ಔರಾದ್: ಒಡಲಲ್ಲಿ ನೀರಿದ್ದರೂ ಕುಡಿಯುವ ಜಲಕ್ಕೆ ಹಾಹಾಕಾರ
ಔರಾದ್: ಈ ಬಾರಿ ಮಳೆ ಕೊರತೆಯಿಂದ ತಾಲ್ಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು, ಚಳಿಗಾಲ ಆರಂಭದಲ್ಲೇ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಔರಾದ್ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಜಲಮೂಲವಾದ ಹಾಲಹಳ್ಳಿ ಬ್ಯಾರೇಜ್ನಲ್ಲಿ ನೀರು ಖಾಲಿಯಾಗಿರುವುದರಿಂದ ಕಳೆದ ಒಂದು ವಾರದಿಂದ ಪಟ್ಟಣದ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.ನೀರಿನ ಅಭಾವ ನೀಗಿಸಲು ಪಟ್ಟಣದ

ಔರಾದ್: ಈ ಬಾರಿ ಮಳೆ ಕೊರತೆಯಿಂದ ತಾಲ್ಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು, ಚಳಿಗಾಲ ಆರಂಭದಲ್ಲೇ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಔರಾದ್ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಜಲಮೂಲವಾದ ಹಾಲಹಳ್ಳಿ ಬ್ಯಾರೇಜ್ನಲ್ಲಿ ನೀರು ಖಾಲಿಯಾಗಿರುವುದರಿಂದ ಕಳೆದ ಒಂದು ವಾರದಿಂದ ಪಟ್ಟಣದ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.ನೀರಿನ ಅಭಾವ ನೀಗಿಸಲು ಪಟ್ಟಣದ ಕೆಲವೆಡೆ ಟ್ಯಾಂಕರ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ ಇದರಿಂದ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಕ್ಕಿಲ್ಲ. ಪಟ್ಟಣದಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ತೇಗಂಪೂರ ಕೆರೆಯ ನೀರನ್ನು ಬಳಸಿಕೊಂಡು ಸಮಸ್ಯೆ ಬಗೆಹರಿಸುವ ಅವಕಾಶವಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯ ತೇಗಂಪೂರ ಕೆರೆಯಿಂದ ಎರಡು ದಶಕಗಳ ಹಿಂದಿನಿಂದಲೂ ಔರಾದ್ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಆದರೆ ಹಾಲಹಳ್ಳಿ ಬ್ಯಾರೇಜ್ ನಿರ್ಮಾಣವಾದ ಬಳಿಕ ತೇಗಂಪೂರ ಕೆರೆಯ ನೀರು ಪೂರೈಕೆ ಯೋಜನೆ ನಿರ್ಲಕ್ಷ್ಯಕ್ಕೆ ಒಳಗಾಯಿತು. ನೀರು ಪೂರೈಸಲು ಬಳಸುತ್ತಿದ್ದ ಮೋಟಾರ್ಗಳು ಸೇರಿದಂತೆ ಇತರ ಉಪಕರಣಗಳು ಎಲ್ಲಿವೆ ಎಂದು ಕೇಳಿದರೆ ಸಂಬಂಧಿತರ ಬಳಿ ಸೂಕ್ತ ಉತ್ತರವಿಲ್ಲ.ತಾಲ್ಲೂಕಿನಲ್ಲಿ ಬರ ಪರಿಸ್ಥಿತಿ ಆವರಿಸಿದ ಹಿನ್ನೆಲೆಯಲ್ಲಿ ಜಲಮೂಲಗಳ ಬಳಕೆಗೆ ಆದ್ಯತೆ ನೀಡಬೇಕಾದ ಅಗತ್ಯವಿದೆ. ಟ್ಯಾಂಕರ್ಗಳ ಮೂಲಕ ನೀರು ಪೂರೈಸುವುದು ತಾತ್ಕಾಲಿಕ ಪರಿಹಾರವಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ಅಧಿಕಾರಿಗಳು ತೇಗಂಪೂರ ಕೆರೆಯತ್ತ ಗಮನ ಹರಿಸಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.ತೇಗಂಪೂರ ನೀರಿನ ಯೋಜನೆ ನಿರ್ಲಕ್ಷ್ಯಔರಾದ್ ಪಟ್ಟಣಕ್ಕೆ ಕುಡಿಯಲು ನೀರು ಪೂರೈಸಲು ತೇಗಂಪೂರ ಕೆರೆಯಿಂದ 2001ರಲ್ಲಿ ₹ 1.67 ಕೋಟಿ ಮೊತ್ತದ ಯೋಜನೆ ಕಾರ್ಯಗತಗೊಳಿಸಲಾಗಿದೆ. 2019ರಲ್ಲಿ ಅಂದಿನ ಜಿಲ್ಲಾಧಿಕಾರಿ ಮಹಾದೇವಪ್ಪ ಅವರು ಸರ್ಮಪಕ ನೀರು ಪೂರೈಸಲು ಅನುಕೂಲವಾಗಲು ಹೊಸದಾಗಿ ಮೋಟಾರ್ ಇತರೆ ಸಲಕರಣೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಆದರೆ ಈಗ ಅಲ್ಲಿ ಈ ಯಾವ ಸಾಮಗ್ರಿಗಳೂ ಇಲ್ಲ. ಈ ಬಗ್ಗೆ ತನಿಖೆ ನಡೆಸಬೇಕು. ಟ್ಯಾಂಕರ್ ನೀರು ಪೂರೈಸಿ ಸರ್ಕಾರದ ಹಣ ಹಾಳು ಮಾಡುವ ಬದಲು ತೇಗಂಪೂರ ಕರೆ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ಸಂಘರ್ಷ ಸಮಿತಿ ಹಿರಿಯ ಮುಖಂಡ ರವೀಂದ್ರ ಮೀಸೆ ಆಗ್ರಹಿಸಿದ್ದಾರೆ.261014-33-1604734808