ಹೊರ್ಮುಜ್: ಸಮುದ್ರದಡಿಯಲ್ಲಿದ್ದ ಜಲ ಬಾಂಬ್ಗೆ ಡಿಕ್ಕಿ ಹೊಡೆದು ಮುಳುಗಿದ ಹಡಗು
ದುಬೈ (ಎಪಿ): ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಮಾಡುತ್ತಿದ್ದ ಹಡಗೊಂದು ಸಮುದ್ರದಡಿಯಲ್ಲಿದ್ದ ಜಲ ಬಾಂಬ್ಗೆ ಡಿಕ್ಕಿ ಹೊಡೆದು ಮುಳುಗಿದೆ ಎಂದು ಇರಾನ್ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತಿಳಿಸಿದೆ.ಅಮೆರಿಕದ ಜೊತೆಗೆ ಯುದ್ಧ ಆರಂಭಗೊಂಡ ಬಳಿಕ ಸ್ಫೋಟಕಕ್ಕೆ ಡಿಕ್ಕಿ ಹೊಡೆದು ಮೊದಲ ಬಾರಿಗೆ ಹಡಗು ಮುಳುಗಡೆಯಾಗಿದೆ.‘ಅತ್ಯಂತ ಅಪಾಯಕಾರಿಯಾದ, ಅಕ್ರಮವಾದ ಮಾರ್ಗದಲ್ಲ

ದುಬೈ (ಎಪಿ): ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಮಾಡುತ್ತಿದ್ದ ಹಡಗೊಂದು ಸಮುದ್ರದಡಿಯಲ್ಲಿದ್ದ ಜಲ ಬಾಂಬ್ಗೆ ಡಿಕ್ಕಿ ಹೊಡೆದು ಮುಳುಗಿದೆ ಎಂದು ಇರಾನ್ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತಿಳಿಸಿದೆ.ಅಮೆರಿಕದ ಜೊತೆಗೆ ಯುದ್ಧ ಆರಂಭಗೊಂಡ ಬಳಿಕ ಸ್ಫೋಟಕಕ್ಕೆ ಡಿಕ್ಕಿ ಹೊಡೆದು ಮೊದಲ ಬಾರಿಗೆ ಹಡಗು ಮುಳುಗಡೆಯಾಗಿದೆ.‘ಅತ್ಯಂತ ಅಪಾಯಕಾರಿಯಾದ, ಅಕ್ರಮವಾದ ಮಾರ್ಗದಲ್ಲಿ ಹಡಗು ಬುಧವಾರ ಸಂಚರಿಸುತ್ತಿತ್ತು. ಅದರಲ್ಲಿ ಸುಮಾರು 2,500 ಕಂಟೇನರ್ಗಳಿದ್ದವು. ಸ್ಫೋಟ ಗೊಂಡ ತಕ್ಷಣವೇ ಬೆಂಕಿ ಹತ್ತಿಕೊಂಡಿತು. ನಂತರ ಮುಳುಗಡೆಯಾಗಿದೆ’ ಎಂದು ಇರಾನ್ ತಿಳಿಸಿದೆ.ತಮ್ಮ ಅನುಮತಿಯಿಲ್ಲದೇ ಈ ಹಡಗು ಸಂಚರಿಸಿದೆ. ಈ ಬಗ್ಗೆ ಎಚ್ಚರಿಕೆ ನೀಡಿದರೂ, ಅಕ್ರಮ ಮಾರ್ಗದಲ್ಲಿ ಸಂಚರಿಸಿದೆ ಎಂದು ಆರೋಪಿಸಿದೆ.ಒಮಾನ್ನ ದೂರದಲ್ಲಿ ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ಹಡಗುಗಳಿಗೆ ಅಮೆರಿಕವು ಮಾರ್ಗದರ್ಶನ ಮಾಡುತ್ತಿದೆ. ಹಡಗು ಮುಳುಗಡೆಯಾದ ಕುರಿತು ಬ್ರಿಟನ್ನ ಕಡಲ ವ್ಯಾಪಾರಗಳ ಕಾರ್ಯಾಚರಣೆಗಳ ಮೇಲ್ವಿಚಾರಣೆಯು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.261015-51-691324885
Read the complete story at Prajavani