ಆಹಾರ ಪದಾರ್ಥಗಳು, ಇಂಧನ ಬೆಲೆ ಹೆಚ್ಚಳ: ಸಗಟು ಹಣದುಬ್ಬರ ಏರಿಕೆ
ನವದೆಹಲಿ: ಆಹಾರ ಪದಾರ್ಥಗಳು, ಇಂಧನ ಬೆಲೆ ಏರಿಕೆಯಿಂದಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಸಗಟು ಹಣದುಬ್ಬರ ದರವು (ಡಬ್ಲ್ಯುಪಿಐ) ಶೇಕಡ 11.39ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ತಿಳಿಸಿದೆ.ಸಗಟು ಹಣದುಬ್ಬರ ದರವು ಆಗಸ್ಟ್ನಲ್ಲಿ ಶೇ 9.92ರಷ್ಟಿತ್ತು.ಸೆಪ್ಟೆಂಬರ್ ತಿಂಗಳಿನಲ್ಲಿ ಇಂಧನ ಮತ್ತು ವಿದ್ಯುತ್ನ ಬೆಲೆ ಏರಿಕೆಯು (ಸಗಟು ಹಣದು

ನವದೆಹಲಿ: ಆಹಾರ ಪದಾರ್ಥಗಳು, ಇಂಧನ ಬೆಲೆ ಏರಿಕೆಯಿಂದಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಸಗಟು ಹಣದುಬ್ಬರ ದರವು (ಡಬ್ಲ್ಯುಪಿಐ) ಶೇಕಡ 11.39ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ತಿಳಿಸಿದೆ.ಸಗಟು ಹಣದುಬ್ಬರ ದರವು ಆಗಸ್ಟ್ನಲ್ಲಿ ಶೇ 9.92ರಷ್ಟಿತ್ತು.ಸೆಪ್ಟೆಂಬರ್ ತಿಂಗಳಿನಲ್ಲಿ ಇಂಧನ ಮತ್ತು ವಿದ್ಯುತ್ನ ಬೆಲೆ ಏರಿಕೆಯು (ಸಗಟು ಹಣದುಬ್ಬರ) ಶೇ.25.85ರಷ್ಟು ದಾಖಲಾಗಿದೆ. ಆಹಾರ ಪದಾರ್ಥಗಳ ದರವು ಶೇ 7.05ರಿಂದ ಶೇ 8.66ಕ್ಕೆ ಏರಿಕೆ ಆಗಿದೆ. ತಯಾರಿಕಾ ವಲಯದ ಸರಕುಗಳ ಬೆಲೆಯು ಶೇ 8.37ರಿಂದ ಶೇ 9.76ಕ್ಕೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.ಆಗಸ್ಟ್ ತಿಂಗಳಿನಲ್ಲಿ ಇಂಧನ ಮತ್ತು ವಿದ್ಯುತ್ನ ಬೆಲೆ ಏರಿಕೆಯು (ಸಗಟು ಹಣದುಬ್ಬರ) ಶೇ 22.93ರಷ್ಟಿತ್ತು. ಪಶ್ಚಿಮ ಏಷ್ಯಾದ ಸಂಘರ್ಷದಿಂದ ಹೊರ್ಮುಜ್ ಜಲಸಂಧಿಯಲ್ಲಿ ಸರಕುಗಳ ಸಾಗಣೆಗೆ ಅಡಚಣೆ ಉಂಟಾಗಿದ್ದರಿಂದ ಕಚ್ಚಾ ತೈಲ, ರಸಗೊಬ್ಬರ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಾಯಿತು. ಇದರಿಂದ ಪ್ರಸಕ್ತ ಆರ್ಥಿಕ ವರ್ಷದಿಂದಲೂ ಸಗಟು ಹಣದುಬ್ಬರವು ಏರಿಕೆಯ ಹಾದಿಯಲ್ಲಿದೆ.ಹಣದುಬ್ಬರ ಪ್ರಮಾಣವನ್ನು ನಿಯಂತ್ರಿಸುವ ಉದ್ದೇಶದಿಂದ ಆರ್ಬಿಐ ಕಳೆದ ವಾರ ರೆಪೊ ದರವನ್ನು ಶೇ 0.25ರಷ್ಟು ಹೆಚ್ಚು ಮಾಡಿದೆ. 2023ರ ಫೆಬ್ರುವರಿ ನಂತರದಲ್ಲಿ ಇದೇ ಮೊದಲ ಬಾರಿಗೆ ರೆಪೊ ಹೆಚ್ಚಿಸಿರುವ ಆರ್ಬಿಐ, ಅದನ್ನು ತಗ್ಗಿಸುವ ಪ್ರಶ್ನೆ ಸದ್ಯಕ್ಕಂತೂ ಇಲ್ಲ ಎಂದು ಸ್ಪಷ್ಟಪಡಿಸಿತ್ತು.ಈರುಳ್ಳಿ ಹಾಗೂ ಇತರ ಆಹಾರ ವಸ್ತುಗಳ ಬೆಲೆ ಏರಿಕೆಯ ಪರಿಣಾಮವಾಗಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಸೆಪ್ಟೆಂಬರ್ನಲ್ಲಿ ಶೇ 5.54ಕ್ಕೆ ಏರಿಕೆ ಕಂಡಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ಪ್ರಮಾಣವು ಆಗಸ್ಟ್ನಲ್ಲಿ ಶೇ 4.83ರಷ್ಟು ಇತ್ತು.