ಕನಿಗೆ ಪಾರ್ಲರ್ ಇಟ್ಟುಕೊಡ್ತಿದ್ದೆ ಎಂದು ಮಂಜ ತಮ್ಮ ಮನದಾಸೆ ಹಂಚಿಕೊಂಡಿದ್ದಾರೆ.