‘ಸಿ.ಎಂ. ಕಪ್’ ದಸರಾ ಕ್ರೀಡಾಕೂಟ: ಎರಡನೇ ದಿನ ಆರು ದಾಖಲೆ
ಮೈಸೂರು: ಬೆಂಗಳೂರು ನಗರ ವಿಭಾಗದ ವೈಭವ್ ಪಾಟೀಲ ಅವರು ‘ಸಿ.ಎಂ. ಕಪ್’ ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್ನಲ್ಲಿ ಮಂಗಳವಾರ ಪುರುಷರ 5,000 ಮೀ. ಓಟವನ್ನು 15 ನಿಮಿಷ 00.8 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಎರಡು ದಿನಗಳಲ್ಲಿ ಎರಡನೇ ದಾಖಲೆ ಬರೆದರು. ಇದೇ ತಂಡದ ಪ್ರಸನ್ನಕುಮಾರ್ ವಿ.ಎಂ. ‘ಸ್ಪ್ರಿಂಟ್ ಡಬಲ್’ ಪೂರೈಸಿದರು.ವೈಭವ್, ಮೊದಲ ದಿನ 1,500 ಮೀ. ಓಟದಲ್ಲೂ ದಾಖಲೆ

ಮೈಸೂರು: ಬೆಂಗಳೂರು ನಗರ ವಿಭಾಗದ ವೈಭವ್ ಪಾಟೀಲ ಅವರು ‘ಸಿ.ಎಂ. ಕಪ್’ ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್ನಲ್ಲಿ ಮಂಗಳವಾರ ಪುರುಷರ 5,000 ಮೀ. ಓಟವನ್ನು 15 ನಿಮಿಷ 00.8 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಎರಡು ದಿನಗಳಲ್ಲಿ ಎರಡನೇ ದಾಖಲೆ ಬರೆದರು. ಇದೇ ತಂಡದ ಪ್ರಸನ್ನಕುಮಾರ್ ವಿ.ಎಂ. ‘ಸ್ಪ್ರಿಂಟ್ ಡಬಲ್’ ಪೂರೈಸಿದರು.ವೈಭವ್, ಮೊದಲ ದಿನ 1,500 ಮೀ. ಓಟದಲ್ಲೂ ದಾಖಲೆ ಸ್ಥಾಪಿಸಿದ್ದರು. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಟದ ಎರಡನೇ ದಿನ ಆರು ಕೂಟ ದಾಖಲೆಗಳು ನಿರ್ಮಾಣವಾದವು.200 ಮೀ. ಓಟದಲ್ಲಿ ಪ್ರಸನ್ನಕುಮಾರ್ (21.35 ಸೆ.) ದಾಖಲೆ ಬರೆದರು. ಸೋಮವಾರ 100 ಮೀ. ಓಟದಲ್ಲೂ ಅವರು ದಾಖಲೆ ನಿರ್ಮಿಸಿದ್ದರು. 110 ಮೀ. ಹರ್ಡಲ್ಸ್ನಲ್ಲಿ ಮೈಸೂರಿನ ತೇಜಲ್ ಕೆ.ಆರ್. (15.10 ಸೆ.) ಕೂಟ ದಾಖಲೆ ತಮ್ಮದಾಗಿಸಿಕೊಂಡರು. 4x400 ಮೀ. ರಿಲೇಯಲ್ಲಿ ಬೆಂಗಳೂರು ನಗರ ಪುರುಷರ ತಂಡವು 3:14.30 ಸೆಕೆಂಡ್ಗಳಲ್ಲಿ ಗುರಿ ತಲುಪಿ, ಬೆಂಗಳೂರು ಗ್ರಾಮಾಂತರ ತಂಡವು (3:16.84) 2025ರಲ್ಲಿ ಸ್ಥಾಪಿಸಿದ್ದ ದಾಖಲೆಯನ್ನು ಅಳಿಸಿಹಾಕಿತು.ಮಹಿಳೆಯರ 800 ಮೀ. ಓಟದಲ್ಲಿ ಬೆಳಗಾವಿಯ ಪ್ರಿಯಾಂಕಾ ಎಂ. ಓಲೇಕಾರ್ (2:10.77) ಹಾಗೂ ಲಾಂಗ್ ಜಂಪ್ನಲ್ಲಿ ಮೈಸೂರಿನ ಶ್ರೀದೇವಿಕಾ ವಿ.ಎಸ್. (5.73 ಮೀ.) ಕೂಟ ದಾಖಲೆ ಬರೆದು ಮಿಂಚಿದರು.ಎರಡನೇ ದಿನದ ಫಲಿತಾಂಶ: ಅಥ್ಲೆಟಿಕ್ಸ್: ಪುರುಷರು: 110 ಮೀ. ಹರ್ಡಲ್ಸ್: ತೇಜಲ್ ಕೆ.ಆರ್. (ಮೈಸೂರು, ಕಾಲ: 15.10 ಸೆ.)–1, ಸಂತೋಷ್ ಕುಮಾರ್ ಆರ್. (ಬೆಂಗಳೂರು ನಗರ)–2, ಕೆ. ರಾಕೇಶ್ (ಕಲಬುರಗಿ)–3; 200 ಮೀ. ಓಟ: ಪ್ರಸನ್ನಕುಮಾರ್ ವಿ.