ಬಾಗೇಪಲ್ಲಿ: ಮೈಸೂರು ವೈಭವ ಸಾರುವ ಗೊಂಬೆಗಳ ಪ್ರದರ್ಶನ
ಬಾಗೇಪಲ್ಲಿ: ದಸರಾ ಹಬ್ಬದ ಪ್ರಯುಕ್ತ ಪಟ್ಟಣದ ಶಂಕರಮಠದ ಬಳಿಯ ಮನೆಯೊಂದರಲ್ಲಿ ಮೈಸೂರು ವೈಭವ ಸಾರುವ, ರಾಜ ಮಹಾರಾಜರ ದರ್ಬಾರ್, ಅಷ್ಟದುರ್ಗೆಯರು ಸೇರಿದಂತೆ ವಿವಿಧ ಬಣ್ಣದ ಚೆಂದದ ಗೊಂಬೆಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.ನವರಾತ್ರಿ ವೇಳೆ ಅಷ್ಟಲಕ್ಷ್ಮಿಯರಿಗೆ ಪೂಜಿಸಲಾಗುತ್ತದೆ. ವಿಜಯ ನಗರ ಸಾಮ್ರಾಜ್ಯದ ಕಾಲದಿಂದ ನಡೆದುಬಂದ ಮೈಸೂರು ದಸರಾ ಹಬ್ಬಕ್ಕೆ ಗೊಂಬೆ ಕೂರಿಸ

ಬಾಗೇಪಲ್ಲಿ: ದಸರಾ ಹಬ್ಬದ ಪ್ರಯುಕ್ತ ಪಟ್ಟಣದ ಶಂಕರಮಠದ ಬಳಿಯ ಮನೆಯೊಂದರಲ್ಲಿ ಮೈಸೂರು ವೈಭವ ಸಾರುವ, ರಾಜ ಮಹಾರಾಜರ ದರ್ಬಾರ್, ಅಷ್ಟದುರ್ಗೆಯರು ಸೇರಿದಂತೆ ವಿವಿಧ ಬಣ್ಣದ ಚೆಂದದ ಗೊಂಬೆಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.ನವರಾತ್ರಿ ವೇಳೆ ಅಷ್ಟಲಕ್ಷ್ಮಿಯರಿಗೆ ಪೂಜಿಸಲಾಗುತ್ತದೆ. ವಿಜಯ ನಗರ ಸಾಮ್ರಾಜ್ಯದ ಕಾಲದಿಂದ ನಡೆದುಬಂದ ಮೈಸೂರು ದಸರಾ ಹಬ್ಬಕ್ಕೆ ಗೊಂಬೆ ಕೂರಿಸುವ ಸಂಪ್ರದಾಯವನ್ನು ಇಂದಿಗೂ ಕೆಲವರು ರೂಢಿಸಿಕೊಂಡಿದ್ದಾರೆ. ಬಣ್ಣದ ಗೊಂಬೆಗಳನ್ನು ಸಂಗ್ರಹ ಮಾಡುತ್ತಾರೆ. ಮನೆಗಳನ್ನು ಸ್ವಚ್ಛ ಮಾಡಿ ಗೊಂಬೆಗಳ ಪ್ರದರ್ಶನಕ್ಕೆ ಸೂಕ್ತ ವೇದಿಕೆ, ವಿದ್ಯುತ್ ದೀಪಾಲಂಕಾರ, ತಳಿರು ತೋರಣಗಳಿಂದ ಸಿಂಗರಿಸಿ 9 ದಿನ ಪೂಜಿಸುವ ಸಂಪ್ರದಾಯವನ್ನು ಹಲವರು ರೂಢಿಸಿಕೊಂಡಿದ್ದಾರೆ.ಪಟ್ಟಣದ ಶಂಕರ ಮಠದ ಮುಂಭಾಗದ ಜಲಜಾ ರಾಮಚಂದ್ರ ಅವರು 27 ವರ್ಷಗಳಿಂದ ದಸರಾ ಹಬ್ಬದ ನವರಾತ್ರಿಗಳಲ್ಲಿ ಗೊಂಬೆ ಪ್ರದರ್ಶನ ಮಾಡಿಕೊಂಡು ಬರುತ್ತಿದ್ದಾರೆ. ಮೈಸೂರು ಗತವೈಭದ ರಾಜದರ್ಬಾರ್, ರಾಜ, ರಾಣಿಯರ ಅರಮನೆ, ಬನ್ನಿ ಮಂಟಪದ ಪೂಜೆ, ಎತ್ತು, ಕುದುರೆ, ಒಂಟೆ ಮತ್ತು ವಾಹನಗಳು, ಆಯುಧಗಳಿಗೆ ಪೂಜಿಸುವ, ಅಷ್ಟಲಕ್ಷ್ಮಿಯರು, ಅಷ್ಟದುರ್ಗೆಯರ ಬಣ್ಣದ ಗೊಂಬೆಗಳನ್ನು ಪ್ರದರ್ಶಿಸಿದ್ದಾರೆ.ಇತಿಹಾಸ ವೈಭವದ ಸ್ವಾತಂತ್ರ್ಯ ಹೋರಾಟಗಾರರು, ತಿರುಮಲ ತಿರುಪತಿ ವೆಂಕಟೇಶ್ವರನ ಸನ್ನಿಧಿ, ಶಿರಿಡಿ ಸಾಯಿಬಾಬಾ, ದತ್ತಾತ್ರೇಯ, ಲಕ್ಷ್ಮಿ, ಪಾರ್ವತಿ, ಬ್ರಹ್ಮ, ವಿಷ್ಣು, ಮಹೇಶ್ವರ ಸೇರಿ ವಿವಿಧ ದೇವರ ಬೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಋಷಿಮುನಿಗಳು, ಯಜ್ಞಾದಿಗಳ, ಬುದ್ಧ, ಬಸವಣ್ಣ, ಶಿವಲಿಂಗ ದರ್ಶನ, ಕೃಷ್ಣ, ರುಕ್ಮಿಣಿ, ಹೂವು, ಹಣ್ಣಿನ ಕಲಾಕೃತಿಗಳು ಮತ್ತು ಗೊಂಬೆಗಳನ್ನು ಇಡಲಾಗಿದೆ. ನಾಗಲಿಂಗ ದರ್ಶನ, ದಶಾವತಾರ, ಅಶ್ವಮೇಧ ಯಾಗ, ವೈಕುಂಠ, ಮದುವೆ ಮಂಟಪಗಳು, ಸಿರಿಧಾನ್ಯ ಪ್ರದರ್ಶಿಸಲಾಗಿದೆ.ಅಷ್ಟಲಕ್ಷ್ಮಿಯವರು, ದುರ್ಗೆಯರ ಗೊಂಬೆಗಳಿಗೆ 9 ದಿನ ಬೆಳಗ್ಗೆ, ಸಂಜೆ ಕುಂಕುಮಾರ್ಚನೆ, ಭಜನೆ, ದೇವಿಯ ಅಷ್ಟೋತ್ತರಗಳು, ಲಲಿತಾ ಸಹಸ್ತ್ರನಾಮ ಮತ್ತು ಭಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ ಪೂಜೆಗೆ ನೆರೆಹೊರೆಯವರು, ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ, ಅರಿಸಿನ, ಕುಂಕುಮ, ತಾಂಬೂಲ, ಪ್ರಸಾದ ಮತ್ತು ಮಡಿ ತುಂಬಿಸುವ ಸಂಪ್ರದಾಯವನ್ನು ಜಲಜಾರಾಮಚಂದ್ರ ಕುಟುಂಬದವರು ಪಾಲಿಸುತ್ತಾರೆ. ಸಂಜೆ ಮಹಿಳೆಯರು, ಹೆಣ್ಣುಮಕ್ಕಳು ಗೊಂಬೆಗಳಿಗೆ ಹಾಡಿನೊಂದಿಗೆ ದೀಪಗಳನ್ನು ಬೆಳಗುತ್ತಾರೆ.ಚಿಕ್ಕಬಳ್ಳಾಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮೀಜಿ ಪೂರ್ಣಾನಂದ ಪ್ರವಚನ ನೀಡಿ, ‘ಮೈಸೂರು ದಸರಾ ಹಬ್ಬದಲ್ಲಿ ಗೊಂಬೆಗಳ ಪ್ರದರ್ಶನವು ನಾಡಿನ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಗೊಂಬೆಗಳ ಪ್ರದರ್ಶನವು ಅನೇಕ ಗತಕಾಲದ ವೈಭವ ಸಾರಲಿದೆ’ ಎಂದು ಹೇಳಿದರು.261015-16-1329238744