ನಗರದಲ್ಲಿ ನಕಲಿ ವೈದ್ಯರ ಜಾಲ ಸಕ್ರಿಯ: 4 ವರ್ಷಗಳಲ್ಲಿ ನೂರಕ್ಕೂ ಅಧಿಕ ಮಂದಿ ಪತ್ತೆ
ಬೆಂಗಳೂರು: ನಗರದಲ್ಲಿ ನಕಲಿ ಔಷಧ ದಂಧೆಯ ಜತೆಗೆ, ಅರ್ಹತೆ ಹಾಗೂ ಪರವಾನಗಿ ಇಲ್ಲದಿದ್ದರೂ ಚಿಕಿತ್ಸೆ ನೀಡುವ ನಕಲಿ ವೈದ್ಯರ ಜಾಲವೂ ಸಕ್ರಿಯವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನೂರಕ್ಕೂ ಅಧಿಕ ನಕಲಿ ವೈದ್ಯರನ್ನು ಆರೋಗ್ಯ ಇಲಾಖೆ ಪತ್ತೆ ಮಾಡಿದೆ. ಪೊಲೀಸ್ ಇಲಾಖೆ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಜಂಟಿಯಾಗಿ ನಕಲಿ ಔಷಧಗಳ ಜಾಲವನ್ನು ಪತ್ತೆ ಹಚ್ಚಲು ಕಾರ್ಯ

ಬೆಂಗಳೂರು: ನಗರದಲ್ಲಿ ನಕಲಿ ಔಷಧ ದಂಧೆಯ ಜತೆಗೆ, ಅರ್ಹತೆ ಹಾಗೂ ಪರವಾನಗಿ ಇಲ್ಲದಿದ್ದರೂ ಚಿಕಿತ್ಸೆ ನೀಡುವ ನಕಲಿ ವೈದ್ಯರ ಜಾಲವೂ ಸಕ್ರಿಯವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನೂರಕ್ಕೂ ಅಧಿಕ ನಕಲಿ ವೈದ್ಯರನ್ನು ಆರೋಗ್ಯ ಇಲಾಖೆ ಪತ್ತೆ ಮಾಡಿದೆ. ಪೊಲೀಸ್ ಇಲಾಖೆ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಜಂಟಿಯಾಗಿ ನಕಲಿ ಔಷಧಗಳ ಜಾಲವನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಿಡದಿಯ ಕುರುಬರಕೇರನ ಹಳ್ಳಿಯ ಫಾರ್ಮ್ ಹೌಸ್ನಲ್ಲಿ ಕಳೆದ ತಿಂಗಳು ನಡೆಸಿದ ದಾಳಿಯಲ್ಲಿ, ಸುಮಾರು ₹ 5 ಕೋಟಿ ಮೌಲ್ಯದ ನಕಲಿ ಔಷಧಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದ ಬಳಿಕ ನಕಲಿ ಔಷಧಗಳ ಪತ್ತೆ ಕಾರ್ಯ ಚುರುಕುಗೊಂಡಿದೆ. ಇನ್ನೊಂದೆಡೆ ನಕಲಿ ವೈದ್ಯರ ಹಾವಳಿಯೂ ನಗರದಲ್ಲಿ ಹೆಚ್ಚಾಗಿದ್ದು, ಕೆಪಿಎಂಇ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ) ಕಾಯ್ದೆಯಡಿ ಆರೋಗ್ಯಾಧಿಕಾರಿಗಳ ತಂಡವು ವಿವಿಧ ಆಸ್ಪತ್ರೆಗಳು, ಕ್ಲಿನಿಕ್ಗಳು ಹಾಗೂ ಪ್ರಯೋಗಾಲಯಗಳಿಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದೆ. ನಾಲ್ಕು