ಧಾರವಾಡ| ಎಚ್ಚರಿಕೆಯಿಂದ ಚುನಾವಣಾ ಕಾರ್ಯ ನಿರ್ವಹಿಸಿ: ಜಿಲ್ಲಾಧಿಕಾರಿ ಸ್ನೇಹಲ್
ಧಾರವಾಡ: ‘ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಭಿನ್ನವಾಗಿದ್ದು, ಬ್ಯಾಲೆಟ್ ಪೇಪರ್ ನೀಡಲಾಗುತ್ತದೆ. ಅದನ್ನು ಭರ್ತಿ ಮಾಡಿ ಬ್ಯಾಲೆಟ್ ಬಾಕ್ಸ್ನಲ್ಲಿ ಹಾಕುವ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ವೀಕ್ಷಿಸಬೇಕು’ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.ನಗರದ ಆಲೂರು ವೆಂಕಟರಾವ್ ಭವನದಲ್ಲಿ ಬುಧವಾರ ನಡೆದ ಸೂಕ್ಷ್ಮ ವೀಕ್ಷಕರು, ಪಿಆರ್ಒ, ಎಪಿಆರ್ಒಗಳಿಗೆ

ಧಾರವಾಡ: ‘ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಭಿನ್ನವಾಗಿದ್ದು, ಬ್ಯಾಲೆಟ್ ಪೇಪರ್ ನೀಡಲಾಗುತ್ತದೆ. ಅದನ್ನು ಭರ್ತಿ ಮಾಡಿ ಬ್ಯಾಲೆಟ್ ಬಾಕ್ಸ್ನಲ್ಲಿ ಹಾಕುವ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ವೀಕ್ಷಿಸಬೇಕು’ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.ನಗರದ ಆಲೂರು ವೆಂಕಟರಾವ್ ಭವನದಲ್ಲಿ ಬುಧವಾರ ನಡೆದ ಸೂಕ್ಷ್ಮ ವೀಕ್ಷಕರು, ಪಿಆರ್ಒ, ಎಪಿಆರ್ಒಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಅ.23ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಸಿಬ್ಬಂದಿ ಗೊಂದಲ ಮಾಡಿಕೊಳ್ಳಬಾರದು. ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಅರ್ಜಿ, ದಾಖಲೆ, ಲಕೋಟೆ ಕಳುಹಿಸುವಾಗ ಕಾಳಜಿ ವಹಿಸಬೇಕು’ ಎಂದರು.`ಜಿಲ್ಲೆಯಲ್ಲಿ 56 ಮತಗಟ್ಟೆಗಳಿದ್ದು, ಎಲ್ಲ ಸೌಲಭ್ಯ ನೀಡಲಾಗುತ್ತದೆ. ಕಳೆದ ಬಾರಿ 8 ಸಾವಿರದಿಂದ 9 ಸಾವಿರ ಮತಗಳು ಅಸಿಂಧುವಾಗಿದ್ದವು. ಮತದಾರರು ಬ್ಯಾಲೆಟ್ ಮೇಲೆ ಆದ್ಯತೆಯನ್ನು 1, 2, 3 ಎಂದು ಮಾತ್ರ ಬರೆಯಬೇಕು. ಹೆಸರು, `ಓಕೆ' ಮತ್ತಿತರ ಬರಹ ಬರೆದರೆ ಮತ ಅಸಿಂಧುವಾಗುತ್ತದೆ. ಇಂಡೆಲಿಬಲ್ ಇಂಕ್ ಅನ್ನು ಎಡಗೈ ತೋರುಬೆರಳಿಗೆ ಮಾತ್ರ ಹಾಕಬೇಕು’ ಎಂದು ತಿಳಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ತಹಶೀಲ್ದಾರ್ ಡಾ.ಡಿ.ಎಚ್.ಹೂಗಾರ ಇದ್ದರು.261015-24-1299825927