ಹುಬ್ಬಳ್ಳಿ| ನ್ಯಾಯಾಲಯದ ಮೇಲೆ ರಾಜಕೀಯ ಒತ್ತಡ ಸಲ್ಲದು: ಪ್ರೊ.ಎಂ.ನಾಗರಾಜ
ಹುಬ್ಬಳ್ಳಿ: ‘ಎಸ್ಐಆರ್ ಪ್ರಕ್ರಿಯೆ ವಿಷಯದಲ್ಲಿ ನ್ಯಾಯಾಲಯದ ಮೇಲೆ ರಾಜಕೀಯ ಒತ್ತಡ ಹೇರುವ ಉದ್ದೇಶದಿಂದ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ’ ಎಂದು ರಾಜ್ಯಸಭಾ ಸದಸ್ಯ, ಕೇರಳ ರಾಜ್ಯದ ಪ್ರಭಾರಿ ಪ್ರೊ.ಎಂ.ನಾಗರಾಜ ಆರೋಪಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮುಖ್ಯ ಚುನಾವಣಾ ಆಯುಕ್ತರಿಗೆ ಸಂಬಂಧಿಸಿದ ವಿಷಯಗಳು

ಹುಬ್ಬಳ್ಳಿ: ‘ಎಸ್ಐಆರ್ ಪ್ರಕ್ರಿಯೆ ವಿಷಯದಲ್ಲಿ ನ್ಯಾಯಾಲಯದ ಮೇಲೆ ರಾಜಕೀಯ ಒತ್ತಡ ಹೇರುವ ಉದ್ದೇಶದಿಂದ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ’ ಎಂದು ರಾಜ್ಯಸಭಾ ಸದಸ್ಯ, ಕೇರಳ ರಾಜ್ಯದ ಪ್ರಭಾರಿ ಪ್ರೊ.ಎಂ.ನಾಗರಾಜ ಆರೋಪಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮುಖ್ಯ ಚುನಾವಣಾ ಆಯುಕ್ತರಿಗೆ ಸಂಬಂಧಿಸಿದ ವಿಷಯಗಳು ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯ ಹಂತದಲ್ಲಿವೆ. ಈ ವೇಳೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವುದು ಸೂಕ್ತವಲ್ಲ’ ಎಂದು ತಿಳಿಸಿದ್ದಾರೆ.‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮತ್ತು ಸರ್ಕಾರದ ನಿರ್ಧಾರಗಳನ್ನು ಪ್ರಶ್ನಿಸುವ ಹಕ್ಕಿದೆ. ಆದರೆ, ಈ ಹಕ್ಕುಗಳನ್ನು ಚಲಾಯಿಸುವಾಗ ಸಂವಿಧಾನಾತ್ಮಕ ಸಂಸ್ಥೆಗಳ ಘನತೆ ಮತ್ತು ಸ್ವಾಯತ್ತತೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುವ ಯಾವುದೇ ಚಟುವಟಿಕೆಯು ಕಾನೂನಿನ ಆಡಳಿತ ಮತ್ತು ನ್ಯಾಯಾಂಗದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ದುರ್ಬಲಗೊಳಿಸಬಾರದು’ ಎಂದೂ ತಿಳಿಸಿದ್ದಾರೆ.‘ಎಸ್ಐಆರ್ ವಿಷಯದಲ್ಲಿ ಕಾನೂನು ಪ್ರಕ್ರಿಯೆಯನ್ನು ಗೌರವಿಸುವುದು ಎಲ್ಲ ರಾಜಕೀಯ ಪಕ್ಷಗಳ ಕರ್ತವ್ಯವಾಗಿದೆ. ನ್ಯಾಯಾಲಯದ ತೀರ್ಪಿನ ಕುರಿತು ಭಿನ್ನಾಭಿಪ್ರಾಯವಿದ್ದಲ್ಲಿ, ಅವುಗಳನ್ನು ವ್ಯಕ್ತಪಡಿಸಲು ಕಾನೂನಿನ ಮಾರ್ಗಗಳನ್ನು ಅನುಸರಿಸಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.261015-24-1811762194