ಖೆಡ್ಡಾದಿಂದ ಅಂಬಾರಿ ಹೊರುವವರೆಗೆ: ಮೈಸೂರು ದಸರಾ ಆನೆಗಳ ಕಥನ
ಮೈಸೂರು ಮತ್ತು ದಸರಾವನ್ನು ಪ್ರತ್ಯೇಕಿಸಿ ನೋಡುವುದು ಕಷ್ಟ. ಹಾಗೆಯೇ ದಸರಾ ಮತ್ತು ಆನೆಗಳಿಗೂ ಅವಿನಾಭಾವ ಸಂಬಂಧವಿದೆ.ದಸರಾ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆಗಳು ಹಿಂದಿನಿಂದಲೂ ರಾಜರು ಮತ್ತು ಜನರ ಮೆಚ್ಚುಗೆ ಗಳಿಸಿವೆ. ಆನೆಗಳಿಗೆ ನೀಡುತ್ತಿದ್ದ ಗೌರವ ಎಷ್ಟಿತ್ತೆಂದರೆ, ಮೈಸೂರು ಅರಮನೆಯ ಪೂರ್ವ ದ್ವಾರಕ್ಕೂ ‘ಜಯಮಾರ್ತಾಂಡ’ ಎಂಬ ಆನೆಯ ಹೆಸರನ್ನೇ ಇಡಲಾಗಿದೆ.
ಮೈಸೂರು ಮತ್ತು ದಸರಾವನ್ನು ಪ್ರತ್ಯೇಕಿಸಿ ನೋಡುವುದು ಕಷ್ಟ. ಹಾಗೆಯೇ ದಸರಾ ಮತ್ತು ಆನೆಗಳಿಗೂ ಅವಿನಾಭಾವ ಸಂಬಂಧವಿದೆ.ದಸರಾ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆಗಳು ಹಿಂದಿನಿಂದಲೂ ರಾಜರು ಮತ್ತು ಜನರ ಮೆಚ್ಚುಗೆ ಗಳಿಸಿವೆ. ಆನೆಗಳಿಗೆ ನೀಡುತ್ತಿದ್ದ ಗೌರವ ಎಷ್ಟಿತ್ತೆಂದರೆ, ಮೈಸೂರು ಅರಮನೆಯ ಪೂರ್ವ ದ್ವಾರಕ್ಕೂ ‘ಜಯಮಾರ್ತಾಂಡ’ ಎಂಬ ಆನೆಯ ಹೆಸರನ್ನೇ ಇಡಲಾಗಿದೆ. ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಅವರಿಗೆ ಬಿಳಿಗಿರಿರಂಗ ಎಂಬ ಆನೆಯ ಮೇಲೆ ವಿಶೇಷ ಪ್ರೀತಿ ಇತ್ತು ಎಂದು ಇತಿಹಾಸದ ದಾಖಲೆಗಳು ತಿಳಿಸುತ್ತವೆ. ಈಚೆಗೆ ಅರ್ಜುನ, ಅಭಿಮನ್ಯು ಮತ್ತು ಭೀಮ ಆನೆಗಳೂ ಜನರ ಮೆಚ್ಚುಗೆ ಗಳಿಸಿವೆ.ಇಂದಿನ ದಸರಾ ಆನೆಗಳಲ್ಲಿ ಬಹುತೇಕವು ಮಾನವ–ಆನೆ ಸಂಘರ್ಷದ ಸಂದರ್ಭದಲ್ಲಿ ರಕ್ಷಿಸಲ್ಪಟ್ಟವು. ಆದರೆ ಹಿಂದೆ ಕಾಡಿನ ಆನೆಗಳನ್ನು ಹಿಡಿಯಲು ವಿಶೇಷವಾದ ಬೃಹತ್ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿತ್ತು. ಈ ಕಾರ್ಯಾಚರಣೆಗಳು ‘ಖೆಡ್ಡಾ’ ಎಂದು ಪ್ರಸಿದ್ಧವಾಗಿದ್ದವು.