ಸಕಲೇಶಪುರ | ರಾಶಿ ರಾಶಿ ವೋಟರ್ ಐಡಿ, ಆಧಾರ್ಗೆ ಬೆಂಕಿ – ತನಿಖೆಗೆ ಆದೇಶ
ಹಾಸನ: SIR ಹೊತ್ತಲ್ಲೇ ಅಪರಿಚಿತರು ರಾಶಿ ರಾಶಿ ಮತದಾರರ ಗುರುತಿನ ಚೀಟಿ (Voter ID), ಆಧಾರ್ ಕಾರ್ಡ್ (Aadhaar Card) ಹಾಗೂ ಪಾನ್ ಕಾರ್ಡ್ಗಳನ್ನು ಸುಟ್ಟು ಹಾಕಿದ ಘಟನೆ ಸಕಲೇಶಪುರ (Sakleshpur) ಪಟ್ಟಣದ ಶ್ರೀಗಂಧ ಹೋಟೆಲ್ ಬಳಿ ನಡೆದಿದೆ. ಈ ಸಂಬಂಧ ಸಕಲೇಶಪುರ ಉಪವಿಭಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಅ.13 ರಂದು ಈ ಘಟನೆ ನಡೆದಿತ್ತು. ಇಂದು (ಅ.15) ಘಟ

ಹಾಸನ: SIR ಹೊತ್ತಲ್ಲೇ ಅಪರಿಚಿತರು ರಾಶಿ ರಾಶಿ ಮತದಾರರ ಗುರುತಿನ ಚೀಟಿ (Voter ID), ಆಧಾರ್ ಕಾರ್ಡ್ (Aadhaar Card) ಹಾಗೂ ಪಾನ್ ಕಾರ್ಡ್ಗಳನ್ನು ಸುಟ್ಟು ಹಾಕಿದ ಘಟನೆ ಸಕಲೇಶಪುರ (Sakleshpur) ಪಟ್ಟಣದ ಶ್ರೀಗಂಧ ಹೋಟೆಲ್ ಬಳಿ ನಡೆದಿದೆ. ಈ ಸಂಬಂಧ ಸಕಲೇಶಪುರ ಉಪವಿಭಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಅ.13 ರಂದು ಈ ಘಟನೆ ನಡೆದಿತ್ತು. ಇಂದು (ಅ.15) ಘಟನಾ ಸ್ಥಳಕ್ಕೆ ಸಕಲೇಶಪುರ ಉಪವಿಭಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ವರದಿ ಕೊಡುವಂತೆ ಸೂಚನೆ ನೀಡಿದ್ದರು. ಅದರಂತೆ ಇಂದು ಪರಿಶೀಲನೆ ನಡೆಸಲಾಗಿದೆ ಎಂದರು. ಇದನ್ನೂ ಓದಿ: ಧೈರ್ಯವಿದ್ದರೆ ನನ್ನನ್ನ ಅರೆಸ್ಟ್ ಮಾಡಿ, ಅಖಾಡಕ್ಕೆ ಬನ್ನಿ – ಪ್ರಿಯಾಂಕ್ ಖರ್ಗೆಗೆ ಹೆಚ್ಡಿಕೆ ಸವಾಲ್ ಈ ಸ್ಥಳದಲ್ಲಿ ಯಾದಗಿರಿ, ಮಂಡ್ಯ ಸೇರಿ ರಾಜ್ಯದ ಬೇರೆ ಬೇರೆ ಭಾಗದ ಹಾಗೂ ಹೊರ ರಾಜ್ಯದ 26 ಮತದಾರರ ಗುರುತಿನ ಚೀಟಿಗಳು ಸಿಕ್ಕಿವೆ. ಈ ಗುರುತಿನ ಚೀಟಿಗಳು ಸಕಲೇಶಪುರ ತಾಲೂಕಿಗೆ ಸೇರಿದ್ದಲ್ಲ. 30 ರಿಂದ 40 ಆಧಾರ್ ಕಾರ್ಡ್ಗಳು ಸಿಕ್ಕಿವೆ. ಪಾನ್ ಕಾರ್ಡ್ಗಳು ಸಿಕ್ಕಿವೆ, ಎಲ್ಲವನ್ನೂ ಪೊಲೀಸರಿಗೆ ನೀಡಿದ್ದೇವೆ. ಮೇಲ್ನೋಟಕ್ಕೆ ಈ ದಾಖಲೆಗಳು ಎಸ್ಐಆರ್ಗೆ ಸಂಬಂಧಪಟ್ಟಂತೆ ಕಂಡುಬಂದಿಲ್ಲ ಎಂದು ತಿಳಿಸಿದರು. ಈಗ ಸಿಕ್ಕಿರುವ ದಾಖಲೆಗಳು, ಈ ಭಾಗದಲ್ಲಿ ಕೆಲಸಕ್ಕೆ ಬಂದಿರುವ ವಲಸೆ ಕಾರ್ಮಿಕರದ್ದಾಗಿರಬಹುದು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಎಲೆಕ್ಷನ್ ಶಿರಸ್ತೆದಾರ್ ಮೂಲಕ ಎಫ್ಐಆರ್ ದಾಖಲು ಮಾಡುತ್ತಿದ್ದೇವೆ. ಪೊಲೀಸರು ಪ್ರಕರಣದ ಸಂಪೂರ್ಣ ತನಿಖೆ ನಡೆಸಲಿದ್ದಾರೆ ಎಂದರು. ದೇಶದಲ್ಲಿ ಎಸ್ಐಆರ್ (ಮತದಾರರ ಪಟ್ಟಿ ತೀವ್ರ ಪರಿಶೀಲನೆ) ನಡೆಯುತ್ತಿರುವ ಹೊತ್ತಲ್ಲೇ ಈ ಘಟನೆ ನಡೆದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಸಿದ್ರಾಮಯ್ಯ, ಪರಮೇಶ್ವರ್ ವಿಡಿಯೋ ಬರಬಹುದು ಅಂತ 2024ರಲ್ಲೇ ರಮೇಶ್ ಜಾರಕಿಹೊಳಿ ಎಚ್ಚರಿಸಿದ್ರು: ಹೆಚ್ಡಿಕೆ