ಬ್ಯಾಕ್ ಟು ಬ್ಯಾಕ್ ಸಿಕ್ಸ್ – ಕೊನೆಯಲ್ಲಿ ಹೊಸ ಬ್ಯಾಟ್ ತೆಗೆದು ಶತಕ ಸಿಡಿಸಿದ ಶಾಯ್ ಹೋಪ್
– ಅರ್ಧಶತಕ ಸಿಡಿಸುವ ಅವಕಾಶ ಬಿಟ್ಟು, ನಾಯಕನ ಶತಕಕ್ಕೆ ನೆರವಾದ ರುದರ್ಫೋರ್ಡ್ – ಮತ್ತೊಮ್ಮೆ ಟೀಂ ಇಂಡಿಯಾ ವಿರುದ್ಧ ವಿಂಡೀಸ್ ಅಬ್ಬರ ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ (Ind vs WI) ನಡುವಿನ 4ನೇ ಪಂದ್ಯವು ಕ್ರಿಕೆಟ್ ಫ್ಯಾನ್ಸ್ಗೆ ಹಬ್ಬವಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮ

– ಅರ್ಧಶತಕ ಸಿಡಿಸುವ ಅವಕಾಶ ಬಿಟ್ಟು, ನಾಯಕನ ಶತಕಕ್ಕೆ ನೆರವಾದ ರುದರ್ಫೋರ್ಡ್ – ಮತ್ತೊಮ್ಮೆ ಟೀಂ ಇಂಡಿಯಾ ವಿರುದ್ಧ ವಿಂಡೀಸ್ ಅಬ್ಬರ ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ (Ind vs WI) ನಡುವಿನ 4ನೇ ಪಂದ್ಯವು ಕ್ರಿಕೆಟ್ ಫ್ಯಾನ್ಸ್ಗೆ ಹಬ್ಬವಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 3 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿದ್ದು, ಎದುರಾಳಿಗೆ 248 ರನ್ಗಳ ಬೃಹತ್ ಗುರಿ ನೀಡಿದೆ. ವಿಂಡೀಸ್ ಟೀಂ ಇಂಡಿಯಾ ವಿರುದ್ಧ ಬೃಹತ್ ಮೊತ್ತ ಕಲೆಹಾಕುವ ಜೊತೆಗೆ ನಾಯಕ ಶಾಯ್ ಹೋಪ್ (Shai Hope) ಮತ್ತೊಂದು ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಬ್ಯಾಕ್ ಟು ಬ್ಯಾಕ್ 2 ಶತಕ ಸಿಡಿದ್ದ ಹೋಪ್, ಸರಣಿ ಕೊನೇ ಪಂದ್ಯದಲ್ಲಿ ಗೆಲುವನ್ನೂ ತಂದುಕೊಟ್ಟಿದ್ದರು. ಇದೀಗ ಟಿ20 ಸರಣಿಯಲ್ಲೂ ತಮ್ಮ ಆರ್ಭಟ ಮೆರೆದಿದ್ದಾರೆ. ವಿಂಡೀಸ್ ನಾಯಕ ಶಾಯ್ ಹೋಪ್ ಇಂದಿನ ಪಂದ್ಯದಲ್ಲಿ ಅಜೇಯ ಶತಕ ಸಿಡಿಸುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾಗಿದ್ದಾರೆ. ಕೊನೇ 2 ಎಸೆತಗಳು ಬಾಕಿ ಇರುವಾಗ ಹೊಸ ಬ್ಯಾಟ್ ತರಿಸಿಕೊಂಡ ಹೋಪ್, ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ ಶತಕ ಪೂರೈಸಿದರು. ಇದು ಅವರ ಅಂತಾರಾಷ್ಟ್ರೀಯ ಕ್ರಿಕೆಟ್ನ 29ನೇ ಶತಕವೂ ಆಗಿದೆ. 50 ಎಸೆತ ಎದುರಿಸಿದ ಹೋಪ್ 9 ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ ಅಜೇಯ 102 ರನ್ ಸಿಡಿಸಿದರು. 204ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಹೋಪ್ ತಂಡದ ಬೃಹತ್ ಮೊತ್ತಕ್ಕೆ ಪ್ರಮುಖ ಕೊಡುಗೆ ನೀಡಿದರು. ಇದರೊಂದಿಗೆ ಜಿವೆಲ್ ಆಂಡ್ರೂ 21, ರೋವ್ಮನ್ ಪೊವೆಲ್ 24 ರನ್ ಗಳಿಸಿದರೆ, ಶಿಮ್ರಾನ್ ಹೆಟ್ಮೇಯರ್ 12 ಎಸೆತಗಳಲ್ಲಿ ಸ್ಫೋಟಕ 33 ರನ್ ಸಿಡಿಸಿದರು. ಶರ್ಫೇನ್ ರುದರ್ಫೋರ್ಡ್ 26 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 49 ರನ್ ಗಳಿಸಿ ಮಿಂಚಿದರು. ಕೊನೇ ಓವರ್ನ 4ನೇ ಎಸೆತದಲ್ಲಿ ಕ್ರೀಸ್ನಲ್ಲಿದ್ದ ರುದರ್ಫೋರ್ಡ್ ತಮಗೆ ಅರ್ಧ ಶತಕ ಸಿಡಿಸುವ ಅವಕಾಶ ಇದ್ದರೂ, ಕ್ರೀಸ್ ಬಿಟ್ಟುಕೊಟ್ಟರು. ನಾಯಕನ ಶತಕದ ಆಟಕ್ಕೆ ನೆರವಾದರು.