ದಸರಾ ವೇಳೆ ರಾವಣನನ್ನು ವಿಶೇಷವಾಗಿ ಪೂಜಿಸುತ್ತಾರೆ ಈ ಊರಿನ ಜನ!ವನ್ಯಜೀವಿ ಸಂರಕ್ಷಣೆ ಮತ್ತು ಪ್ರಾಣಿ ಕಲ್ಯಾಣದ ಇಂದಿನ ಕಾನೂನುಗಳಿಗೆ ಖೆಡ್ಡಾ ಸಂಪೂರ್ಣ ವಿರೋಧವಾದುದು. ಈಗ ಕಾಡುಪ್ರಾಣಿಗಳನ್ನು ಸೆರೆಹಿಡಿಯುವುದು, ರಕ್ಷಿಸುವುದು ಮತ್ತು ಸ್ಥಳಾಂತರಿಸುವುದು ಕಾನೂನು ಹಾಗೂ ವೈಜ್ಞಾನಿಕ ಮಾರ್ಗಸೂಚಿಗಳ ಚೌಕಟ್ಟಿನಡಿ ನಡೆಯುತ್ತದೆ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ನಂತರ ಜಾರಿಗೆ ಬಂದ ವಿವಿಧ ಕ್ರಮಗಳು ವನ್ಯಜೀವಿಗಳ ನಿರ್ವಹಣೆ ಹಾಗೂ ರಕ್ಷಣೆಯಲ್ಲಿ ಮಹತ್ವದ ಬದಲಾವಣೆ ತಂದಿವೆ.ಕರ್ನಾಟಕದಲ್ಲಿ 6 ಸಾವಿರಕ್ಕೂ ಹೆಚ್ಚು ಆನೆಗಳಿವೆ. ಅವುಗಳಲ್ಲಿ ಸುಮಾರು 100 ಆನೆಗಳು ಬಂಧನದಲ್ಲಿವೆ. ಮಾನವ–ಆನೆ ಸಂಘರ್ಷ ನಿರ್ವಹಣೆಗೆ ಬಳಸಲು ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕವು 60ಕ್ಕೂ ಹೆಚ್ಚು ಆನೆಗಳನ್ನು ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸಗಢ, ಬಿಹಾರ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಿಗೆ ನೀಡಿದೆ. ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳೂ ಕರ್ನಾಟಕದಿಂದ ಆನೆಗಳನ್ನು ನೀಡಬೇಕು ಎಂದು ಕೋರಿವೆ.ಶ್ರೀರಂಗಪಟ್ಟಣ: ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಚಾಮುಂಡೇಶ್ವರಿ ದೇವಿ ಮೆರವಣಿಗೆಖೆಡ್ಡಾ ಎಂದರೇನು?