ವಿದ್ಯಾರ್ಥಿಗಳ ದಾರಿಗೆ ಅಡ್ಡಬರಬೇಡಿ: ಮೋದಿ, ಅಮಿತ್ ಶಾಗೆ ರಾಹುಲ್ ಗಾಂಧಿ ಎಚ್ಚರಿಕೆ
ನವದೆಹಲಿ: ಪ್ರತಿಭಟನಾನಿರತ ವಿದ್ಯಾರ್ಥಿಗಳ ದಾರಿಗೆ ಅಡ್ಡಬರಬೇಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಬುಧವಾರ ಹೇಳಿದ್ದಾರೆ.ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾ
ನವದೆಹಲಿ: ಪ್ರತಿಭಟನಾನಿರತ ವಿದ್ಯಾರ್ಥಿಗಳ ದಾರಿಗೆ ಅಡ್ಡಬರಬೇಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಬುಧವಾರ ಹೇಳಿದ್ದಾರೆ.ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಇತ್ತೀಚೆಗೆ ನಡೆದ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಹಾಗೂ ಕಾಂಗ್ರೆಸ್ ಯುವ ಘಟಕ ಎನ್ಎಸ್ಯುಐ ಸದಸ್ಯರೊಂದಿಗೆ ರಾಹುಲ್ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ್ದಾರೆ.ಆ ಸಂದರ್ಭದ ವಿಡಿಯೊ, ಫೋಟೊಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಹಂಚಿಕೊಂಡಿರುವ ಅವರು, ಪ್ರಜಾಪ್ರಭುತ್ವದ ಧ್ವನಿಯನ್ನು ಅಡಗಿಸಲು ಯತ್ನಿಸುವವರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.‘ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುವವರು ನ್ಯಾಯದ ಕಠಿಣ ಪರಿಣಾಮ ಎದುರಿಸುವ ದಿನ ಬರಲಿದೆ. ಅದು ನರೇಂದ್ರ ಮೋದಿಯೇ ಆಗಲಿ, ಅಮಿತ್ ಶಾ – ಜ್ಞಾನೇಶ್ ಕುಮಾರ್ ಇರಲಿ ಅಥವಾ ಇನ್ಯಾರೇ ಆಗಿರಲಿ’ ಎಂದಿದ್ದಾರೆ.ಪೊಲೀಸರಿಂದ ಪೆಟ್ಟು ತಿಂದಿದ್ದಾರೆ ಎನ್ನಲಾದ ವಿದ್ಯಾರ್ಥಿಗಳನ್ನು ಉಲ್ಲೇಖಿಸಿ, ದೇಶದ ಯುವ ಸಿಂಹಗಳ ಹಿಂದೆ ಕಾಂಗ್ರೆಸ್ ಇದೆ, ಚಿಂತಿಸಬೇಡಿ ಎಂದು ಭರವಸೆ ನೀಡಿದ್ದಾರೆ.ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ದೇಶದ ಜನರ ಧ್ವನಿಯ ಎದುರು ನಿಂತಿದ್ದಾರೆ ಎಂದ ಕಾಂಗ್ರೆಸ್ ನಾಯಕ, ‘ಇದು ಭಾರತ. ಅಮಿತ್ ಶಾ ಅವರೇ ಎಚ್ಚರದಿಂದ ಇರಿ. ಇಲ್ಲಿ ಹಿಂದೂ, ಮುಸ್ಲಿಮರು ಎಂಬುದಿಲ್ಲ. ಜಾತಿ, ಲಿಂಗದ ತಾರತಮ್ಯವೂ ಇಲ್ಲ. ಎಲ್ಲರೂ ಒಟ್ಟಾಗಿದ್ದಾರೆ. ಇದು ಹಿಂದೂಸ್ತಾನ’ ಎಂದಿದ್ದಾರೆ.ಗಾಯಾಳು ವಿದ್ಯಾರ್ಥಿಗಳ ಹೆಗಲಿಗೆ ಹೆಗಲುಕೊಟ್ಟು ನಿಂತು, ‘ಎಲ್ಲರದ್ದೂ ಒಂದೇ ಧ್ವನಿ. ಅದು ಭಾರತದ ಧ್ವನಿ. ಮೋದಿ, ಅಮಿತ್ ಶಾ ಈ ಧ್ವನಿಯ ಎದುರು ನಿಂತಿದ್ದಾರೆ. ಈ ಧ್ವನಿಯ ಎದುರು ನಿಲ್ಲದಂತೆ ಅವರಿಗೆ ಸಲಹೆ ನೀಡುತ್ತೇನೆ. ವಿದ್ಯಾರ್ಥಿಗಳ ಧ್ವನಿ ಎದುರು ಯಾರೂ ನಿಲ್ಲಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದ್ದಾರೆ.‘ಪೊಲೀಸರಿಗೂ ಪ್ರೀತಿಯಿಂದ ಹೇಳಲು ಬಯಸುತ್ತೇನೆ. ವಿಡಿಯೊ ಸಾಕ್ಷ್ಯಗಳನ್ನು ನಮಗೆ ಕಳುಹಿಸುವಂತೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಕೇಳಿದ್ದೇನೆ. ಎಲ್ಲರಿಗೂ ನ್ಯಾಯ ಕೊಡಿಸುತ್ತೇವೆ. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೆಸಗಿದವರನ್ನು ಅಂದರೆ, ನರೇಂದ್ರ ಮೋದಿ, ಅಮಿತ್ ಶಾ, ಜ್ಞಾನೇಶ್ ಕುಮಾರ್ ಅವರಿಂದ ಹಿಡಿದು ಕಾನ್ಸ್ಟೆಬಲ್ಗಳವರೆಗೆ ಪ್ರತಿಯೊಬ್ಬರಿಗೂ ಶಿಕ್ಷೆ ಕೊಡಿಸುತ್ತೇವೆ’ ಎಂದು ಹೇಳಿದ್ದಾರೆ.ಪ್ರತಿಭಟನೆ ವೇಳೆ ಪೊಲೀಸರು ತಮ್ಮನ್ನು ವಶಕ್ಕೆ ಪಡೆಯುವಾಗ ಅಮಾನವೀಯವಾಗಿ ನಡೆಸಿಕೊಂಡರು ಎಂಬುದಾಗಿ ವಿದ್ಯಾರ್ಥಿಗಳು ದೂರಿದ್ದಾರೆ.वो दिन आ रहा है जब हमारे लोकतंत्र की आवाज़ को दबाने वालों को कठोर न्याय का सामना करना पड़ेगा। चाहे वो नरेंद्र मोदी हों, अमित शाह हों, ज्ञानेश कुमार हों या कोई भी हवलदार।मैं चाहता हूँ कि हर वो छात्र और युवा, जिसने पुलिस की हिंसा या ग़ैरक़ानूनी हिरासत झेली है, उसका पूरा रिकॉर्ड… pic.twitter.com/sJQhYIPMYN— Rahul Gandhi (@RahulGandhi) October 14, 2026