ಅಪರಿಚಿತ ಕರೆಗಳಿಗೆ ಕಡಿವಾಣ: ವಂಚನೆ ತಪ್ಪಿಸಲು ನವೆಂಬರ್ 1ರಿಂದ ಹೊಸ ನಿಯಮ ಜಾರಿ
ನವದೆಹಲಿ: ಯಾವುದೇ ಸಂಖ್ಯೆಗೆ ಕರೆ ಬಂದಾಗ ಕರೆ ಮಾಡಿದವರ ಹೆಸರುಗಳನ್ನು ಪ್ರದರ್ಶಿಸುವ ನಿಯಮ ನವೆಂಬರ್ 1ರಿಂದ ಜಾರಿಯಾಗಲಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಈ ಸಂಬಂಧ ಟೆಲಿಕಾಂ ಸಂಸ್ಥೆಗಳಿಗೆ ‘ಕಾಲಿಂಗ್ ನೇಮ್ ಪ್ರೆಸೆಂಟೇಷನ್’ (ಸಿಎನ್ಎಪಿ) ಪರಿಚಯಿಸುವಂತೆ ನಿರ್ದೇಶನ ನೀಡಿದೆ.ದೂರಸಂಪರ್ಕ ಸಚಿವಾಲಯದ ಆದೇಶದ ಪ್ರಕಾರ, 4ಜಿ,

ನವದೆಹಲಿ: ಯಾವುದೇ ಸಂಖ್ಯೆಗೆ ಕರೆ ಬಂದಾಗ ಕರೆ ಮಾಡಿದವರ ಹೆಸರುಗಳನ್ನು ಪ್ರದರ್ಶಿಸುವ ನಿಯಮ ನವೆಂಬರ್ 1ರಿಂದ ಜಾರಿಯಾಗಲಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಈ ಸಂಬಂಧ ಟೆಲಿಕಾಂ ಸಂಸ್ಥೆಗಳಿಗೆ ‘ಕಾಲಿಂಗ್ ನೇಮ್ ಪ್ರೆಸೆಂಟೇಷನ್’ (ಸಿಎನ್ಎಪಿ) ಪರಿಚಯಿಸುವಂತೆ ನಿರ್ದೇಶನ ನೀಡಿದೆ.ದೂರಸಂಪರ್ಕ ಸಚಿವಾಲಯದ ಆದೇಶದ ಪ್ರಕಾರ, 4ಜಿ, 5ಜಿ ನೆಟ್ವರ್ಕ್ ಬಳಸುವ ಪ್ರತಿ ಬಳಕೆದಾರರ ಮೊಬೈಲ್ನಲ್ಲಿ ಸಿಎನ್ಎಪಿ ಅನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸಲಾಗುತ್ತದೆ. ಇದರಿಂದ, ಯಾವುದೇ ಅಪರಿಚಿತ ಸಂಖ್ಯೆಯಿಂದ ಕರೆ ಬಂದಾಗ ವ್ಯಕ್ತಿಯ ಹೆಸರು ಮತ್ತು ಸಂಖ್ಯೆಯನ್ನು ಪ್ರದರ್ಶನವಾಗಲಿದೆ. 2ಜಿ ಹಾಗೂ 3ಜಿ ನೆಟ್ವರ್ಕ್ಗಳಲ್ಲಿಯೂ ಇದನ್ನು ಜಾರಿ ಮಾಡುವ ವಿಚಾರವನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದು ತಿಳಿಸಲಾಗಿದೆ.ಇದರಿಂದ, ಅಪರಿಚಿತ, ಸ್ಪ್ಯಾಮ್, ವಂಚನೆ ಕರೆಗಳಿಗೆ ಕಡಿವಾಣ ಬೀಳಲಿದೆ.ಯಾವುದೇ ಕರೆ ಬಂದಾಗ, ಪರದೆಯ ಮೇಲೆ ಮೊದಲು ನಂಬರ್ ಕಾಣಲಿದೆ. ನಂತರ, ಮೊಬೈಲ್ನಲ್ಲಿರುವ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ಆ ನಂಬರ್ ಸೇವ್ ಆಗಿದ್ದರೆ, ಅದರಂತೆ ಹೆಸರು ಪ್ರದರ್ಶನವಾಗಲಿದೆ. ಇಲ್ಲದಿದ್ದರೆ, ಮೂಲ ಟೆಲಿಕಾಂ ಆಪರೇಟರ್ನ ಚಂದಾದಾರರ ಡೇಟಾಬೇಸ್ನಲ್ಲಿ ದಾಖಲಾಗಿರುವಂತೆ ಕರೆ ಮಾಡಿದವರ ಹೆಸರನ್ನು ತೋರಿಸಲಾಗುತ್ತದೆ. ದೇಶೀಯ ಕರೆಗಳಿಗೆ ಈ ರೀತಿಯ ವ್ಯವಸ್ಥೆ ರೂಪಿಸಲಾಗುತ್ತದೆ. ಅಂತರರಾಷ್ಟ್ರೀಯ ಕರೆಗಳು ಬಂದರೆ, International Call ಎಂದು ಪ್ರದರ್ಶನವಾಗಲಿದೆ.ಇದಕ್ಕಾಗಿ ಪ್ರತಿಯೊಂದು ಟೆಲಿಕಾಂ ಸೇವಾ ಕಂಪನಿಯೂ, ತಮ್ಮ ಸಂಖ್ಯೆಗಳಿಗೆ ಚಂದಾದಾರರ ಹೆಸರುಗಳನ್ನು ಮ್ಯಾಪಿಂಗ್ ಮಾಡುವ ಡೇಟಾಬೇಸ್ ಸ್ಥಾಪಿಸಿ, ನಿರ್ವಹಿಸಬೇಕಿದೆ. ಕರೆ ಸ್ವೀಕರಿಸುವ ವ್ಯಕ್ತಿಗೆ ಮಾಹಿತಿ ದೊರೆಯುವುದು ಈ ಡೇಟಾಬೇಸ್ನಿಂದಲೇ.