ಅಫಜಲಪುರ: ಭೀಮಾ ನೀರಿಗಾಗಿ ಎರಡನೇ ದಿನವೂ ಮುಂದುವರಿದ ಪಾದಯಾತ್ರೆ
ಪ್ರಜಾವಾಣಿ ವಾರ್ತೆ ಅಫಜಲಪುರ (ಕಲಬುರಗಿ ಜಿಲ್ಲೆ): ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ 15 ಟಿಎಂಸಿ ನೀರು ಹರಿಸುವಂತೆ ಮತ್ತು ಪ್ರತಿ ಟನ್ ಕಬ್ಬಿಗೆ ₹5,500 ದರ ನೀಡುವಂತೆ ಆಗ್ರಹಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಅಕ್ಟೋಬರ್ 14ರಂದು ತಾಲ್ಲೂಕಿನ ಅಳ್ಳಗಿ (ಬಿ) ಗ್ರಾಮದಿಂದ ಆರಂಭಗೊಂಡಿರುವ ಪಾದಯಾತ್ರೆಯು ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.ಜಿಲ

ಪ್ರಜಾವಾಣಿ ವಾರ್ತೆ ಅಫಜಲಪುರ (ಕಲಬುರಗಿ ಜಿಲ್ಲೆ): ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ 15 ಟಿಎಂಸಿ ನೀರು ಹರಿಸುವಂತೆ ಮತ್ತು ಪ್ರತಿ ಟನ್ ಕಬ್ಬಿಗೆ ₹5,500 ದರ ನೀಡುವಂತೆ ಆಗ್ರಹಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ಅಕ್ಟೋಬರ್ 14ರಂದು ತಾಲ್ಲೂಕಿನ ಅಳ್ಳಗಿ (ಬಿ) ಗ್ರಾಮದಿಂದ ಆರಂಭಗೊಂಡಿರುವ ಪಾದಯಾತ್ರೆಯು ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆಯುವ ಹಮ್ಮಿಕೊಂಡಿರುವ ಪಾದಯಾತ್ರೆ ಹೋರಾಟ ಮೊದಲ ದಿನ ತಾಲ್ಲೂಕಿನ ಅತನೂರು ಗ್ರಾಮ ತಲುಪಿತ್ತು.ಗುರುವಾರ ಗ್ರಾಮದಿಂದ ಪಾದಯಾತ್ರೆ ಆರಂಭವಾಯಿತು.ಹೋರಾಟ ಸಮಿತಿ ಮುಖಂಡರಾದ ಶ್ರೀಮಂತ ಬಿರಾದಾರ್ ಹಾಗೂ ಗುರು ಚಾಂದಕೋಟೆ ಹಾಗೂ ಶಾಂತು ಅಂಜುಟಗಿ ಮಾತನಾಡಿ, ನಮ್ಮ ಭಾಗದ ಜನರಿಗೆ ಜೀವನಾಡಿಯಾಗಿರುವ ಭೀಮಾನದಿ ಬೇಸಿಗೆಯಲ್ಲಿ ಬತ್ತಿ ಹೋಗುತ್ತದೆ. ಹೀಗಾಗಿ ಜನ ಜನ ಜಾನುವಾರಿಗಳಿಗೆಕುಡಿಯುವ ನೀರಿಗೂ ಪರದಾಡುವಂತಾಗಿದೆ. ರೈತರು ಭೀಮಾ ನದಿಯ ನೀರು ನಂಬಿ ಕೃಷಿ ಮಾಡಿದರೆ ಬೇಸಿಗೆಯಲ್ಲಿ ಎಲ್ಲಾ ಬೆಳೆಗಳು ಒಣಗಿ ಹೋಗುತ್ತವೆ. ನಮ್ಮ ಪಾಲಿನ 15 ಟಿಎಂಸಿ ನೀರು ಮಹಾರಾಷ್ಟ್ರ ಸರ್ಕಾರದವರು ನೀಡುತ್ತಿಲ್ಲ. ಇದರ ಬಗ್ಗೆ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಇಲ್ಲದಿದ್ದರೆ ಸುಪ್ರೀಂಕೋರ್ಟಿನಲ್ಲಿ ಕಾನೂನು ಹೋರಾಟ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.ಎರಡನೇ ದಿನದ ಪಾದಯಾತ್ರೆಯಲ್ಲಿ ಮುಖಂಡರಾದ ಭೀಮರಾಯ ಗೌಡ, ಯಶವಂತ್ ಪಟ್ಟೇದಾರ, ಗುರು ಚಾಂದಕವಟೆ, ಮುರುಗೇಂದ್ರ ಮಸಳಿ, ಚಿದಾನಂದ ಮಠ, ರಮೇಶ ಪಾಟೀಲ, ಬಸವರಾಜ ಮಂಗಳೂರ, ಚಂದು ಬನಹಟ್ಟಿ, ಸಂಗಣ್ಣ ನಾರಸೆರ್, ಶರಣಗೌಡ ಪಾಟೀಲ, ಭೀಮನಗೌಡ ನಾರಸೆರ್, ಪ್ರಭಾವತಿ ಮೈತ್ರೆ, ನೂರ ಅಹ್ಮದ ಬಾಗವಾನ, ಅರ್ಜುನ್ ಸೋಮಜಾಳ, ಕಲ್ಲು ಅಂಜುಟಗಿ, ಸಿದ್ದು ದೇವರ ನಾವದ, ಈರಪ್ಪ ತೇಲಿ, ಬಸವರಾಜ ಕಲಶೆಟ್ಟಿ ಇತರರು ಇದ್ದರು.