ಏರ್ ಇಂಡಿಯಾ ವಿಮಾನದಲ್ಲಿ ಹೈಜಾಕ್ ಆತಂಕ: ಜೈಪುರದಲ್ಲಿ ತುರ್ತು ಲ್ಯಾಂಡಿಂಗ್
ನವದೆಹಲಿ: ಜರ್ಮನಿಯ ಫ್ರಾಂಕ್ಫರ್ಟ್ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನ ಅಪಹರಣ (Hijack) ಎಚ್ಚರಿಕೆ ಸಂದೇಶ ರವಾನಿಸಿದ್ದರಿಂದ ಜೈಪುರ ವಿಮಾನ ನಿಲ್ದಾಣದಲ್ಲಿ(Jaipur Airport) ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಫ್ರಾಂಕ್ಫರ್ಟ್ನಿಂದ ದೆಹಲಿಗೆ ಬರುತ್ತಿದ್ದ ಎಐ-2030 (AI-2030) ವಿಮಾನವು ಮಾರ್ಗಮಧ್ಯದಲ್ಲಿದ್ದಾಗ, ಅಹಮದಾಬಾದ್ನ ಏರ್ ಟ್

ನವದೆಹಲಿ: ಜರ್ಮನಿಯ ಫ್ರಾಂಕ್ಫರ್ಟ್ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನ ಅಪಹರಣ (Hijack) ಎಚ್ಚರಿಕೆ ಸಂದೇಶ ರವಾನಿಸಿದ್ದರಿಂದ ಜೈಪುರ ವಿಮಾನ ನಿಲ್ದಾಣದಲ್ಲಿ(Jaipur Airport) ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಫ್ರಾಂಕ್ಫರ್ಟ್ನಿಂದ ದೆಹಲಿಗೆ ಬರುತ್ತಿದ್ದ ಎಐ-2030 (AI-2030) ವಿಮಾನವು ಮಾರ್ಗಮಧ್ಯದಲ್ಲಿದ್ದಾಗ, ಅಹಮದಾಬಾದ್ನ ಏರ್ ಟ್ರಾಫಿಕ್ ಕಂಟ್ರೋಲ್ಗೆ (ಎಟಿಸಿ) ಕೆಲವೇ ಸೆಕೆಂಡುಗಳ ಕಾಲ ‘ಸ್ಕ್ವಾಕ್-7500’ (Squawk-7500) ಎಚ್ಚರಿಕೆಯ ಸಂಕೇತ ಬಂದಿದೆ. ಕೂಡಲೇ ಎಚ್ಚೆತ್ತ ಭದ್ರತಾ ಸಂಸ್ಥೆಗಳು ವಿಮಾನವನ್ನು ಜೈಪುರ ವಿಮಾನ ನಿಲ್ದಾಣದತ್ತ ತಿರುಗಿಸಿದವು. ಬೆಳಿಗ್ಗೆ ಸುಮಾರು 9:45ಕ್ಕೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ತಕ್ಷಣ, ಭದ್ರತಾ ಶಿಷ್ಟಾಚಾರದ ಭಾಗವಾಗಿ ಅದನ್ನು ಪ್ರತ್ಯೇಕ ಐಸೊಲೇಷನ್ ಬೇಗೆ (Isolation Bay) ಕೊಂಡೊಯ್ಯಲಾಯಿತು. ಪೈಲಟ್ ಆಕಸ್ಮಿಕವಾಗಿ ಅಪಹರಣ ಎಚ್ಚರಿಕೆಯ ಬಟನ್ ಒತ್ತಿದ್ದೇ ಈ ಗೊಂದಲಕ್ಕೆ ಕಾರಣ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ. ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ಸಮಗ್ರ ಭದ್ರತಾ ತಪಾಸಣೆಗಳು ಪೂರ್ಣಗೊಂಡ ನಂತರ, ಅದೇ ವಿಮಾನದಲ್ಲಿ ಪ್ರಯಾಣಿಕರನ್ನು ಮರಳಿ ದೆಹಲಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಯಿತು. ಏನಿದು ‘ಸ್ಕ್ವಾಕ್ 7500’? ವಿಮಾನಯಾನ ಕ್ಷೇತ್ರದಲ್ಲಿ ‘ಸ್ಕ್ವಾಕ್ 7500’ ಎಂಬುದು ವಿಮಾನ ಅಪಹರಣ ಅಥವಾ ಕಾನೂನುಬಾಹಿರವಾಗಿ ವಿಮಾನವನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಎಟಿಸಿಗೆ ರವಾನಿಸುವ ಅಂತಾರಾಷ್ಟ್ರೀಯ ಟ್ರಾನ್ಸ್ಪಾಂಡರ್ ಕೋಡ್ ಆಗಿದೆ. ಇಂತಹ ತುರ್ತು ಪರಿಸ್ಥಿತಿಯ ಎಚ್ಚರಿಕೆ ಬಂದಾಗ ಇತರ ವಿಮಾನಗಳಿಗೆ ತೊಂದರೆಯಾಗದಂತೆ ಹಾಗೂ ತಪಾಸಣೆಗೆ ಅನುಕೂಲವಾಗುವಂತೆ ವಿಮಾನವನ್ನು ಪ್ರತ್ಯೇಕ ಜಾಗದಲ್ಲಿ (ಐಸೊಲೇಷನ್ ಬೇ) ನಿಲ್ಲಿಸಲಾಗುತ್ತದೆ.