ಕುಮಾರಸ್ವಾಮಿ ಗೋಸುಂಬೆ ರೀತಿ, ಯಾವಾಗ ಹೇಗೆ ಬಣ್ಣ ಬದಲಾಯಿಸುತ್ತಾರೋ ಗೊತ್ತಾಗಲ್ಲ: ಹೆಚ್ಸಿ ಬಾಲಕೃಷ್ಣ
ಮೈಸೂರು: ಕುಮಾರಸ್ವಾಮಿ (HD Kumaraswamy) ಗೋಸುಂಬೆ ರೀತಿ. ಯಾವಾಗ ಹೇಗೆ ಬಣ್ಣ ಬದಲಾಯಿಸುತ್ತಾರೋ ಗೊತ್ತಾಗುವುದಿಲ್ಲ ಎಂದು ಸಚಿವ ಬಾಲಕೃಷ್ಣ (HC Balakrishna) ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಣ್ಣ ಬದಲಾಯಿಸುವುದನ್ನು ಕುಮಾರಸ್ವಾಮಿಯವರನ್ನ ನೋಡಿ ಕಲಿಯಬೇಕು. ಸಿದ್ದರಾಮಯ್ಯರನ್ನು ಹಿಂದೆ ಕುಮಾರಸ್ವಾಮಿ ಟೀಕಿಸುತ್ತಿದ್ದರು. ಈಗ

ಮೈಸೂರು: ಕುಮಾರಸ್ವಾಮಿ (HD Kumaraswamy) ಗೋಸುಂಬೆ ರೀತಿ. ಯಾವಾಗ ಹೇಗೆ ಬಣ್ಣ ಬದಲಾಯಿಸುತ್ತಾರೋ ಗೊತ್ತಾಗುವುದಿಲ್ಲ ಎಂದು ಸಚಿವ ಬಾಲಕೃಷ್ಣ (HC Balakrishna) ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಣ್ಣ ಬದಲಾಯಿಸುವುದನ್ನು ಕುಮಾರಸ್ವಾಮಿಯವರನ್ನ ನೋಡಿ ಕಲಿಯಬೇಕು. ಸಿದ್ದರಾಮಯ್ಯರನ್ನು ಹಿಂದೆ ಕುಮಾರಸ್ವಾಮಿ ಟೀಕಿಸುತ್ತಿದ್ದರು. ಈಗ ಸಿದ್ದರಾಮಯ್ಯ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಅವರ ಪ್ರೀತಿಯೂ ಅಪಾಯಕಾರಿ, ಅವರ ಮತ್ತೊಂದು ಕೂಡ ಅಪಾಯಕಾರಿ. ಅವರ ಎಲ್ಲಾ ವಿಚಾರ ಗೊತ್ತಾದ ಮೇಲೆಯೇ ನಾನು ಅವರಿಂದ ದೂರವಾಗಿದ್ದು ಎಂದರು. ಇದನ್ನೂ ಓದಿ: ನ.1ರಿಂದ ಅಪರಿಚಿತ ಕರೆ ಮಾಡಿದವರ ಹೆಸರೂ ಮೊಬೈಲ್ನಲ್ಲಿ ಪ್ರದರ್ಶನ ಯಾರಾದರೂ ಈ ದೇಶದಲ್ಲಿ ಪ್ರತಿನಿತ್ಯ ಸುದ್ದಿಗೋಷ್ಠಿ ಮಾಡುವ ಕೇಂದ್ರ ಸಚಿವ ಇದ್ದರಾ? ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಮಾತನಾಡುವುದನ್ನು ನೋಡಿದ್ದೇವೆ. ಇವರು ದಿನ ಬೆಳಗ್ಗೆ ಎದ್ದು ಆರೋಪ ಮಾಡುವುದೇ ಇವರ ಕೆಲಸ. ಇವರ ಬಳಿ ಕೇಂದ್ರ ಸರ್ಕಾರ ಇದೆ. ಕುಮಾರಸ್ವಾಮಿ ಅವರೇ ಈ ಪ್ರಕರಣವನ್ನ ಸಿಬಿಐಗೆ ಕೊಟ್ಟು ತನಿಖೆ ಮಾಡಿಸಲಿ. ಇವರ ಬಳಿ ಏನೇನು ದಾಖಲೆ ಇದೆ ಎಲ್ಲವೂ ಅಲ್ಲಿಗೆ ಕೊಡಲಿ. ಸುಮ್ಮನೆ ಮಾತನಾಡುವುದು ಬೇಡ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: Pakistan | ಶಾಲಾ ಮೇಲ್ಛಾವಣಿ ಕುಸಿದು 21 ಮಕ್ಕಳ ದುರಂತ ಅಂತ್ಯ – ಶಿಕ್ಷಕಿಯೂ ಸಾವು ಅಪಪ್ರಚಾರ ಮಾಡಬಾರದೆಂದು ಸಿದ್ದರಾಮಯ್ಯ ತಡೆಯಾಜ್ಞೆ ತಂದಿದ್ದಾರೆ. ಅದು ಅವರ ನಿರ್ಧಾರ. ನಮ್ಮ ಸರ್ಕಾರದಲ್ಲಿ ಅಂತಹದ್ದು ಯಾವುದೂ ನಡೆದಿಲ್ಲ. ಇದರ ಬಗ್ಗೆ ಆರೋಪ ಮಾಡುವ ಕುಮಾರಸ್ವಾಮಿ ಅವರನ್ನೇ ಕೇಳಿ ಎಂದು ಹರಿಹಾಯ್ದರು. ಇದನ್ನೂ ಓದಿ: ಇಸ್ಲಾಂಗೆ ಮತಾಂತರಗೊಂಡ ಹಿಂದೂ ವ್ಯಕ್ತಿಯು ʻಹಿಂದುಳಿದ ವರ್ಗದ ಮುಸ್ಲಿಂʼ ಸ್ಥಾನಮಾನ ಪಡೆಯಲು ಸಾಧ್ಯವಿಲ್ಲ: ಸುಪ್ರೀಂ