ವರ್ಷಗಳಲ್ಲಿ 107 ನಕಲಿ ವೈದ್ಯರನ್ನು ನಗರದಲ್ಲಿ ಪತ್ತೆ ಮಾಡಲಾಗಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೆಪಿಎಂಇ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿಯಾಗಬೇಕು. ಆದರೆ, ಕೆಲವರು ನೋಂದಣಿ ಮಾಡಿಕೊಳ್ಳದೆಯೇ ಚಿಕಿತ್ಸೆ ಒದಗಿಸುತ್ತಿದ್ದಾರೆ. ವೈದ್ಯಕೀಯ ವೃತ್ತಿ ನಡೆಸಲು ಅಗತ್ಯ ವಿದ್ಯಾರ್ಹತೆ ಇಲ್ಲದವರೂ ಅನಧಿಕೃತವಾಗಿ ಕ್ಲಿನಿಕ್ ಮತ್ತು ಪ್ರಯೋಗಾಲಯಗಳನ್ನು ನಡೆಸುತ್ತಿದ್ದಾರೆ. ಅಂತಹ ಕ್ಲಿನಿಕ್ ಹಾಗೂ ಪ್ರಯೋಗಾಲಯಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಈ ವೇಳೆ ಗುರುತಿಸಲಾದ ಕ್ಲಿನಿಕ್ಗಳಲ್ಲಿ ಹೆಚ್ಚಿನವು ಪರವಾನಗಿ ಹೊಂದಿಲ್ಲದಿರುವುದು ತಿಳಿದುಬಂದಿದೆ.ಕ್ಲಿನಿಕ್ಗಳಿಗೆ ಬೀಗ: ವೈದ್ಯಕೀಯ ವೃತ್ತಿ ನಡೆಸಲು ಅಗತ್ಯ ವಿದ್ಯಾರ್ಹತೆ, ಪರವಾನಗಿ ಹೊಂದಿಲ್ಲದವರನ್ನು ನಕಲಿ ವೈದ್ಯರ ಪಟ್ಟಿಗೆ ಸೇರಿಸಿ, ಕಾನೂನಿನ ಅಡಿ ಪ್ರಕರಣ ದಾಖಲಿಸಲಾಗಿದೆ. ಕ್ಲಿನಿಕ್ಗಳಿಗೆ ಬೀಗ ಸೇರಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗುರುತಿಸಲಾದ ನಗರದ ಬಹುತೇಕ ನಕಲಿ ವೈದ್ಯರ ಕ್ಲಿನಿಕ್ಗಳಿಗೆ ನೋಟಿಸ್ ನೀಡಿ, ಬಂದ್ ಮಾಡಲಾಗಿದೆ. ಗುರುತಿಸಲಾದ ನಕಲಿ ವೈದ್ಯರ ಪಟ್ಟಿಯಲ್ಲಿ ಅಲೋಪಥಿ ವೈದ್ಯರ ಜತೆಗೆ ಹೋಮಿಯೋಪಥಿ, ಆಯುರ್ವೇದ, ನ್ಯಾಚುರೋಪಥಿ, ಯುನಾನಿ ಹಾಗೂ ಸಿದ್ಧ ವೈದ್ಯರೂ ಸೇರಿದ್ದಾರೆ. ‘ವೈದ್ಯಕೀಯ ವೃತ್ತಿ ನಡೆಸಲು ಅಗತ್ಯ ವಿದ್ಯಾರ್ಹತೆ ಇಲ್ಲದವರೂ ಅನಧಿಕೃತವಾಗಿ ಕ್ಲಿನಿಕ್ ಮತ್ತು ಪ್ರಯೋಗಾಲಯಗಳನ್ನು ನಡೆಸುತ್ತಿದ್ದಾರೆ. ಕೆಲವರು ಪರವಾನಗಿ ಪಡೆಯದೆ ಕ್ಲಿನಿಕ್ ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ನಕಲಿ ಕ್ಲಿನಿಕ್ ಮತ್ತು ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹವರ ವಿರುದ್ಧ ಕಾನೂನಿನ ಅಡಿಯೂ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. ಯು.