2026ರ ಅ.15: ‘ಸ್ಟಿಂಗ್’ ಸಂಚಲನ, ಮಳೆ ಅಲರ್ಟ್ ಸೇರಿದಂತೆ ದಿನದ ಪ್ರಮುಖ ಸುದ್ದಿಗಳು
ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..ಗೃಹ ಸಚಿವ ಸ್ಥಾನದಲ್ಲಿರಲು ಪ್ರಿಯಾಂಕ್ ಖರ್ಗೆ ನಾಲಾಯಕ್: ಎಚ್.ಡಿ. ಕುಮಾರಸ್ವಾಮಿ ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವ ಸ್ಥಾನದಲ್ಲಿರಲು ನಾಲಾಯಕ್ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ. ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇ

ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..ಗೃಹ ಸಚಿವ ಸ್ಥಾನದಲ್ಲಿರಲು ಪ್ರಿಯಾಂಕ್ ಖರ್ಗೆ ನಾಲಾಯಕ್: ಎಚ್.ಡಿ. ಕುಮಾರಸ್ವಾಮಿ ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವ ಸ್ಥಾನದಲ್ಲಿರಲು ನಾಲಾಯಕ್ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ. ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ವಿಚಾರವಾಗಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.‘ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ ಅವರ ಪದಚ್ಯುತಿಗೆ ಕಾರಣನಾದ ನೀಲಿಕಣ್ಣಿನ ಮಂತ್ರಿ ಪ್ರಿಯಾಂಕ್ ಖರ್ಗೆ, ಸ್ಟಿಂಗ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನತ್ತಿದ ನೀವು ಗೃಹಮಂತ್ರಿ ಹುದ್ದೆಗೆ ನಾಲಾಯಕ್’ ಎಂದು ಕಿಡಿಕಾರಿದ್ದಾರೆ.‘ಬಲಿತ ದಲಿತ’ನೇ ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರ? -HDKಯಾರೂ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ: ರಾಹುಲ್, ಅಖಿಲೇಶ್ಗೆ SC ನೋಟಿಸ್ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆಯಲ್ಲಿ (ಎಸ್ಐಆರ್) ಭಾರಿ ಅಕ್ರಮ ನಡೆದಿದೆ ಮತ್ತು ಬೃಹತ್ ಸಂಖ್ಯೆಯ ಮತದಾರರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ವಿಪಕ್ಷಗಳ ಹಲವು ಮುಖಂಡರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಿತು.ಯಾರೂ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ: ರಾಹುಲ್, ಅಖಿಲೇಶ್ಗೆ SC ನೋಟಿಸ್ಹೆದ್ದಾರಿ ತಡೆಯಿಂದ ನೂರಾರು ಕೋಟಿ ರೂ. ಹಾನಿ; ಪ್ರಲ್ಹಾದ ಜೋಶಿ ಎ–1 ಆರೋಪಿ: ಚೂನಪ್ಪ‘ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ನೂರಾರು ಕೋಟಿ ರೂಪಾಯಿಗಳ ಹಾನಿ ಸಂಭವಿಸಿದೆ ಎಂದು ಸರ್ಕಾರ ಹೇಳಿದೆ. ಎಲ್ಲ ಹಾನಿಗೂ ಪ್ರಲ್ಹಾದ ಜೋಶಿ ಅವರೇ ‘ಎ–1’ ಆರೋಪಿ. ಅವರ ಕುತಂತ್ರದ ನಂತರ ರೈತರ ಬೀದಿಗೆ ಇಳಿದಿದ್ದಾರೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ದೂರಿದರು.ಹೆದ್ದಾರಿ ತಡೆಯಿಂದ ನೂರಾರು ಕೋಟಿ ರೂ. ಹಾನಿ; ಪ್ರಲ್ಹಾದ ಜೋಶಿ ಎ–1 ಆರೋಪಿ: ಚೂನಪ್ಪಕೋಲಾರ, ದಕ್ಷಿಣ ಕನ್ನಡ ಜಿಲ್ಲೆ ಒಂದೆರಡು ಕಡೆ ಮಳೆ, ಯಾವ ಭಾಗದಲ್ಲಿ ಎಷ್ಟು?ಕರ್ನಾಟಕದ ವಿವಿಧ ಭಾಗಗಳಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಮಳೆಯಾಗಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ನೀಡಿರುವ ಮಾಹಿತಿ ಪ್ರಕಾರ, ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ರಾಜೇನಹಳ್ಳಿಯಲ್ಲಿ 11.5 ಮಿ.ಮೀ ಮಳೆಯಾಗಿದೆ.ಕೋಲಾರ, ದಕ್ಷಿಣ ಕನ್ನಡ ಜಿಲ್ಲೆ ಒಂದೆರಡು ಕಡೆ ಮಳೆ, ಯಾವ ಭಾಗದಲ್ಲಿ ಎಷ್ಟು?