ಚೆನ್ನಾಗಿ ಆಡಿದವರನ್ನೇ ಕ್ಯಾಪ್ಟನ್ಸಿ ಓಟದಿಂದ ತೆಗೆಯೋದು ಸರಿಯಲ್ಲ – ಆಸಿಯಾ ಪರ ನಿಂತ ಸ್ಯಾಂಡಿ
BBK 13: ಬಿಗ್ಬಾಸ್ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ (Bigg Boss 13) ಆಸಿಯಾರನ್ನ ತಮ್ಮದ್ದೇ ಟೀಮ್ನವರು ಕ್ಯಾಪ್ಟನ್ಸಿ ಓಟದಿಂದ ಹೊರಗಿಟ್ಟಿದ್ದಕ್ಕೆ ಸೌಂದರ್ಯ ಶೆಟ್ಟಿ ಗರಂ ಆಗಿದ್ದಾರೆ. ಬಿಗ್ಬಾಸ್ ವಾರದ ಕ್ಯಾಪ್ಟನ್ ಆಯ್ಕೆಗೆ ಟಾಸ್ಕ್ವೊಂದನ್ನು ನೀಡಿದ್ದರು. ಟಾಸ್ಕ್ಗಳಿಗೋಸ್ಕರ ಈಗಾಗಲೇ ಮನೆಯಲ್ಲಿ ಸ್ಪರ್ಧಿಗಳು ಎರಡು ಟೀಮ್ ಆಗಿವೆ. ʻಪಜಲ್ ಪೈಪೋಟಿʼ ಟಾಸ್ಕ್

BBK 13: ಬಿಗ್ಬಾಸ್ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ (Bigg Boss 13) ಆಸಿಯಾರನ್ನ ತಮ್ಮದ್ದೇ ಟೀಮ್ನವರು ಕ್ಯಾಪ್ಟನ್ಸಿ ಓಟದಿಂದ ಹೊರಗಿಟ್ಟಿದ್ದಕ್ಕೆ ಸೌಂದರ್ಯ ಶೆಟ್ಟಿ ಗರಂ ಆಗಿದ್ದಾರೆ. ಬಿಗ್ಬಾಸ್ ವಾರದ ಕ್ಯಾಪ್ಟನ್ ಆಯ್ಕೆಗೆ ಟಾಸ್ಕ್ವೊಂದನ್ನು ನೀಡಿದ್ದರು. ಟಾಸ್ಕ್ಗಳಿಗೋಸ್ಕರ ಈಗಾಗಲೇ ಮನೆಯಲ್ಲಿ ಸ್ಪರ್ಧಿಗಳು ಎರಡು ಟೀಮ್ ಆಗಿವೆ. ʻಪಜಲ್ ಪೈಪೋಟಿʼ ಟಾಸ್ಕ್ನಲ್ಲಿ ಎರಡು ಟೀಮ್ಗಳು ಭಾರಿ ಕಾಂಪಿಟೇಷನ್ ಕೊಟ್ಟಿವೆ. ಇದರಲ್ಲಿ ಸೋತ ʻಒಂಟಿ ಪಂಟರ್ಸ್ʼ ತಂಡಕ್ಕೆ ಒಬ್ಬ ಸ್ಪರ್ಧಿಯನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗಿಡುವಂತೆ ಸೂಚಿಸಲಾಯಿತು. ಟೀಮ್ನಲ್ಲಿದ್ದ ಕಂಟೆಸ್ಟಂಟ್ಗಳೆಲ್ಲ ಸೇರಿ ಆಸಿಯಾರನ್ನು ಹೊರಗಿಡುತ್ತಾರೆ. ಆಟದ ಮಧ್ಯೆ ನೀವು ಸೋಲೊಪ್ಪಿಕೊಳ್ಳುತ್ತಿದ್ದೀರಾ ಎಂದು ತಮ್ಮದೇ ತಂಡದವರು ಆಸಿಯಾರನ್ನ ಕ್ಯಾಪ್ಟನ್ಸಿ ರೇಸ್ನಿಂದ ಹೊರಗಿಡುತ್ತಾರೆ. ಸ್ಪರ್ಧಿಗಳು ನೀಡಿದ ಕಾರಣಗಳನ್ನು ಒಪ್ಪಿಕೊಳ್ಳದೇ ಇದ್ದರೂ, ತಮ್ಮನ್ನು ಹೊರಗಿಡಲು ಉಳಿದ ಕಂಟೆಸ್ಟಂಟ್ಗಳು ಒಪ್ಪಿದಾಗ ಆಸಿಯಾ ಸುಮ್ಮನಾಗುತ್ತಾರೆ. ಆಸಿಯಾ ಪರ ನಿಂತ ಸೌಂದರ್ಯ ತಮ್ಮದೇ ತಂಡದ ಆಟಗಾರರೆಲ್ಲ ಜೊತೆಗೂಡಿ ಆಸಿಯಾರನ್ನು ಹೊರಗಿಟ್ಟರೂ ಎದುರಾಳಿ ತಂಡದ ಸೌಂದರ್ಯ ಮಾತ್ರ ಈ ಕುರಿತು ಆಸಿಯಾ ಪರ ನಿಲ್ಲುತ್ತಾರೆ. ಚೆನ್ನಾಗಿ ಆಡಿದವರನ್ನು ಆಟದಿಂದ ಹೊರಗಿಡುವುದು ತಪ್ಪು, ನೀವೆಲ್ಲಾ ಬಹುಮತದಿಂದ ಆಕೆಯನ್ನ ರೇಸ್ನಿಂದ ಹೊರಗೆ ಹಾಕಿದ್ದೀರಲ್ಲಾ, ಅವಳು ಒಬ್ಬಳು ಆರ್ಟಿಸ್ಟ್ ಅವಳ ಮುಖ ಎಲ್ಲಾ ಗಾಯವಾಗಿದೆ. ಈ ರೀತಿ ಮಾಡೋದು ಸರಿ ಅಲ್ಲ ಎಂದು ಸೌಂದರ್ಯ ಎಚ್ಚರಿಸಿದ್ದಾರೆ.ಇದನ್ನೂ ಓದಿ: ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ ಚಿತ್ರದ ಫಸ್ಟ್ ಲುಕ್ ಅನಾವರಣ ಇಷ್ಟೆಲ್ಲಾ ಮಾತುಗಳ ಬಳಿಕವೂ ಆಸಿಯಾ ಒಪ್ಪಿಕೊಂಡು ಕ್ಯಾಪ್ಟನ್ಸಿ ರೇಸ್ನಿಂದ ಹೊರಗುಳಿಯಲು ಬೇಜಾರಿನಲ್ಲೇ ಒಪ್ಪಿಕೊಂಡಿದ್ದಾರೆ. ಈ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಆಸಿಯಾ ಪರ ಸೌಂದರ್ಯ ಸ್ಟ್ಯಾಂಡ್ ತೆಗೆದುಕೊಂಡಿದ್ದಕ್ಕೆ ನೆಟ್ಟಿಗರು ಸೈ ಎಂದಿದ್ದಾರೆ.ಇದನ್ನೂ ಓದಿ: ಹೆಣ್ಮಕ್ಕಳ ಬಗ್ಗೆ ಹೀಗ್ ಮಾತಾಡ್ದ ಅಂತೀರಲ್ಲ.. ನನಗೆ ಎಷ್ಟು ಅವಮಾನ ಮಾಡಿದ್ದಾರೆ ಗೊತ್ತಾ? – ಮಾಡರ್ನ್ ಮಹಾಕವಿ ಮಂಜ