ಸಿನಿ ಸುದ್ದಿ: ‘ಹರಪನಹಳ್ಳಿ ಭೀಮವ್ವ‘ ಚಿತ್ರೀಕರಣಕ್ಕೆ ಚಾಲನೆ
ಹರಿದಾಸಿಣಿ ಹರಪನಹಳ್ಳಿ ಭೀಮವ್ವ ಅವರ ಜೀವನ ಆಧರಿಸಿದ ‘ಹರಪನಹಳ್ಳಿ ಭೀಮವ್ವ’ ಚಿತ್ರದ ಚಿತ್ರೀಕರಣ ಈಚೆಗೆ ಆರಂಭವಾಯಿತು. ನ್ಯಾಯಮೂರ್ತಿ ಶ್ರೀಶಾನಂದ ಅವರು ಆರಂಭ ಫಲಕ ತೋರುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.ಅಮೆರಿಕ ನಿವಾಸಿ ವೈಷ್ಣವಿಮೂರ್ತಿ ಭೀಮವ್ವನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಾತಾಂಬುಜ ಮೂವೀಸ್ ಬ್ಯಾನರ್ನಡಿ ನಿರ್ಮಾಣವಾಗುತ್ತಿರುವ ಚಿತ್ರವನ್ನು ಮಧುಸ

ಹರಿದಾಸಿಣಿ ಹರಪನಹಳ್ಳಿ ಭೀಮವ್ವ ಅವರ ಜೀವನ ಆಧರಿಸಿದ ‘ಹರಪನಹಳ್ಳಿ ಭೀಮವ್ವ’ ಚಿತ್ರದ ಚಿತ್ರೀಕರಣ ಈಚೆಗೆ ಆರಂಭವಾಯಿತು. ನ್ಯಾಯಮೂರ್ತಿ ಶ್ರೀಶಾನಂದ ಅವರು ಆರಂಭ ಫಲಕ ತೋರುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.ಅಮೆರಿಕ ನಿವಾಸಿ ವೈಷ್ಣವಿಮೂರ್ತಿ ಭೀಮವ್ವನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಾತಾಂಬುಜ ಮೂವೀಸ್ ಬ್ಯಾನರ್ನಡಿ ನಿರ್ಮಾಣವಾಗುತ್ತಿರುವ ಚಿತ್ರವನ್ನು ಮಧುಸೂದನ್ ಹವಾಲ್ದಾರ್ ನಿರ್ದೇಶಿಸುತ್ತಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಮೂಡಿಬರಲಿದೆ.ಭೀಮವ್ವ ಅವರು ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನಗಳ ಹರಿದಾಸ ಪರಂಪರೆಯ ಪ್ರಮುಖರಲ್ಲಿ ಒಬ್ಬರು. ‘ಕನ್ನಡದ ಮೀರಾಬಾಯಿ’ ಎಂದೇ ಪ್ರಸಿದ್ಧರಾದ ಅವರು ಕೃಷ್ಣನ ಪರಮಭಕ್ತೆ. ‘ಭೀಮೇಶ ಕೃಷ್ಣ’ ಅಂಕಿತನಾಮದಲ್ಲಿ 140ಕ್ಕೂ ಹೆಚ್ಚು ದೇವರನಾಮಗಳಲ್ಲದೆ, ಉಗಾಭೋಗ ಮತ್ತು ಸುಳಾದಿಗಳನ್ನು ರಚಿಸಿದ್ದಾರೆ ಎಂದು ನಿರ್ದೇಶಕರು ತಿಳಿಸಿದರು.ಭೀಮವ್ವನ ತಂದೆಯ ಪಾತ್ರದಲ್ಲಿ ಗಾಯಕ ರಾಯಚೂರು ಶೇಷಗಿರಿದಾಸ್, ಗುರುವಿನ ಪಾತ್ರದಲ್ಲಿ ಗಾಯಕ ಅನಂತ ಕುಲಕರ್ಣಿ, ಶಿಷ್ಯನ ಪಾತ್ರದಲ್ಲಿ ಗಾಯಕ ಅನಂತ ಮಿಸ್ತ್ರಿ ಹಾಗೂ ಪತಿಯ ಪಾತ್ರದಲ್ಲಿ ತ್ರಿವಿಕ್ರಮ ಜೋಶಿ ನಟಿಸುತ್ತಿದ್ದಾರೆ.ಚಿತ್ರದಲ್ಲಿ ಎಂಟು ಹಾಡುಗಳಿದ್ದು, ರಾಯಚೂರು ಶೇಷಗಿರಿದಾಸ್, ಅನಂತ ಕುಲಕರ್ಣಿ, ಅನಂತ ಮಿಸ್ತ್ರಿ ಹಾಗೂ ಮಧುಸೂದನ್ ಹವಾಲ್ದಾರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಗಾಯಕಿಯೂ ಆಗಿರುವ ವೈಷ್ಣವಿ ಅವರೇ ಹಾಡುಗಳಿಗೆ ಧ್ವನಿಯಾಗಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.261014-51-1594724604