ಟಿ. ಖಾದರ್ ಆರೋಗ್ಯ ಸಚಿವಎಲ್ಲ ಕಡೆ ನಕಲಿ ಹಾವಳಿ ಜಾಸ್ತಿಯಾಗಿದೆ. ನಕಲಿ ಔಷಧಗಳ ಜತೆಗೆ ನಕಲಿ ವೈದ್ಯರಿಗೂ ಕಡಿವಾಣ ಹಾಕಲಾಗುವುದು. ಜನರು ಮಾಹಿತಿ ನೀಡಿದರೂ ಕಾನೂನಿನಡಿ ಕ್ರಮವಹಿಸಲಾಗುತ್ತದೆ₹ 5 ಲಕ್ಷ ದಂಡ ಜೈಲು ಶಿಕ್ಷೆ ಆರೋಗ್ಯ ಇಲಾಖೆ ಪ್ರಕಾರ ವೈದ್ಯಕೀಯ ಮಂಡಳಿಗಳಲ್ಲಿ (ಅಲೋಪಥಿ ಆಯುರ್ವೇದ ಹೋಮಿಯೋಪಥಿ) ನೋಂದಾಯಿತರಾದವರು ಮಾತ್ರ ವೈದ್ಯಕೀಯ ವೃತ್ತಿ ನಡೆಸಲು ಅವಕಾಶವಿದೆ. ನೋಂದಾಯಿಸದೆ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸಿದಲ್ಲಿ ಗರಿಷ್ಠ ₹ 5 ಲಕ್ಷ ದಂಡ ಹಾಗೂ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಕೆಪಿಎಂಇ ಕಾಯ್ದೆಯಡಿ ನೋಂದಾಯಿಸದೆ ವೈದ್ಯಕೀಯ ಸಂಸ್ಥೆಯನ್ನು ನಡೆಸಿದರೆ ಗರಿಷ್ಠ ₹50 ಸಾವಿರ ದಂಡದ ಜತೆಗೆ ತಕ್ಷಣವೇ ಸಂಸ್ಥೆಯನ್ನು ಮುಚ್ಚಿಸಲಾಗುತ್ತದೆ. ಚರ್ಮದ ಚಿಕಿತ್ಸೆ ಕೂದಲು ಕಸಿ ಕೆಲ ದಂತವೈದ್ಯರು ಹಾಗೂ ನಕಲಿ ವೈದ್ಯರು ಕಾನೂನು ಬಾಹಿರವಾಗಿ ಚರ್ಮದ ಚಿಕಿತ್ಸೆ ಕೂದಲು ಕಸಿ ಮತ್ತು ಸೌಂದರ್ಯ ಚಿಕಿತ್ಸೆಗಳನ್ನು ಒದಗಿಸುತ್ತಿರುವ ಬಗ್ಗೆ ಭಾರತೀಯ ಚರ್ಮ ಲೈಂಗಿಕ ಮತ್ತು ಕುಷ್ಠ ರೋಗ ತಜ್ಞರ ಸಂಘದ (ಐಎಡಿವಿಎಲ್) ಕರ್ನಾಟಕ ಶಾಖೆಯು ವೈದ್ಯಕೀಯ ಶಿಕ್ಷಣ ಇಲಾಖೆಗೆ ದೂರು ನೀಡಿದೆ. ‘ಕೂದಲು ಕಸಿ ಲೇಸರ್ ಚಿಕಿತ್ಸೆ ಹಾಗೂ ವಿವಿಧ ಅಲಂಕಾರಿಕ ಚರ್ಮ ಚಿಕಿತ್ಸೆಗಳನ್ನು ಅನರ್ಹರು ಒದಗಿಸುತ್ತಿದ್ದಾರೆ. ಕಳಪೆ ಗುಣಮಟ್ಟದ ಸೌಂದರ್ಯವರ್ಧಕಗಳಿಂದ ಆಗುವ ಹಾನಿ ತಡೆಯಲೂ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ದೂರಿನಲ್ಲಿ ಚರ್ಮರೋಗ ತಜ್ಞರು ಒತ್ತಾಯಿಸಿದ್ದಾರೆ.