ಸ್ಟಿಂಗ್ ಫ್ಯಾಕ್ಟರಿಯೇ ಇದೆ: ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ
ಬೆಂಗಳೂರು:‘ಮಾರುವೇಷದ ಕಾರ್ಯಾಚರಣೆ ಹಿಂದೆ ಒಂದು ಫ್ಯಾಕ್ಟರಿಯೇ ಕೆಲಸ ಮಾಡುತ್ತಿದೆ. ಪಾಲುದಾರರು ಬೇರೆ ಬೇರೆಯವರಿದ್ದಾರೆ’ ಎಂದು ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಕುಟುಕಿದರು.‘ಸಿದ್ದರಾಮಯ್ಯ ಅವರ ಮೇಲಿನ ಈಗಿನ ಆರೋಪ 2011ರದ್ದು. ಇಂತಹ ವಿಚಾರಗಳು ರಾಜ್ಯಕ್ಕೆ ಅವಮಾನ ಉಂಟು ಮಾಡುತ್ತಿವೆ. ಮುಖ್ಯಮಂತ್ರಿ ಅವರ ಹೇಳಿಕೆ ವಿಚಾರ ಹೈಕಮಾಂಡ್ ಗಮನಕ್ಕೂ ಬಂದಿರಬಹುದು. ಆದರೆ,

ಬೆಂಗಳೂರು:‘ಮಾರುವೇಷದ ಕಾರ್ಯಾಚರಣೆ ಹಿಂದೆ ಒಂದು ಫ್ಯಾಕ್ಟರಿಯೇ ಕೆಲಸ ಮಾಡುತ್ತಿದೆ. ಪಾಲುದಾರರು ಬೇರೆ ಬೇರೆಯವರಿದ್ದಾರೆ’ ಎಂದು ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಕುಟುಕಿದರು.‘ಸಿದ್ದರಾಮಯ್ಯ ಅವರ ಮೇಲಿನ ಈಗಿನ ಆರೋಪ 2011ರದ್ದು. ಇಂತಹ ವಿಚಾರಗಳು ರಾಜ್ಯಕ್ಕೆ ಅವಮಾನ ಉಂಟು ಮಾಡುತ್ತಿವೆ. ಮುಖ್ಯಮಂತ್ರಿ ಅವರ ಹೇಳಿಕೆ ವಿಚಾರ ಹೈಕಮಾಂಡ್ ಗಮನಕ್ಕೂ ಬಂದಿರಬಹುದು. ಆದರೆ, ಅವರು ಯಾವ ರೀತಿ ಅದನ್ನು ತೆಗೆದುಕೊಂಡಿದ್ದಾರೆಂದು ನನಗೆ ತಿಳಿದಿಲ್ಲ’ ಎಂದರು.‘ನಾಯಕತ್ವ ಬದಲಾವಣೆಗೂ ಮಾರುವೇಷದ ಕಾರ್ಯಾಚರಣೆ ಕಾರಣವಾಗಿರುವುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ’ ಎಂದರು.‘ಕಾರ್ಯಾಚರಣೆ ಯಾರು ಮಾಡಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ರಮೇಶ ಜಾರಕಿಹೊಳಿ ವಿರುದ್ಧ ಯಾರು ಮಾಡಿದ್ದು ಎಂಬುದು ತಿಳಿದಿದೆಯಲ್ಲ. ರಾಜ್ಯದ ಎಲ್ಲ ನಾಯಕರ, ಎಲ್ಲ ಪಕ್ಷದವರ ಮಾನ ಮರ್ಯಾದೆ ಹರಾಜಾಗುತ್ತಿದೆ. ಈಗ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಆಗುತ್ತಿದೆ. ಪಕ್ಷದ ಮೇಲೂ ಅದರ ಪರಿಣಾಮ ಬೀರುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.261014-51-1898130508
Read the complete story at Prajavani