ಫ್ರೂಟ್ಸ್ ಐಡಿ ಮಾಡಿಸಿಕೊಂಡಿಲ್ಲವೇ, ಸರ್ಕಾರದ ಈ ಸೌಲಭ್ಯಗಳು ಕೈ ತಪ್ಪಲಿವೆ ಗಮನಿಸಿನೀವು ಕೃಷಿಕರೆ, ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗುತ್ತೀದ್ದೀರಿಯೇ, ನಿಮ್ಮ ಹೆಸರಿನಲ್ಲಿ ಅಥವಾ ಕುಟುಂಬದ ಜಂಟಿ ಹೆಸರಿನಲ್ಲಿ ಜಮೀನು ಇದೆಯೇ. ಹೀಗಿದ್ದರೆ ರೈತರ ಗುರುತಿನ ಸಂಖ್ಯೆ( Farmers ID) ಕಡ್ಡಾಯವಾಗಿ ಪಡೆದುಕೊಳ್ಳಿ. ಇಲ್ಲದೇ ಇದ್ದರೆ ಸರ್ಕಾರದಿಂದ ನೀಡಲಾಗುವ ಹಲವಾರು ಸೌಲಭ್ಯಗಳು ನಿಮ್ಮ ಕೈ ತಪ್ಪಬಹುದು.ಫ್ರೂಟ್ಸ್ ಐಡಿ ಮಾಡಿಸಿಕೊಂಡಿಲ್ಲವೇ, ಸರ್ಕಾರದ ಈ ಸೌಲಭ್ಯಗಳು ಕೈ ತಪ್ಪಲಿವೆ ಗಮನಿಸಿಅಕ್ಟೋಬರ್ 16ರ ಸಿಜೆಪಿ ಪ್ರತಿಭಟನೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರಅಕ್ಟೋಬರ್ 16ರಂದು ದೆಹಲಿಯ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಗುರುವಾರ ನಿರಾಕರಿಸಿದೆ.ಅಕ್ಟೋಬರ್ 16ರ ಸಿಜೆಪಿ ಪ್ರತಿಭಟನೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ‘ಅನ್ನ ಸೇವೆ’ ಆ್ಯಪ್: ಮನೆಯಲ್ಲಿಯೇ ಪೂರ್ಣಗೊಳಿಸಿ ರೇಷನ್ ಕಾರ್ಡ್ ಇ-ಕೆವೈಸಿಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ ಇ-ಕೆವೈಸಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಿದೆ. ಈ ಮೊದಲು ನ್ಯಾಯಬೆಲೆ ಅಂಗಡಿಗಳ ಮುಂದೆ ನಿಂತು ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕಿತ್ತು. ಇದೀಗ ಮನೆಯಲ್ಲಿಯೇ ಸುಲಭವಾಗಿ ‘ಅನ್ನ ಸೇವೆ’ ಆ್ಯಪ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದಾಗಿದೆ. ‘ಅನ್ನ ಸೇವೆ’ ಆ್ಯಪ್: ಮನೆಯಲ್ಲಿಯೇ ಪೂರ್ಣಗೊಳಿಸಿ ರೇಷನ್ ಕಾರ್ಡ್ ಇ-ಕೆವೈಸಿಎಸ್ಐಆರ್ ವಿರುದ್ಧ ಹೋರಾಟ: ಶಾಸಕರ ಭವನದಲ್ಲಿ ‘ಇಂಡಿಯಾ’ ಕೂಟದ ಸಭೆದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದ ಮೌಲ್ಯಗಳು ಹಾಗೂ ನಾಗರಿಕರ ಮತದಾನದ ಹಕ್ಕಿನ ರಕ್ಷಣೆಗಾಗಿ ಸಂಘಟಿತ ಹೋರಾಟ ರೂಪಿಸಲು ಶಾಸಕರ ಭವನದಲ್ಲಿ ಅ.16ರಂದು ‘ಇಂಡಿಯಾ’ ಮೈತ್ರಿಕೂಟದ ರಾಜ್ಯಮಟ್ಟದ ಸಭೆ ಆಯೋಜಿಸಲಾಗಿದೆ.ಎಸ್ಐಆರ್ ವಿರುದ್ಧ ಹೋರಾಟ: ಶಾಸಕರ ಭವನದಲ್ಲಿ ‘ಇಂಡಿಯಾ’ ಕೂಟದ ಸಭೆಜಂತರ್ ಮಂತರ್ನಲ್ಲಿ ಧರಣಿಗೆ ನಿರ್ಬಂಧ: ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ಐತಿಹಾಸಿಕ ಜಂತರ್ ಮಂತರ್ ಅನ್ನು ದೆಹಲಿ ಪೊಲೀಸರು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಟ್ಟಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವಾಗಿ ಮುಂದುವರಿಸುವುದು ಸೂಕ್ತವೇ ಎಂಬುದರ ಬಗ್ಗೆ ಮೌಲ್ಯಮಾಪನ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದೆ.ಜಂತರ್ ಮಂತರ್ನಲ್ಲಿ ಧರಣಿಗೆ ನಿರ್ಬಂಧ: ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ಬೆಳವಣಿಗೆ ಕುಸಿತ, ಸ್ಪರ್ಧೆ ಹೆಚ್ಚಳ: Netflixನ ಸಾವಿರ ಉದ್ಯೋಗಿಗಳಿಗೆ ಕೊಕ್ಜನಪ್ರಿಯ ಒಟಿಟಿ ವೇದಿಕೆ ನೆಟ್ಫ್ಲಿಕ್ಸ್ ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಮುಂದಾಗಿದೆ. 2022ರ ಬಳಿಕ ಕಂಪನಿ ಕೈಗೊಳ್ಳುತ್ತಿರುವ ಅತಿ ದೊಡ್ಡ ಉದ್ಯೋಗ ಕಡಿತ ಇದಾಗಿದೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.ಬೆಳವಣಿಗೆ ಕುಸಿತ, ಸ್ಪರ್ಧೆ ಹೆಚ್ಚಳ: Netflixನ ಸಾವಿರ ಉದ್ಯೋಗಿಗಳಿಗೆ ಕೊಕ್