ಎಂ. (ಬೆಂಗಳೂರು ನಗರ, ಕಾಲ: 21.35 ಸೆ.)–1, ಎಸ್.ಆರ್. ಆಯುಷ್ (ಬೆಂಗಳೂರು ಗ್ರಾ.)–2, ಎನ್. ಶಿವಕುಮಾರ್ (ಬೆಂಗಳೂರು ನಗರ)–3;.800 ಮೀ. ಓಟ: ಯಶವಂತ್ ಕೆ. (ಮೈಸೂರು, ಕಾಲ: 1 ನಿಮಿಷ, 53.33 ಸೆಕೆಂಡ್)–1, ಕರಿಷನ್ ರಾಥೋಡ್ (ಬೆಂಗಳೂರು ನಗರ)–2, ರಘುವೀರ್ ಎಲ್. (ಬೆಂಗಳೂರು ಗ್ರಾಮಾಂತರ)–3; 5,000 ಮೀ. ಓಟ: ವೈಭವ್ ಪಾಟೀಲ (ಬೆಂಗಳೂರು ನಗರ. ಕಾಲ: 15 ನಿ, 00.8 ಸೆ)–1, ಬಾಳು ಹೆದ್ರಿ (ಬೆಳಗಾವಿ)–2, ಯಶವಂತ್ ಎಂ. (ಬೆಂಗಳೂರು ಗ್ರಾ.)–3.ಲಾಂಗ್ಜಂಪ್: ಜಾಫರ್ ಖಾನ್ ಎಸ್. (ಬೆಳಗಾವಿ, ದೂರ: 7.14 ಮೀಟರ್ )–1, ನವೀನ್ ಬಿ. (ಬೆಂಗಳೂರು ನಗರ)–2, ಪೃಥ್ವಿ ಸೆರೆಗಾರ (ಬೆಂಗಳೂರು ನಗರ)–3; ಶಾಟ್ಪಟ್: ಪ್ರಜ್ವಲ್ ಎಂ. ಶೆಟ್ಟಿ (ಮೈಸೂರು, ದೂರ: 16.59 ಮೀ. )–1, ಮೊಹಮ್ಮದ್ ಸಕ್ಲೇನ್ ಅಹ್ಮದ್ (ಮೈಸೂರು)–2, ಮನೋಜ್ ಎ.ಎಸ್. (ಬೆಂಗಳೂರು ನಗರ)–3; 4×400 ಮೀ. ರಿಲೇ: ಬೆಂಗಳೂರು ನಗರ ತಂಡ (ಕಾಲ: 3 ನಿ, 14.30 ಸೆ)–1, ಮೈಸೂರು–2, ಬೆಳಗಾವಿ–3.ಮಹಿಳೆಯರು:100 ಮೀ. ಹರ್ಡಲ್ಸ್: ಅಕ್ಷತಾ (ಮೈಸೂರು, ಕಾಲ: 14.98 ಸೆಕೆಂಡ್)–1, ಸ್ನೇಹಾ ಹುಡೇದ (ಬೆಳಗಾವಿ)–2, ಪೂರ್ಣಿಮಾ ವಿ. (ಬೆಂಗಳೂರು ಗ್ರಾಮಾಂತರ)–3; 800 ಮೀ. ಓಟ: ಪ್ರಿಯಾಂಕಾ ಓಲೇಕಾರ್ (ಬೆಳಗಾವಿ, ಕಾಲ: 2 ನಿ, 10.77 ಸೆ)–1, ಶಿಲ್ಪಾ ಹೊಸಮನಿ (ಬೆಳಗಾವಿ)–2, ರೇಖಾ ಬಸಪ್ಪ ಫಿರೋಜಿ (ಮೈಸೂರು)–3; 3,000 ಮೀ. ಓಟ: ಚರಿಷ್ಮಾ (ಮೈಸೂರು, ಕಾಲ: 10 ನಿ, 44.3 ಸೆ)–1, ಅಂಕಿತಾ ಯಾದವ್ (ಬೆಳಗಾವಿ)–2, ಐಶ್ವರ್ಯ ಆರ್.ಎಂ. (ಬೆಂಗಳೂರು ನಗರ)–3.ಲಾಂಗ್ ಜಂಪ್: ಶ್ರೀದೇವಿಕಾ ವಿ.ಎಸ್. (ಮೈಸೂರು, ದೂರ: 5.73 ಮೀಟರ್ )–1, ಪ್ರಾಪ್ತಿ ಆರ್.ವೈ. (ಬೆಂಗಳೂರು ಗ್ರಾ.)–2, ಐಶ್ವರ್ಯಾ ನೇಸರಕರ್ (ಬೆಳಗಾವಿ)–3; ಶಾಟ್ಪಟ್: ಅಂಬಿಕಾ ವಿ. (ಬೆಂಗಳೂರು ನಗರ. ದೂರ: 13.88 ಮೀ)–1, ಮೋದಿನಿ ಜನಾರ್ಧನ್ (ಬೆಂಗಳೂರು ನಗರ)–2, ಆಕಾಂಕ್ಷಾ ಎಸ್.ಪಿ. ಕೆಂಜ (ಮೈಸೂರು)–3; 4×400 ಮೀ. ರಿಲೇ: ಬೆಳಗಾವಿ ತಂಡ (ಕಾಲ: 3 ನಿ, 55.10 ಸೆ)–1, ಮೈಸೂರು–2, ಬೆಂಗಳೂರು ಗ್ರಾಮಾಂತರ–3.ಮಹಿಳೆಯರ ಲಾಂಗ್ಜಂಪ್ನಲ್ಲಿ ಚಿನ್ನ ಗೆದ್ದ ವಿ.ಎಸ್. ಶ್ರೀದೇವಿಕಾ ಜಿಗಿತದ ಪರಿ –ಪ್ರಜಾವಾಣಿ ಚಿತ್ರ/ಅನೂಪ್ ರಾಘ ಟಿ.