ದಸರಾ ವೇಳೆ ರಾವಣನನ್ನು ವಿಶೇಷವಾಗಿ ಪೂಜಿಸುತ್ತಾರೆ ಈ ಊರಿನ ಜನ!
ದಸರಾದಲ್ಲಿ ರಾವಣನ ಪ್ರತಿಕೃತಿಯನ್ನು ದಹಿಸಿ ಸಂಭ್ರಮಿಸುವುದು ಸಾಮಾನ್ಯ. ಆದರೆ, ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ರಾವಣನನ್ನು ದ್ವೇಷಿಸುವ ಬದಲು ಅತ್ಯಂತ ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ಗ್ರಾಮದಲ್ಲಿ ರಾವಣ ಜನಿಸಿದನೆಂಬ ನಂಬಿಕೆಯಿದೆ. ಹಾಗಾದರೆ, ಈ ಊರು ಯಾವುದು, ಇದರ ವಿಶೇಷತೆಗಳೇನು ಎಂಬ ಮಾಹಿತಿ ಇಲ್ಲಿದೆ.ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ಬಿಸ್ರಾಖ್ ಎ

ದಸರಾದಲ್ಲಿ ರಾವಣನ ಪ್ರತಿಕೃತಿಯನ್ನು ದಹಿಸಿ ಸಂಭ್ರಮಿಸುವುದು ಸಾಮಾನ್ಯ. ಆದರೆ, ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ರಾವಣನನ್ನು ದ್ವೇಷಿಸುವ ಬದಲು ಅತ್ಯಂತ ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ಗ್ರಾಮದಲ್ಲಿ ರಾವಣ ಜನಿಸಿದನೆಂಬ ನಂಬಿಕೆಯಿದೆ. ಹಾಗಾದರೆ, ಈ ಊರು ಯಾವುದು, ಇದರ ವಿಶೇಷತೆಗಳೇನು ಎಂಬ ಮಾಹಿತಿ ಇಲ್ಲಿದೆ.ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ಬಿಸ್ರಾಖ್ ಎಂಬ ಗ್ರಾಮದಲ್ಲಿ ಈ ವಿಶೇಷ ಆಚರಣೆಯಿದೆ. ಸ್ಥಳೀಯ ಪುರಾಣಗಳ ಪ್ರಕಾರ, ರಾವಣನ ತಂದೆ ವಿಶ್ರವಸ್ ಮುನಿಯು ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿ ತಪಸ್ಸು ಮಾಡಿದ್ದರು. ಆರಂಭದಲ್ಲಿ ಈ ಗ್ರಾಮವನ್ನು ವಿಶ್ರವಸ್ ಎಂದೇ ಕರೆಯಲಾಗುತ್ತಿತ್ತು. ಕಾಲಕ್ರಮೇಣ ಅದು ಬಿಸ್ರಾಖ್ ಆಗಿ ಬದಲಾಯಿತು.ಹೀಗಿದ್ದಾನೆ ‘ರಾಮಾಯಣ’ದ ರಾವಣಇಲ್ಲಿರುವ ಶಿವನ ಮಂದಿರದಲ್ಲಿ ರಾವಣನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ಸ್ಥಳೀಯರು ರಾವಣನನ್ನು ಮಹಾ ಬ್ರಾಹ್ಮಣ ಎಂದು ಪರಿಗಣಿಸಿ, ದಸರಾದಂದು ಪ್ರತಿಕೃತಿಯನ್ನು ಸುಡುವ ಬದಲು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಇದು ತಲೆಮಾರುಗಳಿಂದ ಅನುಸರಿಸಿಕೊಂಡು ಬರುತ್ತಿರುವ ಸಂಪ್ರದಾಯಿಕ ಆಚರಣೆಯಾಗಿದೆ.