ಇಳುವರಿ ವೃದ್ಧಿಸಲು ಪಲ್ಸ್ ಮ್ಯಾಜಿಕ್ ಸಿಂಪರಣೆ ಅತ್ಯಂತ ಉಪಯುಕ್ತ: ತಜ್ಞರ ಸಲಹೆ
ಸಂತೇಬೆನ್ನೂರು: ‘ತೊಗರಿ ಬೆಳೆಯಲ್ಲಿ ಇಳುವರಿ ವೃದ್ಧಿಸಲು ಪಲ್ಸ್ ಮ್ಯಾಜಿಕ್ ಸಿಂಪರಣೆ ಅತ್ಯಂತ ಉಪಯುಕ್ತ’ ಎಂದು ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಒ. ಮಲ್ಲಿಕಾರ್ಜುನ್ ಸಲಹೆ ನೀಡಿದರು.ಸಮೀಪದ ನೀತಿಗೆರೆ ಗ್ರಾಮದ ಜಮೀನಿನಲ್ಲಿ ಮಂಗಳವಾರ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ದೇವರಹಳ್ಳಿ ರೈತ ಸಂಪರ್ಕ ಕೇಂದ್ರದ ಸಹಯೋಗದಲ್ಲಿ ಪರಿಶ

ಸಂತೇಬೆನ್ನೂರು: ‘ತೊಗರಿ ಬೆಳೆಯಲ್ಲಿ ಇಳುವರಿ ವೃದ್ಧಿಸಲು ಪಲ್ಸ್ ಮ್ಯಾಜಿಕ್ ಸಿಂಪರಣೆ ಅತ್ಯಂತ ಉಪಯುಕ್ತ’ ಎಂದು ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಒ. ಮಲ್ಲಿಕಾರ್ಜುನ್ ಸಲಹೆ ನೀಡಿದರು.ಸಮೀಪದ ನೀತಿಗೆರೆ ಗ್ರಾಮದ ಜಮೀನಿನಲ್ಲಿ ಮಂಗಳವಾರ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ದೇವರಹಳ್ಳಿ ರೈತ ಸಂಪರ್ಕ ಕೇಂದ್ರದ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಯೋಜನೆ ಅಡಿಯಲ್ಲಿ ಅಂತರ ಬೆಳೆ ತೊಗರಿಗೆ ಮುಂಚೂಣಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.‘ತೊಗರಿ ಬೆಳೆ ಶೇ 50ರಷ್ಟು ಹೂ ಬಿಡುವ ಹಂತದಲ್ಲಿದ್ದಾಗ ಪ್ರತಿ ಲೀಟರ್ ನೀರಿಗೆ ಪಲ್ಸ್ ಮ್ಯಾಜಿಕ್ ಅನ್ನು 8 ರಿಂದ 10 ಗ್ರಾಂ ಹಾಗೂ ಸಸ್ಯ ಪ್ರಚೋದಕ 0.4 ಗ್ರಾಂ ಬೆರೆಸಿ ಸಿಂಪಡಿಸಬೇಕು. ಇದರಿಂದ ಹೂವು ಹಾಗೂ ಕಾಯಿ ಉತ್ತಮವಾಗಿ ಹಿಡಿಯುತ್ತದೆ. ಮೊದಲ ಸಿಂಪಡಣೆ ಮಾಡಿದ 15 ದಿನಗಳ ನಂತರ ಪುನಃ ಸಿಂಪಡಿಸಬಹುದು’ ಎಂದು ಮಾಹಿತಿ ನೀಡಿದರು.‘ತೊಗರಿ ಕಾಯಿ ಕೊರೆಯುವ ಹುಳುವಿನ ಬಾಧೆ ಕಂಡು ಬಂದಿದೆ. ನಿಯಂತ್ರಣಕ್ಕೆ ಎಮಾಮೆಕ್ಟಿನ್ ಬೆಂಜೋಯೇಟ್ ಅನ್ನು ಪ್ರತಿ ಲೀಟರ್ಗೆ 0.5 ಗ್ರಾಂ.ನಂತೆ ಸಿಂಪಡಿಸಬೇಕು’ ಎಂದು ತೋಟಗಾರಿಕಾ ತಜ್ಞ ಬಸವನಗೌಡ ಎಂ.ಜಿ. ತಿಳಿಸಿದರು.ಕೃಷಿ ಅಧಿಕಾರಿ ಕುಮಾರ್, ಕೃಷಿ ಸಖಿ ಚಂದ್ರಕಲಾ ಹಾಗೂ ರೈತರು ಇದ್ದರು.261015-43-931667788