ಕತಾರ್ನಲ್ಲಿ ನ. 6ರಂದು ‘ಕರುನಾಡ ವೈಭವ–2026’: ನಟಿ ಉಮಾಶ್ರೀಗೆ ಸನ್ಮಾನ
ದೋಹಾ: ಕರ್ನಾಟಕ ಸಂಘ ಕತಾರ್ ವತಿಯಿಂದ ನವೆಂಬರ್ 6ರಂದು ‘ಕರುನಾಡ ವೈಭವ–2026’ ಕಾರ್ಯಕ್ರಮ ಆಯೋಜಿಸಲಾಗಿದೆ. ದೋಹಾದ ಅಲ್ ವಕ್ರಾದಲ್ಲಿರುವ ಡಿಪಿಎಸ್ ಎಂಐಎಸ್ ಆಡಿಟೋರಿಯಂನಲ್ಲಿ ಶುಕ್ರವಾರ ಸಂಜೆ 4 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ನಟಿ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿ ಉಮಾಶ್ರೀ ಅವರಿಗೆ ‘ಕತಾರ್ ಕನ್ನಡ ಸಮ್ಮಾನ್’ ನೀಡಿ ಗ

ದೋಹಾ: ಕರ್ನಾಟಕ ಸಂಘ ಕತಾರ್ ವತಿಯಿಂದ ನವೆಂಬರ್ 6ರಂದು ‘ಕರುನಾಡ ವೈಭವ–2026’ ಕಾರ್ಯಕ್ರಮ ಆಯೋಜಿಸಲಾಗಿದೆ. ದೋಹಾದ ಅಲ್ ವಕ್ರಾದಲ್ಲಿರುವ ಡಿಪಿಎಸ್ ಎಂಐಎಸ್ ಆಡಿಟೋರಿಯಂನಲ್ಲಿ ಶುಕ್ರವಾರ ಸಂಜೆ 4 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ನಟಿ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿ ಉಮಾಶ್ರೀ ಅವರಿಗೆ ‘ಕತಾರ್ ಕನ್ನಡ ಸಮ್ಮಾನ್’ ನೀಡಿ ಗೌರವಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಹಾಸ್ಯ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಘವೇಂದ್ರ (ರಾಗಿಣಿ), ಜಗಪ್ಪ ಮತ್ತು ಸುಷ್ಮಿತಾ ಹಾಸ್ಯ ಕಾರ್ಯಕ್ರಮ ನೀಡಲಿದ್ದಾರೆ. ‘ಸರಿಗಮಪ’ ಖ್ಯಾತಿಯ ಮೆಹಬೂಬ್ ಸಾಬ್ ಮತ್ತು ರೇವಣಸಿದ್ಧ ಫುಲಾರಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ನಿರೂಪಕಿ ಪ್ರಣಿತಾ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.ಕನ್ನಡ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಅನಿವಾಸಿ ಕನ್ನಡಿಗರ ನಡುವೆ ಸಂಭ್ರಮಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
Read the complete story at Prajavani