ಹೆದ್ದಾರಿಯಲ್ಲಿ ರೈತರ ಪ್ರತಿಭಟನೆ: ಮುಂಬೈ–ಬೆಂಗಳೂರು ಸಂಚಾರ ಬಂದ್
ಪುಣೆ: ಮಹಾರಾಷ್ಟ್ರ–ಕರ್ನಾಟಕ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಮುಂಬೈ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಪ್ರಯಾಣಿಕರಿಗೆ ಸೂಚಿಸಿದ್ದಾರೆ. ಪ್ರತಿಭಟನೆಯಿಂದ ಬಾಧಿತವಾಗಿರುವ ಹೆದ್ದಾರಿಯ ಭಾಗವನ್ನು ಬಂದ್ ಎಂದು ಗುರುತಿಸುವಂತೆ ಗೂಗಲ್ ಮ್ಯಾಪ್ಸ್ಗೆ ಮನವಿ ಮಾಡಿದ್ದಾರೆ.
ಪುಣೆ: ಮಹಾರಾಷ್ಟ್ರ–ಕರ್ನಾಟಕ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಮುಂಬೈ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಪ್ರಯಾಣಿಕರಿಗೆ ಸೂಚಿಸಿದ್ದಾರೆ. ಪ್ರತಿಭಟನೆಯಿಂದ ಬಾಧಿತವಾಗಿರುವ ಹೆದ್ದಾರಿಯ ಭಾಗವನ್ನು ಬಂದ್ ಎಂದು ಗುರುತಿಸುವಂತೆ ಗೂಗಲ್ ಮ್ಯಾಪ್ಸ್ಗೆ ಮನವಿ ಮಾಡಿದ್ದಾರೆ.ವಿಜಯಪುರ- ಕಲಬುರ್ಗಿ ಹೆದ್ದಾರಿ ಬಂದ್ ಮಾಡಿ ರೈತರಿಂದ ಪ್ರತಿಭಟನೆಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಕೊಲ್ಹಾಪುರ ವಲಯದ ಪೊಲೀಸ್ ಮಹಾನಿರೀಕ್ಷಕ ರಂಜನ್ ಕುಮಾರ್ ಶರ್ಮಾ ಸಲಹೆ ನೀಡಿದ್ದಾರೆ.ಕರ್ನಾಟಕದ ಮಹಾರಾಷ್ಟ್ರ ಗಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 48ರ ಕೋಗನೊಳ್ಳಿ ಟೋಲ್ ಪ್ಲಾಜಾ ಬಳಿ ಪ್ರತಿಭಟನೆ ನಡೆಯುತ್ತಿದ್ದು, ಆ ಸ್ಥಳವನ್ನು ಬಂದ್ ಎಂದು ಗುರುತಿಸುವಂತೆ ಗೂಗಲ್ ಮ್ಯಾಪ್ಸ್ ಅಧಿಕಾರಿಗಳಿಗೆ ಪೊಲೀಸರು ಪತ್ರ ಬರೆದಿದ್ದಾರೆ.ಕಬ್ಬಿನ ಬೆಲೆ, ಎಥೆನಾಲ್ ದರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ಮಂಗಳವಾರ ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.ಈ ಪ್ರತಿಭಟನೆಯಿಂದ ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಇತರ ಭಾಗಗಳಿಂದ ಕರ್ನಾಟಕದ ಬೆಳಗಾವಿ, ಬೆಂಗಳೂರಿನತ್ತ ತೆರಳುವ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಬುಧವಾರ ಬೆಳಿಗ್ಗೆಯೂ ಪ್ರತಿಭಟನೆ ಮುಂದುವರಿದಿದೆ.ಕಬ್ಬಿಗೆ ₹5,500 ದರ ನಿಗದಿಗೆ ಆಗ್ರಹಿಸಿ ಕಲಬುರಗಿಯಲ್ಲಿ ರೈತರ ಪ್ರತಿಭಟನೆ ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ಸಂಚಾರ ಸಹಜ ಸ್ಥಿತಿಗೆ ಮರಳಲು ಸಮಯ ಹಿಡಿಯಬಹುದು. ಹೀಗಾಗಿ, ಅನಿವಾರ್ಯವಲ್ಲದಿದ್ದರೆ ಎನ್ಎಚ್ 48ರಲ್ಲಿ ಪ್ರಯಾಣಿಸದಂತೆ ಪೊಲೀಸರು ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಪೊಲೀಸರು ಎರಡು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ ಸಾತಾರಾ, ರಹಿಮತ್ಪುರ, ವಿಟಾ, ತಾಸಗಾಂವ್, ಮಿರಜ್, ಗೋಕಾಕ ಮತ್ತು ಬೆಳಗಾವಿ ಮೂಲಕ ಒಂದು, ಸಾತಾರಾ, ಕರಾಡ್, ಇಸ್ಲಾಂಪುರ, ಆಷ್ಟಾ, ಮಿರಜ್, ಕಾಗವಾಡ, ಗೋಕಾಕ ಮತ್ತು ಬೆಳಗಾವಿ ಮೂಲಕ ಮತ್ತೊಂದು ಮಾರ್ಗವನ್ನು ಸೂಚಿಸಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿಯುವ ಪೊಲೀಸ್ ವ್ಯವಸ್ಥೆ: ಸುಧಾರಣೆ ಯಾವಾಗ?