ಭಾರತೀನಗರ: ವಿದ್ಯುತ್ ಸ್ಪರ್ಶದಿಂದ ಕಬ್ಬು ಭಸ್ಮ, ₹2ಲಕ್ಷಕ್ಕೂ ಹೆಚ್ಚು ನಷ್ಟ
ಭಾರತೀನಗರ: ಸಮೀಪದ ಆಲಭುಜನಹಳ್ಳಿಯಲ್ಲಿ ವಿದ್ಯುತ್ ತಂತಿ ತಗುಲಿ ಕಬ್ಬಿನ ತಾಕಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಫಸಲು ಸುಟ್ಟುಹೋಗಿದೆ.ಅಣ್ಣೂರು ಗ್ರಾಮದ ರೈತ ಎಸ್. ನಾಗೇಂದ್ರ ಬಿನ್ ಲೇ. ಶಾಮಣ್ಣ ಅವರಿಗೆ ಸೇರಿದ ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಬ್ಬು ಭಸ್ಮವಾಗಿದ್ದು, ₹2 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.ಸೆಸ್ಕ್ನವರು ವಿ

ಭಾರತೀನಗರ: ಸಮೀಪದ ಆಲಭುಜನಹಳ್ಳಿಯಲ್ಲಿ ವಿದ್ಯುತ್ ತಂತಿ ತಗುಲಿ ಕಬ್ಬಿನ ತಾಕಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಫಸಲು ಸುಟ್ಟುಹೋಗಿದೆ.ಅಣ್ಣೂರು ಗ್ರಾಮದ ರೈತ ಎಸ್. ನಾಗೇಂದ್ರ ಬಿನ್ ಲೇ. ಶಾಮಣ್ಣ ಅವರಿಗೆ ಸೇರಿದ ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಬ್ಬು ಭಸ್ಮವಾಗಿದ್ದು, ₹2 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.ಸೆಸ್ಕ್ನವರು ವಿದ್ಯುತ್ ಕಂಬಗಳನ್ನು ಜಮೀನಿನ ಮಧ್ಯೆ ಅಳವಡಿಸಿದ್ದು, ಕಂಬದ ವಿದ್ಯುತ್ ತಂತಿಗಳು ಜೋತುಬಿದ್ದಿದ್ದವು. ಕಬ್ಬು ಆಳೆತ್ತರಕ್ಕೆ ಬೆಳೆದಿದ್ದರಿಂದ ಗಾಳಿಗೆ ತಂತಿಗಳು ಅಲುಗಾಡಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಕಟಾವಿಗೆ ಸಿದ್ಧವಿದ್ದ ಬೆಳೆ ಸಂಪೂರ್ಣ ಸುಟ್ಟು ಭಸ್ಮಗೊಂಡಿದೆ. ರೈತ ನಾಗೇಂದ್ರ ಅವರ ಸಂಬಂಧಿಕರು ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಹಾಗೂ ಸೆಸ್ಕ್ ಮತ್ತು ಗ್ರಾಮ ಆಡಳಿತಾಧಿಕಾರಿಗೆ ದೂರು ನೀಡಿದ್ದಾರೆ.ದೂರು ಸ್ವೀಕರಿಸಿದ ಸೆಸ್ಕ್ ಸಹಾಯಕ ಎಂಜಿನಿಯರ್ ಶಿವಲಿಂಗಯ್ಯ ಹಾಗೂ ಗ್ರಾಮ ಆಡಳಿತಾಧಿಕಾರಿ ಮನೋಹರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಆಗ್ರಹ: ವಿದ್ಯುತ್ ತಂತಿ ತಗುಲಿ ಕಬ್ಬಿನ ಫಸಲು ಸಂಪೂರ್ಣ ಸುಟ್ಟುಹೋಗಿದ್ದರಿಂದ ಉಂಟಾದ ನಷ್ಟಕ್ಕೆ ರೈತ ನಾಗೇಂದ್ರ ಅವರಿಗೆ ಸೆಸ್ಕ್ ಇಲಾಖೆಯು ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಒಂದು ವೇಳೆ ಪರಿಹಾರ ನೀಡದಿದ್ದಲ್ಲಿ ಸೆಸ್ಕ್ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.261014-40-1712953686