ಚಾಮರಾಜನಗರ: ರಕ್ತವಾಂತಿ ಮಾಡಿ ಕಾಡುಹಂದಿಗಳು ಸರಣಿ ಸಾವು
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಹಲವು ಕಾಡುಹಂದಿಗಳು ಮೃತಪಟ್ಟಿದ್ದು ಹಂದಿಜ್ವರ(ಆಫ್ರಿಕನ್ ಸ್ವೈನ್ ಫ್ಲೂ) ಶಂಕೆ ವ್ಯಕ್ತವಾಗಿದೆ.ಮದ್ದೂರು, ಗೋಪಾಲಸ್ವಾಮಿ ಬೆಟ್ಟ ಹಾಗೂ ಕುಂದುಕೆರೆ ವಲಯದಂಚಿನಲ್ಲಿರುವ ಬೂರದಾರಹುಂಡಿ, ಮಂಗಲ, ಜಕ್ಕಳ್ಳಿ, ಕಣಿಯನಪುರ ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ಕಾಡುಹಂದಿಗಳು ರಕ್ತವಾಂತಿ ಮಾಡ

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಹಲವು ಕಾಡುಹಂದಿಗಳು ಮೃತಪಟ್ಟಿದ್ದು ಹಂದಿಜ್ವರ(ಆಫ್ರಿಕನ್ ಸ್ವೈನ್ ಫ್ಲೂ) ಶಂಕೆ ವ್ಯಕ್ತವಾಗಿದೆ.ಮದ್ದೂರು, ಗೋಪಾಲಸ್ವಾಮಿ ಬೆಟ್ಟ ಹಾಗೂ ಕುಂದುಕೆರೆ ವಲಯದಂಚಿನಲ್ಲಿರುವ ಬೂರದಾರಹುಂಡಿ, ಮಂಗಲ, ಜಕ್ಕಳ್ಳಿ, ಕಣಿಯನಪುರ ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ಕಾಡುಹಂದಿಗಳು ರಕ್ತವಾಂತಿ ಮಾಡಿಕೊಂಡು ಮೃತಪಟ್ಟಿವೆ.ಮೂರು ತಿಂಗಳ ಹಿಂದೆಯೂ ಕುಂದುಕೆರೆ, ಮದ್ದೂರು ವಲಯದಲ್ಲಿ ಮೃತಪಟ್ಟ ಹಂದಿಗಳಲ್ಲಿ ಆಫ್ರಿಕನ್ ಸ್ವೈನ್ ಫ್ಲೂ ಸೋಂಕು ಪತ್ತೆಯಾಗಿತ್ತು. ಈಗ ಮೃತಪಟ್ಟ ಹಂದಿಗಳಲ್ಲೂ ರೋಗದ ಲಕ್ಷಣಗಳಲ್ಲಿ ಸಾಮ್ಯತೆ ಇರುವುದರಿಂದ, ಅಂಗಾಂಗ ಹಾಗೂ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.ಪ್ರಯೋಗಾಲಯ ವರದಿ ಬಂದ ಬಳಿಕ ಹಂದಿಗಳ ಸಾವಿಗೆ ಖಚಿತ ಕಾರಣ ತಿಳಿಯಲಿದೆ. ಸೋಂಕು ವ್ಯಾಪಿಸದಂತೆ ಕಳೇಬರ ಸುಟ್ಟುಹಾಕಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.ಎಚ್ಚರ ವಹಿಸಿ: ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡುಹಂದಿಗಳ ಸರಣಿ ಸಾವು ಆತಂಕ ಸೃಷ್ಟಿಸಿದೆ. ಸೋಂಕಿತ ಹಂದಿಗಳನ್ನು ಚಿರತೆ, ಹುಲಿ ಭಕ್ಷಿಸಿದರೆ ವನ್ಯಜೀವಿಗಳಿಗೂ ಸೋಂಕು ಹರಡುವ ಅಪಾಯವಿದ್ದು, ಅರಣ್ಯ ಇಲಾಖೆ ಎಚ್ಚರ ವಹಿಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.261015-37-480325783