ರೆಸಿಪಿ: ಸಂಜೆ ಟೀ, ಕಾಫಿ ಜೊತೆ ತಿನ್ನಬಹುದಾದ ಸಾಬುದಾನ ವಡೆ ಹೀಗೆ ಮಾಡಿಕೊಳ್ಳಿ
ಸಂಜೆ ವೇಳೆ ಟೀ ಹಾಗೂ ಕಾಫಿ ಜೊತೆಗೆ ಸಾಬುದಾನ ವಡೆ ಮನೆಯಲ್ಲೇ ಮಾಡಿಕೊಂಡು ತಿನ್ನಬಹುದು. ಸಾಬುದಾನ ವಡೆ ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನದ ವಿವರ ಈ ಕೆಳಗಿದೆ.ರೆಸಿಪಿ: ಬೂದು ಕುಂಬಳಕಾಯಿಂದ ಮನೆಯಲ್ಲೇ ಮಾಡಿ ಮೃದುವಾದ ದೋಸೆರೆಸಿಪಿ: ಬಾಳೆಮೋತೆ ಆಂಬೊಡೆ ಕುರ್ಕುರೆಬೇಕಾಗುವ ಸಾಮಗ್ರಿಗಳು...• ಸಾಬುದಾನ: 1 ಕಪ್ • ಆಲೂಗಡ್ಡೆ: 2 • ಕಡಲೆಕಾಯಿ: ಅರ್ಧ ಕಪ್

ಸಂಜೆ ವೇಳೆ ಟೀ ಹಾಗೂ ಕಾಫಿ ಜೊತೆಗೆ ಸಾಬುದಾನ ವಡೆ ಮನೆಯಲ್ಲೇ ಮಾಡಿಕೊಂಡು ತಿನ್ನಬಹುದು. ಸಾಬುದಾನ ವಡೆ ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನದ ವಿವರ ಈ ಕೆಳಗಿದೆ.ರೆಸಿಪಿ: ಬೂದು ಕುಂಬಳಕಾಯಿಂದ ಮನೆಯಲ್ಲೇ ಮಾಡಿ ಮೃದುವಾದ ದೋಸೆರೆಸಿಪಿ: ಬಾಳೆಮೋತೆ ಆಂಬೊಡೆ ಕುರ್ಕುರೆಬೇಕಾಗುವ ಸಾಮಗ್ರಿಗಳು...• ಸಾಬುದಾನ: 1 ಕಪ್ • ಆಲೂಗಡ್ಡೆ: 2 • ಕಡಲೆಕಾಯಿ: ಅರ್ಧ ಕಪ್ • ಹಸಿಮೆಣಸಿನಕಾಯಿ: 2 • ಜೀರಿಗೆ: 1 ಚಮಚ• ಕೊತ್ತಂಬರಿ ಸೊಪ್ಪು• ನಿಂಬೆ ರಸ: 1 ಚಮಚ• ರುಚಿಗೆ ತಕ್ಕಷ್ಟು ಉಪ್ಪು• ಎಣ್ಣೆಮಾಡುವ ವಿಧಾನ...ಮೊದಲು 1 ಕಪ್ ಸಾಬುದಾನವನ್ನು ನೀರಿನಲ್ಲಿ 4 ರಿಂದ 5 ಗಂಟೆಗಳ ಕಾಲ ನೆನೆಸಿಡಿ. ನಂತರ ನೀರನ್ನೆಲ್ಲಾ ಸಂಪೂರ್ಣವಾಗಿ ಸೋಸಿಕೊಳ್ಳಿ. ಬಳಿಕ ಒಂದು ದೊಡ್ಡ ಪಾತ್ರೆಯಲ್ಲಿ ನೆನೆಸಿದ ಸಾಬುದಾನ, ಬೇಯಿಸಿ ಹಿಸುಕಿದ ಆಲೂಗಡ್ಡೆ, ಹುರಿದ ಕಡಲೆಕಾಯಿ ಪುಡಿ, ಹಸಿಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ ಸೊಪ್ಪು, ನಿಂಬೆ ರಸ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.ಈ ಮಿಶ್ರಣದಿಂದ ಸ್ವಲ್ಪ ಭಾಗವನ್ನು ತೆಗೆದುಕೊಂಡು ಚಪ್ಪಟೆಯಾದ ವಡೆಯಾಕಾರಕ್ಕೆ ತಟ್ಟಿ. ಬಳಿಕ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಮಧ್ಯಮ ಉರಿಯಲ್ಲಿ ವಡೆಗಳನ್ನು ಹಾಕಿ, ಎರಡೂ ಬದಿ ಗೋಲ್ಡನ್ ಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಕರಿಯಿರಿ. ಬಳಿಕ ತಯಾರಾದ ಗರಿಗರಿಯಾದ ಸಾಬುದಾನ ವಡೆಯನ್ನು ತಟ್ಟೆಗೆ ಹಾಕಿ. ಈಗ ಚಟ್ನಿ ಅಥವಾ ಮೊಸರಿನೊಂದಿಗೆ ಸಾಬುದಾನ ವಡೆ ಸವಿಯಿರಿ.