ಮಡಿಕೇರಿ: ಲಲಿತಾಂಬಿಕೆ–ಭಂಡಾಸುರನ ನಡುವೆ ಕಾಳಗ
ಮಡಿಕೇರಿ: ವಿಜಯದಶಮಿಯಂದು ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಪೇಟೆ ಶ್ರೀರಾಮಮಂದಿರ ಮತ್ತು ದೇಚೂರು ರಾಮಮಂದಿರದ ನಂತರ ಮಂಟಪಗಳನ್ನು ಹೊರಡಿಸಿದ ಇಲ್ಲಿನ ಶಕ್ತಿದೇವತೆಗಳಲ್ಲಿ ಒಂದಾದ ದಂಡಿನ ಮಾರಿಯಮ್ಮ ದೇಗುಲ ಮಂಟಪ ಸಮಿತಿ 95 ವಸಂತಗಳನ್ನು ಪೂರೈಸಿದೆ. ಇದೀಗ ತನ್ನ 96ನೇ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಂಡಿರುವುದು ‘ಮಹಾಕಾಮೇಶ್ವರಾಸ್ತ್ರದಿಂದ ಲಲಿತಾಂಬಿಕೆಯಿಂದ ಭಂಡಾಸುರನ

ಮಡಿಕೇರಿ: ವಿಜಯದಶಮಿಯಂದು ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಪೇಟೆ ಶ್ರೀರಾಮಮಂದಿರ ಮತ್ತು ದೇಚೂರು ರಾಮಮಂದಿರದ ನಂತರ ಮಂಟಪಗಳನ್ನು ಹೊರಡಿಸಿದ ಇಲ್ಲಿನ ಶಕ್ತಿದೇವತೆಗಳಲ್ಲಿ ಒಂದಾದ ದಂಡಿನ ಮಾರಿಯಮ್ಮ ದೇಗುಲ ಮಂಟಪ ಸಮಿತಿ 95 ವಸಂತಗಳನ್ನು ಪೂರೈಸಿದೆ. ಇದೀಗ ತನ್ನ 96ನೇ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಂಡಿರುವುದು ‘ಮಹಾಕಾಮೇಶ್ವರಾಸ್ತ್ರದಿಂದ ಲಲಿತಾಂಬಿಕೆಯಿಂದ ಭಂಡಾಸುರನ ವಧೆ’ ಎಂಬ ಕಥಾನಕವನ್ನು ಆಯ್ಕೆ ಮಾಡಿಕೊಂಡಿದೆ.ಉದ್ಬೂರಿನ ಮಹದೇವಪ್ಪ, ಅವರ ಮಕ್ಕಳು ಕಲಾಕೃತಿಗಳನ್ನು ತಯಾರಿಸುತ್ತಿದ್ದಾರೆ. ಒಟ್ಟು 23 ಕಲಾಕೃತಿಗಳು 2 ಟ್ರ್ಯಾಕ್ಟರ್ಗಳಲ್ಲಿ ಚಲನವಲನಗಳ ಮೂಲಕ ನೋಡುಗರನ್ನು ಸೆಳೆಯಲು ಸಮಿತಿಯ ಸದಸ್ಯರೇ ಅವಿರತವಾಗಿ ಶ್ರಮಿಸುತ್ತಿದ್ದಾರೆ.ಮಂಟಪದ ಆರ್ಚ್ ಬೋರ್ಡ್ ಅನ್ನು ದಿಂಡಿಗಲ್ನಿಂದ ತರಿಸಲಾಗುತ್ತಿದೆ. ಸ್ಟುಡಿಯೊ ಲೈಟಿಂಗ್ ಮತ್ತು ಸೌಂಡ್ ಅನಿಲ್ ಸ್ಕಂದ ಪ್ರೋ ಅವರದ್ದು. ಕ್ರಿಯೇಟಿವ್ ಸ್ಟಡಿಯೊದವರು ಸೆಟ್ ವರ್ಕ್ ಹೊಣೆ ಹೊತ್ತಿದ್ದಾರೆ. ಅಂದಾಜು ₹ 23 ಲಕ್ಷ ವೆಚ್ಚವಾಗಲಿದೆ.ಆಶ್ರಫ್, ಪ್ರಕಾಶ್ ಅವರ ಸ್ಪೆಷಲ್ ಎಫೆಕ್ಟ್ ಇದ್ದು, ಬೆಂಗಳೂರಿನ ಮುರುಳಿ (ಮಿಂಚು) ಅವರು ಫೈಯರ್ ವರ್ಕ್ ಮಾಡಲಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಪೂಕೋಡುವಿನ ಬ್ಯಾಂಡ್ಸೆಟ್ ಹಾಗೂ ವಾದ್ಯವೃಂದವು ಮೆರವಣಿಗೆಗೆ ಮೆರುಗು ತುಂಬಲಿದೆ ಎಂದು ಸಮಿತಿ ಅಧಕ್ಷ ಚೇತನ್ ಎಂ.ಆರ್ (ದಿನು) ತಿಳಿಸಿದರು. ಇವರೊಂದಿಗೆ ನವೀನ್.ಯು. ಸಹ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಕಳೆದ ವರ್ಷ ಈ ಮಂಟಪ ಸಮಿತಿಯು ‘ಶಿವನಿಂದ ಅಂಧಾಸುರನ ವಧೆ’ ಕಥಾ ಪ್ರಸಂಗವನ್ನು ಮನೋಜ್ಞವಾಗಿ ಪ್ರಸ್ತುತ ಪಡಿಸಿತ್ತು. ಅದಕ್ಕೂ ಹಿಂದಿನ ವರ್ಷಗಳಲ್ಲಿ ಕ್ರಮವಾಗಿ ‘ಕೌಶಿಕ ಮಹಾತ್ಮೆ’, ಪರಶಿವನಿಂದ ಜಲಂಧರನ ಸಂಹಾರ ಹಾಗೂ ಭೂಲೋಕ ರಕ್ಷಣೆಗೆ ಪಾರ್ವತಿಯಿಂದ ಶಾಕಾಂಬರಿ ರೂಪ ಕಥಾನಕಗಳೂ ಆಕರ್ಷಕವಾಗಿ ಮೂಡಿ ಬಂದಿದ್ದವು.261014-51-485727027