ಏಷ್ಯನ್ ಗೇಮ್ಸ್ ಪದಕ ವಿಜೇತರನ್ನು ಸನ್ಮಾನಿಸಿದ ಮೋದಿ: ಆಟಗಾರರಿಂದ ಜೆರ್ಸಿ, ಹಾಕಿ ಸ್ಟಿಕ್ ಸ್ವೀಕರಿಸಿದ ಪ್ರಧಾನಿ
ನವದೆಹಲಿ: ಜಪಾನ್ನ ಐಚಿ-ನಗೋಯಾದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ನಲ್ಲಿ (Asian Games) 85 ಪದಕಗಳನ್ನು ಗೆದ್ದ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ (PM Modi) ಅವರಿಂದು ಭೇಟಿ ಮಾಡಿ, ಸನ್ಮಾನಿಸಿದರು. ಈ ವೇಳೆ ಪ್ರಧಾನಿ ಮೋದಿ ಅವರು ಎಲ್ಲಾ ಕ್ರೀಡಾಪಟುಗಳನ್ನು ಭೇಟಿಯಾಗಿ ಸಂವಾದ ನಡೆಸಿದರು. ಬಳಿಕ ಕ್ರೀಡಾಪಟುಗಳು ತಾವು ಸಹಿ ಹಾಕಿದ ಜೆರ್ಸಿಗಳು, ಸಹಿ ಮಾ

ನವದೆಹಲಿ: ಜಪಾನ್ನ ಐಚಿ-ನಗೋಯಾದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ನಲ್ಲಿ (Asian Games) 85 ಪದಕಗಳನ್ನು ಗೆದ್ದ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ (PM Modi) ಅವರಿಂದು ಭೇಟಿ ಮಾಡಿ, ಸನ್ಮಾನಿಸಿದರು. ಈ ವೇಳೆ ಪ್ರಧಾನಿ ಮೋದಿ ಅವರು ಎಲ್ಲಾ ಕ್ರೀಡಾಪಟುಗಳನ್ನು ಭೇಟಿಯಾಗಿ ಸಂವಾದ ನಡೆಸಿದರು. ಬಳಿಕ ಕ್ರೀಡಾಪಟುಗಳು ತಾವು ಸಹಿ ಹಾಕಿದ ಜೆರ್ಸಿಗಳು, ಸಹಿ ಮಾಡಿದ ಹಾಕಿ ಸ್ಟಿಕ್ ಅನ್ನು ಪ್ರಧಾನಿಗೆ ಹಸ್ತಾಂತರಿಸುವುದರ ಜೊತೆಗೆ ಅವರಿಗೆ ಶಲ್ಯ ಹೊದಿಸಿ ಸನ್ಮಾನಿಸಿದರು. ಇದನ್ನೂ ಓದಿ: ಸಿಜೆಪಿ, ಕಾಂಗ್ರೆಸ್ ಎರಡೂ ಒಂದೇ – ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ #WATCH | Delhi: Interacting with the Indian contingent that participated in the Asian Games 2026, PM Narendra Modi says, “For the first time since 1982, India has achieved success in the marathon. This is truly heartening. I would like to especially commend our daughters. Out of the 85 medals India has won, 38 have been secured by our women athletes, including 11 gold medals. These medals are not just mere numbers; they represent a powerful image of a New India. Today, India is winning medals in sports where we had never previously won anything in the history of the Asian Games, such as in Mixed Martial Arts, Soft Tennis, and certain sailing events. Our athletes have created history by winning medals in these disciplines for the first time…Over the last 12 years, India has also worked with great patience, diligence, and dedication to support its sportspersons and its sports ecosystem.” (Video source: DD) — ANI (@ANI) October 15, 2026 ಸನ್ಮಾನದ ಬಳಿಕ ಮೋದಿ ಮಾತನಾಡಿ, ಈ ಬಾರಿ ಏಷ್ಯನ್ ಗೇಮ್ಸ್ ನಮಗೆ ಸ್ಮರಣೀಯವಾಗಿದ್ದು, ನಮ್ಮ ಪುರುಷ ಮತ್ತು ಮಹಿಳಾ ಹಾಕಿ ಎರಡು ತಂಡಗಳು ಚಿನ್ನ ಪದಕಗಳನ್ನು ತಮ್ಮದಾಗಿಸಿಕೊಂಡಿವೆ. ಮಹಿಳಾ ಹಾಕಿ ತಂಡವು 44 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಅಂತ್ಯಗೊಳಿಸಿ ಭಾರತಕ್ಕೆ ಚಿನ್ನವನ್ನು ತಂದುಕೊಟ್ಟಿವೆ. ಕ್ರಿಕೆಟ್ನಲ್ಲಿ ನಮ್ಮ ಎರಡೂ ತಂಡಗಳು ಸತತ ಎರಡನೇ ಬಾರಿಗೆ ಪದಕಗಳನ್ನು ಗೆದ್ದು ತಮ್ಮದೇ ಹಿಂದಿನ ದಾಖಲೆಯನ್ನು ಪುನರಾವರ್ತಿಸಿವೆ. ಕಬಡ್ಡಿಯಲ್ಲಿ ನಮ್ಮ ಪುರುಷ ಮತ್ತು ಮಹಿಳಾ ತಂಡಗಳು ಚಿನ್ನ ಗೆದ್ದಿವೆ. ಅದೇ ರೀತಿ ನಾವು ಅರ್ಚರಿಯಲ್ಲಿ ಐದು ಚಿನ್ನದ ಪದಕಗಳನ್ನು ಪಡೆದಿದ್ದೇವೆ. ಶೂಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೋಡಿದ್ದೇವೆ ಮತ್ತು ಬಾಕ್ಸಿಂಗ್, ಕುಸ್ತಿಯಲ್ಲಿ ಪ್ರಮುಖ ಯಶಸ್ಸು ಸಿಕ್ಕಿದೆ. ನಮ್ಮ ಕ್ರೀಡಾಪಟುಗಳು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ ಮತ್ತು 28 ವರ್ಷಗಳ ಬಳಿಕ ನಾವು ವೇಟ್ಲಿಫ್ಟಿಂಗ್ನಲ್ಲೂ ಪದಕ ಪಡೆದಿದ್ದೇವೆ ಎಂದು ಶುಭ ಹಾರೈಸಿದ್ದಾರೆ. ಈ ಬಾರಿ ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ಒಟ್ಟು 21 ಚಿನ್ನ, 27 ಬೆಳ್ಳಿ ಮತ್ತು 37 ಕಂಚು ಸೇರಿದಂತೆ ಒಟ್ಟು 85 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಐತಿಹಾಸಿಕ 106 ಪದಕಗಳ ಸಾಧನೆಗಿಂತ ಈ ಬಾರಿ ಪದಕಗಳ ಸಂಖ್ಯೆ ಇಳಿಕೆಯಾಗಿದ್ದರೂ, 2026ರ ಈ ಪದಕಗಳ ಬೇಟೆಯೂ ಭಾರತದ ಎರಡನೇ ಅತ್ಯಂತ ಯಶಸ್ವಿ ಏಷ್ಯನ್ ಗೇಮ್ಸ್ ಓಟವಾಗಿದೆ.ಇದನ್ನೂ ಓದಿ: ನಮ್ಮ ಆವರಣದಲ್ಲಿ ಪ್ರತಿಭಟನೆ ನಡೆಸಿ ನ್ಯಾಯಾಂಗವನ್ನು ಬೆದರಿಸಲು ಸಾಧ್ಯವಿಲ್ಲ: ಸುಪ್ರೀಂ ಎಚ್ಚರಿಕೆ