ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ, ಆನೆ ಕಳೆಬರ ಪತ್ತೆ
ಗುಂಡ್ಲುಪೇಟೆ (ಚಾಮರಾಜನಗರ): ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವನ್ಯಜೀವಿ ವಲಯ ವ್ಯಾಪ್ತಿಯ ಹೊಂಗಳ್ಳಿ ಬೀಟ್ನಲ್ಲಿ ಕಳ್ಳಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿ ಹುಲಿ ಸಾವಿಗೀಡಾಗಿದೆ.ಮತ್ತೊಂದು ಕಡೆ ಆನೆಯ ಕಳೇಬರ ಪತ್ತೆಯಾಗಿದ್ದು ಎರಡೂ ದಂತಗಳು ನಾಪತ್ತೆಯಾಗಿದೆ. ಮೇಲ್ನೋಟಕ್ಕೆ ಆನೆಯ ದಂತಕ್ಕಾಗಿ ಆನೆಯನ್ನು ಬೇಟೆಯಾಡಿರುವ ಸಂಶಯ ವ್ಯಕ್ತವಾಗಿದ

ಗುಂಡ್ಲುಪೇಟೆ (ಚಾಮರಾಜನಗರ): ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವನ್ಯಜೀವಿ ವಲಯ ವ್ಯಾಪ್ತಿಯ ಹೊಂಗಳ್ಳಿ ಬೀಟ್ನಲ್ಲಿ ಕಳ್ಳಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿ ಹುಲಿ ಸಾವಿಗೀಡಾಗಿದೆ.ಮತ್ತೊಂದು ಕಡೆ ಆನೆಯ ಕಳೇಬರ ಪತ್ತೆಯಾಗಿದ್ದು ಎರಡೂ ದಂತಗಳು ನಾಪತ್ತೆಯಾಗಿದೆ. ಮೇಲ್ನೋಟಕ್ಕೆ ಆನೆಯ ದಂತಕ್ಕಾಗಿ ಆನೆಯನ್ನು ಬೇಟೆಯಾಡಿರುವ ಸಂಶಯ ವ್ಯಕ್ತವಾಗಿದೆ.ಉರುಳಿಗೆ ಸಿಲುಕಿ ಮೃತಪಟ್ಟ ಹುಲಿ ಎರಡು ವರ್ಷ ಪ್ರಾಯದ್ದಾಗಿದ್ದು ಕಳೇಬರವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಮದ್ದೂರು ವನ್ಯಜೀವಿ ವಲಯದ ಅಧಿಕಾರಿಗಳು ಮತ್ತು ಹುಲಿ ಹಾಗೂ ಆನೆ ಮೃತಪಟ್ಟು ವಾರದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಅಧಿಕಾರಿಗಳ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಅಧಿಕಾರಿಗಳು ಹಾಗೂ ಅರಣ್ಯದೊಳಗೆ ಗಸ್ತು ನಡೆಸುತ್ತಿಲ್ಲವೇ, ಪ್ರಕರಣ ಮುಚ್ಚಿಹಾಕುವ ಹುನ್ನಾರವೇ ಎಂದು ಪರಿಸರವಾದಿಗಳು ಆಕ್ರೋಶ ಹೊರಹಾಕಿದ್ದಾರೆ.ಬಂಡೀಪುರ, ಮಧುಮಲೈ ಅರಣ್ಯದಲ್ಲಿ ವನ್ಯಜೀವಿಗಳ ಬೇಟೆಯಾಡುವ ಭವಾರಿಯಾ ಗ್ಯಾಂಗ್ ಸಕ್ರಿಯವಾಗಿರುವ ಶಂಕೆ ಇದ್ದು ತನಿಖೆ ನಡೆಸಬೇಕು ಎಂದು ಪರಿಸರವಾದಿ ಜೋಸೆಫ್ ಹೂವರ್ ಒತ್ತಾಯಿಸಿದ್ದಾರೆ.ಪ್ರತಿಕ್ರಿಯೆ...ಹುಲಿ ಮತ್ತು ಆನೆ ಸಾವನ್ನಪ್ಪಿರುವ ಘಟನೆ ಸಂಬಂಧ ಎಸಿಎಫ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದ್ದು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.ಪ್ರಾಣಿಗಳು ಮೃತಪಟ್ಟ ವಿಚಾರ ಬಹಿರಂಗಪಡಿಸಿದರೆ ಕಳ್ಳಬೇಟೆಗಾರರು ಎಚ್ಚೆತ್ತುಕೊಳ್ಳುತ್ತಾರೆ ಎಂಬ ಉದ್ದೇಶದಿಂದ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಎನ್.ಟಿ.ಸಿ.ಎ ಮಾಹಿತಿ ನೀಡಲಾಗಿತ್ತು ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್ ತಿಳಿಸಿದ್ದಾರೆ.ಬಂಡೀಪುರ, ಸತ್ಯಮಂಗಲ ಹಾಗೂ ಮಧುಮಲೈ ಅರಣ್ಯ ವ್ಯಾಪ್ತಿಯಲ್ಲಿ ಕಳ್ಳಬೇಟೆ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ. ಅರಣ್ಯದಲ್ಲಿ ಗಸ್ತು ತಿರುಗುವಿಕೆಯಲ್ಲಿ ಲೋಪಗಳಾಗಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಡಿಸಿಎಫ್ ನಂದೀಶ್ ತಿಳಿಸಿದರು.