ಧಾರವಾಡ:ಯರಿಕೊಪ್ಪ ಕ್ರಾಸ್ನಲ್ಲಿ ರೈತರ ಪ್ರತಿಭಟನೆಯಿಂದ ಭಾರಿ ವಾಹನ ಸಂಚಾರ ಸ್ಥಗಿತ
ಧಾರವಾಡ: ಯರಿಕೊಪ್ಪ ಕ್ರಾಸ್ ಬಳಿ ರೈತರು ಮಂಗಳವಾರ ಬೆಳಿಗ್ಗೆಯಿಂದ ಬುಧವಾರ ಸಂಜೆವರೆಗೆ ಹೆದ್ದಾರಿ ಬಂದ್ ನಡೆಸಿದ್ದರಿಂದ ವಾಹನ ಸಂಚಾರ ಸ್ಥಗಿತವಾಗಿ ಭಾರಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಚಾಲಕರು, ಕ್ಲೀನರ್ಗಳು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.ಸಿಮೆಂಟ್, ಟೈಲ್ಸ್, ಆಹಾರ ಧಾನ್ಯ, ತೆಂಗಿನ ಕಾಯಿ ಮೊದಲಾದ ಸರಕು ತುಂಬಿದ ಟ್ರಕ್ಗಳು, ಲಾರಿಗಳು ರಸ್

ಧಾರವಾಡ: ಯರಿಕೊಪ್ಪ ಕ್ರಾಸ್ ಬಳಿ ರೈತರು ಮಂಗಳವಾರ ಬೆಳಿಗ್ಗೆಯಿಂದ ಬುಧವಾರ ಸಂಜೆವರೆಗೆ ಹೆದ್ದಾರಿ ಬಂದ್ ನಡೆಸಿದ್ದರಿಂದ ವಾಹನ ಸಂಚಾರ ಸ್ಥಗಿತವಾಗಿ ಭಾರಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಚಾಲಕರು, ಕ್ಲೀನರ್ಗಳು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.ಸಿಮೆಂಟ್, ಟೈಲ್ಸ್, ಆಹಾರ ಧಾನ್ಯ, ತೆಂಗಿನ ಕಾಯಿ ಮೊದಲಾದ ಸರಕು ತುಂಬಿದ ಟ್ರಕ್ಗಳು, ಲಾರಿಗಳು ರಸ್ತೆ ಬದಿಯಲ್ಲಿ ನಿಂತಿದ್ದರು. ಚಾಲಕರು, ಕ್ಲೀನರ್ಗಳು ಅಲ್ಲೇ ಅಡುಗೆ ಸಿದ್ಧಪಡಿಸಿ ಆಹಾರ ಸೇವಿಸಿದರು. ವಾಹನದೊಳಗೆ, ಕೆಳಗೆ ಮಲಗಿ ವಿಶ್ರಾಂತಿ ಪಡೆರು.‘ಚನ್ನೈನಿಂದ ಮುಂಬೈಗೆ ಸರಕು ಸಾಗಣೆ ಮಾಡುತ್ತೇವೆ. ರೈತರು ಹೆದ್ದಾರಿ ಬಂದ್ ಮಾಡಿರುವುದರಿಂದ ಅರ್ಧ ದಾರಿಯಲ್ಲಿ ಸಿಲುಕಿಕೊಂಡಿದ್ದೇವೆ. ನೀರು, ಆಹಾರ ಎಲ್ಲದಕ್ಕೂ ಪಡಿಪಾಟಲಾಗಿದೆ’ ಎಂದು ಟ್ರಕ್ ಚಾಲಕ ವಿನೋದ್ ಸಂಕಷ್ಟ ತೋಡಿಕೊಂಡರು.261015-24-1212667289
Read the complete story at Prajavani