ಹಾಸನಾಂಬ ದೇವಾಲಯ: ಭಕ್ತರಿಗೆ ಸುಗಮ ದರ್ಶನಕ್ಕೆ ವ್ಯವಸ್ಥೆ‘ಈ ಊರು ರಾವಣನ ಜನ್ಮಸ್ಥಳ ಹಾಗೂ ಪುಲಸ್ತ್ಯ ಹಾಗೂ ವಿಶ್ರವಸ್ ಮುನಿಗಳ ಆಶ್ರಮವಾಗಿತ್ತು. ಇಲ್ಲಿ ವಿಜಯದಶಮಿಯಂದು ರಾವಣನ ಪ್ರತಿಕೃತಿಯನ್ನು ಎಂದಿಗೂ ಸುಡುವುದಿಲ್ಲ. ಬದಲಿಗೆ ಯಜ್ಞ-ಹವನಗಳ ಮುಂದೆ ರಾವಣನ ವಿಗ್ರಹವನ್ನಿಟ್ಟು ಪ್ರಾರ್ಥನೆ ಸಲ್ಲಿಸುತ್ತೇವೆ’ ಎಂದು ದೇವಾಲಯದ ಪ್ರಧಾನ ಅರ್ಚಕ ರಾಮದಾಸ್ ಅವರು ಎನ್ಡಿಟಿವಿಗೆ ತಿಳಿಸಿದ್ದಾರೆ. View this post on Instagram ಸ್ಥಳೀಯ ನಿವಾಸಿಯೊಬ್ಬರು ಮಾತನಾಡಿ, ‘ನಾವು ರಾವಣನನ್ನು ಅಜ್ಜ ಅಥವಾ ತಂದೆಯಂತೆ ಗೌರವಿಸುತ್ತೇವೆ. ಅದಕ್ಕಾಗಿಯೇ ಇಲ್ಲಿ ರಾವಣನ ಪ್ರತಿಕೃತಿಯ ದಹನ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.ಇಲ್ಲಿರುವ ಶಿವಲಿಂಗ ಭೂಮಿ ಮೇಲೆ 2.5 ಅಡಿ ಮಾತ್ರ ಗೋಚರಿಸುತ್ತದೆ. ಉಳಿದ 8 ಅಡಿಯಷ್ಟು ಭೂಮಿಯಲ್ಲಿದೆ. ಪೌರಾಣಿಕ ಕಥೆಗಳ ಪ್ರಕಾರ, ರಾವಣನು ಶಿವನನ್ನು ಒಲಿಸಿಕೊಳ್ಳಲು ಇಲ್ಲಿ ಸುದೀರ್ಘವಾದ ತಪಸ್ಸು ಮಾಡಿದ್ದನು. ಅಷ್ಟೇ ಅಲ್ಲದೆ, ದೇವಾಲಯದ ಆವರಣದಲ್ಲಿ ಅತ್ಯಂತ ಪ್ರಾಚೀನ ಹಾಗೂ ರಹಸ್ಯ ಸುರಂಗವಿದೆ. ಪ್ರಸ್ತುತ ಸುರಕ್ಷತೆಯ ದೃಷ್ಟಿಯಿಂದ ಅದನ್ನು ಮುಚ್ಚಲಾಗಿದೆ. ಪುರಾತತ್ವ ಸಂಶೋಧನೆಗಳ ಪ್ರಕಾರ, ಈ ಸುರಂಗದ ಮತ್ತೊಂದು ತುದಿಯು ಗಾಜಿಯಾಬಾದ್ನ ಸುಪ್ರಸಿದ್ಧ ದುಧೇಶ್ವರ ನಾಥ್ ಮಹಾದೇವ ದೇವಾಲಯಕ್ಕೆ ಸಂಪರ್ಕ ಕಲ್ಪಿಸುತ್ತದೆ.ಭೇಟಿಗೆ ಸೂಕ್ತ ಸಮಯಮಹಾಶಿವರಾತ್ರಿ, ದಸರಾ ಹಾಗೂ ಶ್ರಾವಣ ಮಾಸದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ.ತಲುಪುವುದು ಹೇಗೆ?ನೋಯ್ಡಾ ಸೆಕ್ಟರ್ 52 ಮೆಟ್ರೊ ನಿಲ್ದಾಣದಿಂದ ಈ ಗ್ರಾಮವು ಸುಮಾರು 9 ಕಿ.ಮೀ ದೂರದಲ್ಲಿದೆ.ದೆಹಲಿಯಿಂದ ಸುಮಾರು 35 ರಿಂದ 40 ಕಿ.ಮೀ ದೂರದಲ್ಲಿದ್ದು, ಬಸ್ ಅಥವಾ ಟ್ಯಾಕ್ಸಿ ಮೂಲಕ ಸುಲಭವಾಗಿ ತಲುಪಬಹುದು.