‘ಖೆಡ್ಡಾ’ ಅಥವಾ ‘ಖೆಡ್ಡಾ ಕಾರ್ಯಾಚರಣೆ’ ಎಂಬ ಪದವು ಕಾಡುಪ್ರಾಣಿಗಳನ್ನು ಸೆರೆಹಿಡಿಯಲು ನಿರ್ಮಿಸಲಾಗುತ್ತಿದ್ದ ರಹಸ್ಯ ಹೊಂಡ ಅಥವಾ ಕಂದಕ ಎಂದರ್ಥ. 1970ರ ದಶಕಕ್ಕೂ ಮೊದಲು ಭಾರತದಲ್ಲಿ ಈ ವಿಧಾನ ಬಳಕೆಯಲ್ಲಿತ್ತು. ಆದರೆ, ಹಿಂದಿನ ಮೈಸೂರು ಸಂಸ್ಥಾನದಲ್ಲಿ ಕಾಡಾನೆಗಳನ್ನು ಆಳವಾದ ಹೊಂಡಗಳಿಗೆ ಬೀಳಿಸುವ ಬದಲು, ವಿಶೇಷವಾಗಿ ನಿರ್ಮಿಸಿದ ದೊಡ್ಡ ಆವರಣಗಳೊಳಗೆ ಓಡಿಸಿ ಸೆರೆಹಿಡಿಯಲಾಗುತ್ತಿತ್ತು. ಹೊಂಡಗಳಿಗೆ ಬಿದ್ದು ಆನೆಗಳು ಗಾಯಗೊಳ್ಳುವುದನ್ನು ಕಡಿಮೆ ಮಾಡಲು ಹೀಗೆ ಮಾಡಲಾಗುತ್ತಿತ್ತು.ಪ್ರಾಚೀನ ಭಾರತದಲ್ಲಿ ಹಲವು ಪ್ರದೇಶಗಳಲ್ಲಿ ಆನೆಗಳನ್ನು ಸೆರೆಹಿಡಿಯಲಾಗುತ್ತಿತ್ತು. ಆನೆಗಳನ್ನು ಆವರಣಗಳೊಳಗೆ ಓಡಿಸಿ ಹಿಡಿಯುವ ವಿಧಾನವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಹಿಂದಿನ ಮೈಸೂರು ಸಂಸ್ಥಾನದ ದೊರೆಗಳು ಪ್ರಯತ್ನಿಸಿದರು. ಐತಿಹಾಸಿಕ ದಾಖಲೆಗಳ ಪ್ರಕಾರ, ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್, ಕಾಕನಕೋಟೆ ಅರಣ್ಯದಲ್ಲಿ ಕಾಡಾನೆಗಳನ್ನು ಹಿಡಿಯಲು ಸೈನ್ಯದ ದೊಡ್ಡ ತುಕಡಿಗಳನ್ನೇ ನಿಯೋಜಿಸಿದ್ದರು. ಆದರೆ, ಅವರ ಪ್ರಯತ್ನಗಳು ಹೆಚ್ಚಿನ ಯಶ ಕಾಣಲಿಲ್ಲ.ಮೂರನೇ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ ಬ್ರಿಟಿಷ್ ಸೇನಾಧಿಕಾರಿ ಕರ್ನಲ್ ಪಿಯರ್ಸನ್ 1867ರಲ್ಲಿ ಮತ್ತೊಂದು ಪ್ರಯತ್ನ ನಡೆಸಿದರೂ ಯಶಸ್ವಿಯಾಗಲಿಲ್ಲ. 1873ರಲ್ಲಿ ಚಾಮರಾಜೇಂದ್ರ ಒಡೆಯರ್ ಅವರ ಆಡಳಿತಾವಧಿಯಲ್ಲಿ ಮೈಸೂರು ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಅಧಿಕಾರಿ ಜಾರ್ಜ್ ಪಿ. ಸ್ಯಾಂಡರ್ಸನ್ ಅವರಿಗೆ ಈ ಕಾರ್ಯಾಚರಣೆಯ ಜವಾಬ್ದಾರಿ ವಹಿಸಲಾಯಿತು. ಆನೆಗಳ ನಡವಳಿಕೆಯ ಬಗ್ಗೆ ಸಾಕಷ್ಟು ಅರಿವು ಹೊಂದಿದ್ದ ಅವರು, 1874ರಲ್ಲಿ ಕರ್ಡಿಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾದರು.ಖೆಡ್ಡಾ ವಿಧಾನವನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಅವರು ಢಾಕಾದಲ್ಲಿ ಅನುಸರಿಸುತ್ತಿದ್ದ ಸಾಂಪ್ರದಾಯಿಕ ಆನೆ ಸೆರೆಹಿಡಿಯುವ ವಿಧಾನಗಳನ್ನು ಅಧ್ಯಯನ ಮಾಡಿದರು. ಅಲ್ಲಿಂದ ಅನುಭವಿ ಮಾವುತರನ್ನೂ ಮೈಸೂರಿಗೆ ಕರೆತಂದರು. ಸ್ಥಳೀಯ ಬುಡಕಟ್ಟು ಸಮುದಾಯಗಳ ಅನುಭವ, ಕಾಡಿನ ಬಗ್ಗೆ ಅವರಿಗಿದ್ದ ಸಾಂಪ್ರದಾಯಿಕ ಜ್ಞಾನವು ಈ ಕಾರ್ಯಾಚರಣೆಗಳಿಗೆ ನೆರವಾಗಿತ್ತು ಎಂದು ಅವರ ‘Thirteen Years Among the Wild Beasts of India’ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಆನೆಗಳ ನಡವಳಿಕೆ ಮತ್ತು ಅರಣ್ಯದ ಬಗ್ಗೆ ಅವರ ತಿಳಿವಳಿಕೆಯನ್ನು ಹೆಚ್ಚು ವ್ಯವಸ್ಥಿತವಾದ ಸೆರೆಹಿಡಿಯುವ ವಿಧಾನಗಳೊಂದಿಗೆ ಸಂಯೋಜಿಸಲಾಯಿತು. ನಂತರ ಸ್ಯಾಂಡರ್ಸನ್ ಈ ವಿಧಾನವನ್ನು ವ್ಯವಸ್ಥಿತಗೊಳಿಸಿ, ಮೈಸೂರು ಸಂಸ್ಥಾನದಲ್ಲಿ ಹೊಸದಾಗಿ ಸ್ಥಾಪಿಸಲಾದ ಖೆಡ್ಡಾ ಇಲಾಖೆಯ ಮೂಲಕ ಕಾರ್ಯಾಚರಣೆಗಳನ್ನು ನಡೆಸಿದರು.ಮೈಸೂರಿನ ಕಾಡೊಂದರಲ್ಲಿ ಖೆಡ್ಡಾ ಕಾರ್ಯಾಚರಣೆಮೈಸೂರು ದಸರಾ| ಅಂಬಾರಿ ಹೊರಲು ಪ್ರಶಾಂತ ಆನೆ ಆಯ್ಕೆ: ಮಾವುತ ಚಿನ್ನಪ್ಪ ಸಂತಸಖೆಡ್ಡಾ ಕಾರ್ಯಾಚರಣೆ ಹೇಗೆ ನಡೆಯುತ್ತಿತ್ತು?ಮೈಸೂರು ಸಂಸ್ಥಾನದ ಖೆಡ್ಡಾ ಕಾರ್ಯಾಚರಣೆಗಳಿಗೆ ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲ ಮತ್ತು ಸೂಕ್ಷ್ಮ ಸಮನ್ವಯದ ಅಗತ್ಯವಿತ್ತು. ಮೊದಲು ಕಾಡಾನೆಗಳ ಹಿಂಡನ್ನು ಪತ್ತೆಹಚ್ಚಲಾಗುತ್ತಿತ್ತು. ಬಳಿಕ ಸುಮಾರು 2 ಸಾವಿರ ಜನರು, ಡೋಲು ಬಾರಿಸುವವರು ಮತ್ತು ಅರಣ್ಯ ಸಿಬ್ಬಂದಿ ಆನೆಗಳ ಹಿಂಡನ್ನು ಸುತ್ತುವರಿಯುತ್ತಿದ್ದರು. ಆನೆಗಳು ತಪ್ಪಿಸಿಕೊಂಡು ಹೋಗಬಹುದಾದ ಮಾರ್ಗಗಳನ್ನು ಮುಚ್ಚಲಾಗುತ್ತಿತ್ತು. ಹೀಗೆ ಸುತ್ತುವರಿದ ವೃತ್ತವನ್ನು ಹಲವು ವಾರಗಳು ನಿಧಾನವಾಗಿ ಕಿರಿದುಗೊಳಿಸಿ, ಆನೆಗಳನ್ನು ವಿಶೇಷವಾಗಿ ನಿರ್ಮಿಸಿದ ಆವರಣದೊಳಗೆ ಓಡಿಸಲಾಗುತ್ತಿತ್ತು.1891ರಲ್ಲಿ ಸ್ಯಾಂಡರ್ಸನ್ ಕಾಕನಕೋಟೆ ಖೆಡ್ಡಾ ಕಾರ್ಯಾಚರಣೆಯಲ್ಲಿ ‘ರಿವರ್ ಡ್ರೈವ್’ ಎಂಬ ಹೊಸ ವಿಧಾನವನ್ನು ಪರಿಚಯಿಸಿದರು. ಈ ವಿಧಾನದಲ್ಲಿ ಆನೆಗಳ ಹಿಂಡನ್ನು ಕಬಿನಿ ನದಿಯ ಆಳವಿಲ್ಲದ ನೀರಿನ ಮೂಲಕ ಓಡಿಸಿ, ಸುಮಾರು ಐದು ಎಕರೆ ವಿಸ್ತೀರ್ಣದ ಬಿದಿರಿನ ಆವರಣದೊಳಗೆ ಸೇರಿಸಲಾಗುತ್ತಿತ್ತು. ಈ ಆವರಣಕ್ಕೆ ಮರದ ಬಾಗಿಲುಗಳನ್ನು ಅಳವಡಿಸಲಾಗುತ್ತಿತ್ತು.ಆನೆಗಳನ್ನು ನಿರ್ದಿಷ್ಟ ದಿಕ್ಕಿನಲ್ಲಿ ಓಡಿಸಲು ಜನರು ಕೂಗುತ್ತಿದ್ದರು, ಡೋಲು ಬಾರಿಸುತ್ತಿದ್ದರು. ಕೆಲವೊಮ್ಮೆ ಬಂದೂಕುಗಳನ್ನೂ ಬಳಸಲಾಗುತ್ತಿತ್ತು. ಆನೆಗಳ ಹಿಂಡು ಆವರಣದೊಳಗೆ ಸೇರಿದ ಬಳಿಕ, ತರಬೇತಿ ಪಡೆದ ‘ಕುಮ್ಕಿ’ ಆನೆಗಳನ್ನು ಬಳಸಲಾಗುತ್ತಿತ್ತು. ಸೆರೆಹಿಡಿದ ಆನೆಗಳನ್ನು ಪ್ರತ್ಯೇಕಿಸಿ, ಅವುಗಳನ್ನು ಶಾಂತಗೊಳಿಸಲು ಕುಮ್ಕಿ ಆನೆಗಳು ನೆರವಾಗುತ್ತಿದ್ದವು. ಬಳಿಕ ಮಾವುತರು ಹಗ್ಗಗಳಿಂದ ಆನೆಗಳನ್ನು ಕಟ್ಟಿಹಾಕುತ್ತಿದ್ದರು.ಸೆರೆಹಿಡಿದ ಆನೆಗಳನ್ನು ಮರ ಕಡಿಯುವುದು, ಅರಣ್ಯ ತೆರವುಗೊಳಿಸುವುದು, ಸಾರಿಗೆ ಮತ್ತು ಸೇನಾ ಕಾರ್ಯಗಳಿಗೆ ಬಳಸಲಾಗುತ್ತಿತ್ತು. ಅವುಗಳಲ್ಲಿ ಉತ್ತಮ ದಂತದ ಆನೆಗಳನ್ನು ರಾಜಮನೆತನದ ಸಮಾರಂಭಗಳಿಗೆ, ವಿಶೇಷವಾಗಿ ಮೈಸೂರು ದಸರಾಕ್ಕೆ ಆಯ್ಕೆ ಮಾಡಲಾಗುತ್ತಿತ್ತು.1960ರ ದಶಕದಲ್ಲಿ ಬಿಳಿಗಿರಿರಂಗ ಪ್ರಸಿದ್ಧ ಆನೆಯಾಗಿದ್ದರೆ, ನಂತರದ ವರ್ಷಗಳಲ್ಲಿ ಬಲರಾಮ ಮತ್ತು ಅರ್ಜುನ ದಸರಾ ಉತ್ಸವದ ಪ್ರಮುಖ ಆನೆಗಳಾಗಿ ಜನರ ಗಮನ ಸೆಳೆದವು.ರಾಜಕೀಯ ಒತ್ತಡಕ್ಕೆ ಮಣಿಯುವ ಪೊಲೀಸ್ ವ್ಯವಸ್ಥೆ: ಸುಧಾರಣೆ ಯಾವಾಗ?ಆನೆಗಳ ಮಾರಾಟದಿಂದ ಬೊಕ್ಕಸಕ್ಕೂ ಆದಾಯಖೆಡ್ಡಾ ಕಾರ್ಯಾಚರಣೆಗಳು ದುಬಾರಿಯಾಗಿದ್ದರೂ, ಅವುಗಳಿಂದ ಮೈಸೂರು ಸಂಸ್ಥಾನದ ಖಜಾನೆಗೆ ಉತ್ತಮ ಆದಾಯವೂ ಬರುತ್ತಿತ್ತು.1874ರಲ್ಲಿ ಸ್ಯಾಂಡರ್ಸನ್ ನಡೆಸಿದ ಮೊದಲ ಕಾರ್ಯಾಚರಣೆಯಲ್ಲಿ 50ಕ್ಕೂ ಹೆಚ್ಚು ಆನೆಗಳನ್ನು ಸೆರೆಹಿಡಿಯಲಾಗಿತ್ತು. ಪಳಗಿಸಿದ ಆನೆಗಳನ್ನು ನೆರೆಯ ಸಂಸ್ಥಾನಗಳು, ಶ್ರೀಮಂತ ಜಮೀನ್ದಾರರು ಮತ್ತು ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಿಗೆ ಮಾರಾಟ ಮಾಡುವ ಮೂಲಕ ರಾಜ್ಯಕ್ಕೆ ಆದಾಯ ಬರುತ್ತಿತ್ತು.ಸ್ಯಾಂಡರ್ಸನ್ ತಮ್ಮ ಪುಸ್ತಕದಲ್ಲಿ ದಾಖಲಿಸಿರುವಂತೆ, 1891–92ರಲ್ಲಿ 75 ಆನೆಗಳನ್ನು ₹ 49,369ಕ್ಕೆ ಮಾರಾಟ ಮಾಡಲಾಗಿತ್ತು. ಪಾಲಕ್ಕಾಡ್, ಹೈದರಾಬಾದ್ ಮತ್ತು ತಲಶ್ಶೇರಿ ಸೇರಿದಂತೆ ವಿವಿಧ ಪ್ರದೇಶಗಳವರು ಈ ಆನೆಗಳನ್ನು ಖರೀದಿಸಿದ್ದರು.ಹೀಗಾಗಿ, ಖೆಡ್ಡಾ ಕಾರ್ಯಾಚರಣೆಗಳು ಕೇವಲ ಆನೆಗಳನ್ನು ಸೆರೆಹಿಡಿಯುವ ವಿಧಾನವಾಗಿರದೇ, ಅವು ಮೈಸೂರು ಸಂಸ್ಥಾನದ ಆಡಳಿತ, ಆರ್ಥಿಕತೆ ಮತ್ತು ರಾಜಮನೆತನದ ಸಮಾರಂಭಗಳೊಂದಿಗೂ ನಿಕಟ ಸಂಬಂಧ ಹೊಂದಿದ್ದವು.ಸುದ್ದಿಹಾಳೆ ಬಿಕ್ಕಟ್ಟು: ಆತಂಕದಲ್ಲಿ ಪತ್ರಿಕೋದ್ಯಮದ ಭವಿಷ್ಯ, ಪರಿಹಾರವೇನು?ಬಂಡೀಪುರ ಕಾಡಿನಲ್ಲಿ ಖೆಡ್ಡಾ ಕಾರ್ಯಾಚರಣೆ ವೀಕ್ಷಿಸುತ್ತಿರುವ ಜನರಾಜತಾಂತ್ರಿಕ ಸಂಬಂಧಗಳಿಗೂ ಖೆಡ್ಡಾ ಬಳಕೆಖೆಡ್ಡಾ ಕಾರ್ಯಾಚರಣೆಗಳಿಗೆ ಆರ್ಥಿಕ ಮಹತ್ವವಷ್ಟೇ ಇರಲಿಲ್ಲ. ಅವುಗಳ ಹಿಂದೆ ರಾಜತಾಂತ್ರಿಕ ಉದ್ದೇಶಗಳೂ ಇದ್ದವು.ಒಡೆಯರ್ ಮಹಾರಾಜರು ಖೆಡ್ಡಾ ಕಾರ್ಯಾಚರಣೆಯ ಅಂತಿಮ ಹಂತವಾದ ‘ರಿವರ್ ಡ್ರೈವ್’ ಅನ್ನು ದೊಡ್ಡ ಪ್ರದರ್ಶನದಂತೆ ರೂಪಿಸಿದ್ದರು. ನದಿಯ ದಡದಲ್ಲಿ ಬ್ರಿಟಿಷ್ ವೈಸ್ರಾಯ್ಗಳು, ಗವರ್ನರ್ಗಳು ಮತ್ತು ಇತರ ಗಣ್ಯರಿಗೆ ಕಾರ್ಯಾಚರಣೆಯನ್ನು ವೀಕ್ಷಿಸಲು ವಿಶೇಷ ಗ್ಯಾಲರಿಗಳನ್ನು ನಿರ್ಮಿಸಲಾಗುತ್ತಿತ್ತು.ಈ ಕಾರ್ಯಾಚರಣೆಗಳು ಚಲನಚಿತ್ರ ನಿರ್ಮಾಪಕರ ಗಮನವನ್ನೂ ಸೆಳೆದಿದ್ದವು. 1937ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಹಾಲಿವುಡ್ನ ‘Elephant Boy’ ಚಲನಚಿತ್ರವನ್ನು ಚಿತ್ರೀಕರಣ ಮಾಡಲಾಗಿತ್ತು. ಈ ಚಿತ್ರವು ಮೈಸೂರಿನ ಮಾವುತನ ಮಗ ಸಾಬು ದಸ್ತಗೀರ್ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟಿತು.1874ರಿಂದ 1971ರವರೆಗೆ ಮೈಸೂರು ಅರಣ್ಯಗಳಲ್ಲಿ ಅಧಿಕೃತವಾಗಿ 36 ಖೆಡ್ಡಾ ಕಾರ್ಯಾಚರಣೆಗಳು ನಡೆದಿದ್ದು, ಈ ಅವಧಿಯಲ್ಲಿ 1,800ಕ್ಕೂ ಹೆಚ್ಚು ಆನೆಗಳನ್ನು ಸೆರೆಹಿಡಿಯಲಾಗಿತ್ತು. ಆಗ ಅರಣ್ಯ ಇಲಾಖೆಯಲ್ಲಿ ತರಬೇತಿ ಪಡೆಯುತ್ತಿದ್ದ ಅಧಿಕಾರಿಯಾಗಿದ್ದ ಭಾರತೀಯ ಅರಣ್ಯ ಸೇವೆಯ (ಐಎಫ್ಎಸ್) ನಿವೃತ್ತ ಅಧಿಕಾರಿ ಎ.ಸಿ. ಲಕ್ಷ್ಮಣ ಅವರು 1971ರ ಖೆಡ್ಡಾ ಕಾರ್ಯಾಚರಣೆಯನ್ನು ತಮ್ಮ ‘Tropical Forester Memoirs-2’ ಆತ್ಮಕಥನದಲ್ಲಿ ವಿವರವಾಗಿ ದಾಖಲಿಸಿದ್ದಾರೆ.ಕಾಡು(ವ) ಕಥೆಗಳು | ಅರಣ್ಯ ನಾಶದ ಬೆಲೆ: ಲೆಕ್ಕಕ್ಕೆ ಬಾರದ ಪರಿಸರ ಸೇವೆಗಳ ಮೌಲ್ಯ