ಹೈಜಾಕ್ ಬೆದರಿಕೆ: ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ
ಜೈಪುರ: ಜೈಪುರ: ಫ್ರಾಂಕ್ಫರ್ಟ್ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಅಪಹರಣ (Hijack) ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಜೈಪುರಕ್ಕೆ ಮಾರ್ಗ ಬದಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಆದರೆ, ಭದ್ರತಾ ಪರಿಶೀಲನೆ ಬಳಿಕ ಇದು ಹುಸಿ ಸಂದೇಶ ಎಂದು ತಿಳಿದುಬಂದಿದೆ. AI2030 ವಿಮಾನವು ಜೈಪುರ ಅಂತರರಾಷ್ಟ್ರೀಯ ವಿಮಾನ

ಜೈಪುರ: ಜೈಪುರ: ಫ್ರಾಂಕ್ಫರ್ಟ್ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಅಪಹರಣ (Hijack) ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಜೈಪುರಕ್ಕೆ ಮಾರ್ಗ ಬದಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಆದರೆ, ಭದ್ರತಾ ಪರಿಶೀಲನೆ ಬಳಿಕ ಇದು ಹುಸಿ ಸಂದೇಶ ಎಂದು ತಿಳಿದುಬಂದಿದೆ. AI2030 ವಿಮಾನವು ಜೈಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ತಕ್ಷಣವೇ ವಿಮಾನವನ್ನು ಪ್ರತ್ಯೇಕ ಭದ್ರತಾ ವಲಯಕ್ಕೆ (Isolation bay) ತೆಗೆದುಕೊಂಡು ಹೋಗಿ ತಪಾಸಣೆ ನಡೆಸಲಾಯಿತು ಎಂದು ಮಾಳವೀಯನಗರದ ಸಹಾಯಕ ಪೊಲೀಸ್ ಆಯುಕ್ತ ಶಿವ ದಯಾಳ್ ತಿಳಿಸಿದ್ದಾರೆ.VIDEO | Jaipur: Air India's Frankfurt-Delhi flight diverted to Jaipur following bomb threat; plane makes emergency landing at airport; officials arrive at the airport. More details awaited.(Full video available on PTI Videos - https://t.co/d8jp61yd2p) pic.twitter.com/Ghw7VdiSkg— Press Trust of India (@PTI_News) October 14, 2026