ಅಂಜನಾದ್ರಿ ದೇವಸ್ಥಾನದ ಹಕ್ಕು ವಿವಾದ: ವಿದ್ಯಾದಾಸ್ ಬಾಬಾ ವಿರುದ್ಧ ಎಫ್ಐಆರ್
ಗಂಗಾವತಿ (ಕೊಪ್ಪಳ ಜಿಲ್ಲೆ): ಹನುಮ ಜನಿಸಿದ ನಾಡು ಎಂದು ಖ್ಯಾತಿಯಾದ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ದೇವಸ್ಥಾನದ ಹಕ್ಕು ಯಾರಿಗೆ ಸೇರಿದ್ದು ಎನ್ನುವ ವಿವಾದ ಮತ್ತೆ ಮುನ್ನಲೆಗೆ ಬಂದಿದೆ.ಇತ್ತೀಚೆಗೆ ಧಾರವಾಡದ ಹೈಕೋರ್ಟ್ ಪೀಠ ವಿದ್ಯಾದಾಸ್ ಬಾಬಾ ಅವರಿಗೆ ದೇಗುಲದಲ್ಲಿ ಪೂಜೆ ಸಲ್ಲಿಸಲು ಮಾತ್ರ ಅವಕಾಶ ನೀಡಿ ಆದೇಶಿಸಿದೆ. ಆದರೆ ಬಾಬಾ ದೇವಸ್ಥಾನದ ಸಂಪೂರ್ಣ ಹೊಣೆ

ಗಂಗಾವತಿ (ಕೊಪ್ಪಳ ಜಿಲ್ಲೆ): ಹನುಮ ಜನಿಸಿದ ನಾಡು ಎಂದು ಖ್ಯಾತಿಯಾದ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ದೇವಸ್ಥಾನದ ಹಕ್ಕು ಯಾರಿಗೆ ಸೇರಿದ್ದು ಎನ್ನುವ ವಿವಾದ ಮತ್ತೆ ಮುನ್ನಲೆಗೆ ಬಂದಿದೆ.ಇತ್ತೀಚೆಗೆ ಧಾರವಾಡದ ಹೈಕೋರ್ಟ್ ಪೀಠ ವಿದ್ಯಾದಾಸ್ ಬಾಬಾ ಅವರಿಗೆ ದೇಗುಲದಲ್ಲಿ ಪೂಜೆ ಸಲ್ಲಿಸಲು ಮಾತ್ರ ಅವಕಾಶ ನೀಡಿ ಆದೇಶಿಸಿದೆ. ಆದರೆ ಬಾಬಾ ದೇವಸ್ಥಾನದ ಸಂಪೂರ್ಣ ಹೊಣೆಗಾರಿಕೆ ನನಗೆ ಸೇರಿದ್ದು ಎಂದು ತಗಾದೆ ತೆಗೆದಿದ್ದರಿಂದ ಈ ವಿವಾದ ಉಲ್ಬಣವಾಗಿದೆ. ಎರಡು ದಿನಗಳ ಹಿಂದೆ ಬಾಬಾ ‘ದೇವಸ್ಥಾನದ ಪೂಜೆ ಮಾತ್ರವಲ್ಲ; ಹೊಣೆಗಾರಿಕೆಯೂ ನನಗೇ ಸೇರಿದ್ದು’ ಎಂದು ಹೇಳಿದ್ದರು. ಶಾಂತಿಯುತವಾಗಿ ಪೂಜೆ ನೆರವೇರಿಸಬೇಕು, ಬಾಬಾಗೆ ಒಂದು ಕೊಠಡಿ ಕೊಡಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.ಬಾಬಾ ಅಂಜನಾದ್ರಿ ಬೆಟ್ಟದ ಕೆಳಭಾಗದಲ್ಲಿರುವ ವ್ಯವಸ್ಥಾಪಕ ಕಚೇರಿಗೆ ಬೀಗ ಹಾಕಿ ಅಲ್ಲಿನ ಸಿಬ್ಬಂದಿಯನ್ನು ಕಚೇರಿಯಿಂದ ಹೊರಹಾಕಿದ್ದರಿಂದ ಗಲಾಟೆ ನಡೆದಿದ್ದು, ಮಂಗಳವಾರ ಮಧ್ಯರಾತ್ರಿ ಬಾಬಾ ವಿರುದ್ಧ ಎಫ್ಐಆರ್ ದಾಖಲಾಗಿದೆ.ಗಂಗಾವತಿ ತಹಶೀಲ್ದಾರ್ ವಿನಾಯಕ ಗೋಡಬೋಲೆ ಪೊಲೀಸರಿಗೆ ದೂರು ನೀಡಿದ್ದು ‘ವಿದ್ಯಾದಾಸ್ ಬಾಬಾ ದೇವಸ್ಥಾನ ಆಡಳಿತ ಮಂಡಳಿ ಸಿಬ್ಬಂದಿಯನ್ನು ಏಕಾಏಕಿ ಕಚೇರಿಯಿಂದ ಹೊರಹಾಕಿ ವ್ಯವಸ್ಥಾಪಕರ ಕಾರ್ಯಾಲಯ ಬೀಗ ಹಾಕಿದ್ದಾರೆ. ಅಂಜನಾದ್ರಿಗೆ ನಿಮಗೆ ಯಾವುದೇ ಸಂಬಂಧವಿಲ್ಲವೆಂರು ಕಿರುಚಾಡಿದ್ದಾನೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದರಿಂದ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಹೇಳಿದ್ದಾರೆ. ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೇವಸ್ಥಾನ ಪ್ರಸ್ತುತ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿದೆ.