ಕೋಪ, ಮಾತನ್ನು ಹಿಡಿತದಲ್ಲಿಟ್ಟಿದ್ದರೆ ಬಿಗ್ ಬಾಸ್ ಗೆಲ್ತಿದ್ದೆ: 'ಮಹಾಕವಿ' ಮಂಜ
ಅಸಭ್ಯ ಭಾಷೆ, ನಡವಳಿಕೆಯಿಂದ ರೆಡ್ ಕಾರ್ಡ್ ಪಡೆದು ಬಿಗ್ಬಾಸ್ 13ರಿಂದ 'ಮಾಡರ್ನ್ ಮಹಾಕವಿ' ಮಂಜ ಅವರು ಹೊರಬಂದಿದ್ದಾರೆ. 'ಅಗ್ನಿಪರೀಕ್ಷೆ' ಮೂಲಕ ಬಿಗ್ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಪಡೆದುಕೊಂಡಿದ್ದ ಮಂಜ ಅವರು, ತಮ್ಮದೇ ವರ್ತನೆಯಿಂದ ಹೊರಬಂದಿದ್ದಾರೆ. ಪ್ರಜಾವಾಣಿ ಸಂದರ್ಶನದಲ್ಲಿ ಮಾತನಾಡಿರುವ ಮಂಜ, ಬಿಗ್ಬಾಸ್ ಮನೆಯಲ್ಲಿ ಕಳೆದ ದಿನಗಳು, ತಮ್ಮಿಂದ

ಅಸಭ್ಯ ಭಾಷೆ, ನಡವಳಿಕೆಯಿಂದ ರೆಡ್ ಕಾರ್ಡ್ ಪಡೆದು ಬಿಗ್ಬಾಸ್ 13ರಿಂದ 'ಮಾಡರ್ನ್ ಮಹಾಕವಿ' ಮಂಜ ಅವರು ಹೊರಬಂದಿದ್ದಾರೆ. 'ಅಗ್ನಿಪರೀಕ್ಷೆ' ಮೂಲಕ ಬಿಗ್ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಪಡೆದುಕೊಂಡಿದ್ದ ಮಂಜ ಅವರು, ತಮ್ಮದೇ ವರ್ತನೆಯಿಂದ ಹೊರಬಂದಿದ್ದಾರೆ. ಪ್ರಜಾವಾಣಿ ಸಂದರ್ಶನದಲ್ಲಿ ಮಾತನಾಡಿರುವ ಮಂಜ, ಬಿಗ್ಬಾಸ್ ಮನೆಯಲ್ಲಿ ಕಳೆದ ದಿನಗಳು, ತಮ್ಮಿಂದ ಏನೆಲ್ಲ ತಪ್ಪಾಯಿತು ಎನ್ನುವ ಬಗ್ಗೆ ಹೇಳಿಕೊಂಡಿರುವುದು ಹೀಗೆ...'ಕೆಲವೊಮ್ಮೆ ನನ್ನಿಂದಲೇ ತಪ್ಪಾಗಿದೆ. ಆಗಿದ್ದು ಆಯ್ತು, ಪಶ್ಚಾತ್ತಾಪ ಇದೆ ನನಗೆ ಅದರ ಬಗ್ಗೆ. ಸ್ವಲ್ಪ ಕೋಪಕ್ಕೆ ನನ್ನ ಬುದ್ದಿ ಕೊಟ್ಟಿದ್ದೆ. ಅದು ಹಿಡಿತದಲ್ಲಿ ಇದ್ದಿದ್ದರೆ, ಇವತ್ತು ಖಂಡಿತ ಕೈಯಲ್ಲಿ ಕಪ್ ಇರ್ತಿತ್ತು, ಅಷ್ಟೇ. ಅಲ್ಲಿದ್ದ ವಾತಾವರಣ ಹಾಗೆಯೇ ಇತ್ತು. ಎಲ್ಲದ್ದಕ್ಕೂ ಕಾರಣ ಕೊಡಲು ಸಾಧ್ಯವಿಲ್ಲ. ತಪ್ಪಾಗಿದೆ ಹೌದು. ಆದರೆ, ಸಿಟ್ಟನ್ನು ಪಕ್ಕಕ್ಕಿಟ್ಟು ನೋಡಿದರೆ, ನನ್ನ ಕೈಯಲ್ಲಿ ಎಷ್ಟು ಆಗುತ್ತೊ ಅಷ್ಟು ಪ್ರಯತ್ನ ಮಾಡಿದ್ದೇನೆ. ಒಂದು ನಾಣ್ಯದಲ್ಲಿ ಎರಡು ಮುಖಗಳಿರುವಂತೆ ಎಲ್ಲವನ್ನೂ ಎರಡೂ ಕಡೆಯಿಂದಲೂ ನೋಡಬೇಕು. ಆ ಮನೆಯಲ್ಲಿ ಅದರಲ್ಲೂ 14 ಮುಖಗಳು. ಒಬ್ಬೊಬ್ಬರದ್ದು ಒಂದೊಂದು ರೀತಿಯ ಯೋಚನೆ. ನನ್ನ ಯೋಚನೆ ಈ ರೀತಿ ಇರಬೇಕಾದರೆ, ಪ್ರತಿಯೊಬ್ಬರಿಗೂ ಬುದ್ದಿ ಇರುತ್ತದೆ, ಪ್ರತಿಯೊಬ್ಬರೂ ಗೆಲ್ಲಬೇಕೆಂದೇ ಬಂದಿದ್ದಾರೆ, ಪ್ರತಿಯೊಬ್ಬರದ್ದು ಆಟದ ವೈಖರಿ ಬೇರೆ ರೀತಿ ಇರುತ್ತದೆ. ಇದ್ದದ್ದು ಇದ್ದಂಗೆ, ಅನಿಸಿದಂಗೆ ಹೇಳೋ ಅಭ್ಯಾಸ ನನಗೆ. ತಪ್ಪಾಗಿದನ್ನು ತಿದ್ದಿಕೊಂಡಿದ್ದೇನೆ, ಕಲಿತಿದ್ದೇನೆ. ಬದಲಾವಣೆ ಜಗದ ನಿಯಮ. ಬದಲಾವಣೆ ಬೆಳಿಗ್ಗೆ ತಕ್ಷಣ ಬರುವಂತಹದ್ದಲ್ಲ. ಏನು ಮಾತಾಡಬೇಕು, ಏನು ಮಾತಾಡಬಾರದು ಎನ್ನುವುದನ್ನು ಕಲಿತಿದ್ದೇನೆ, ಇನ್ನು ಮುಂದೆ ಅದನ್ನು ಬೆಳೆಸಿಕೊಂಡು ಹೋಗ್ತೀನಿ, ಅಷ್ಟೇ.ಇಂಗ್ಲಿಷ್ನಲ್ಲಿ ಹೇಳುವುದಕ್ಕೂ ಕನ್ನಡದಲ್ಲಿ ಹೇಳುವುದಕ್ಕೂ ವ್ಯತ್ಯಾಸವಿದೆಅಲ್ಲಿರುವವರು ಇಂಗ್ಲಿಷಿನಲ್ಲಿ ಬೈಯ್ದುಕೊಳ್ಳುತ್ತಾರೆ. ಅದನ್ನೇ ನಾನು ಕನ್ನಡದಲ್ಲಿ ಹೇಳಿದರೆ ತಪ್ಪಾಗುತ್ತಿತ್ತು. ಉದಾಹರಣೆಗೆ ಅವರು ಸುಮ್ಮನೆ 'ಬುಲ್ಶಿಟ್' ಅಂತ ಮಾತಾಡೋದಕ್ಕೂ ನಾನು 'ಎಮ್ಮೆ ಕಕ್ಕ' ಅನ್ನೋದಕ್ಕೂ ತುಂಬಾ ವ್ಯತ್ಯಾಸ ಇದೆ. ಇಂಗ್ಲಿಷ್ ಪದವನ್ನು ಅಲ್ಲಿದ್ದವರು ತುಂಬ ಜನ ಬಳಸಿದ್ದಾರೆ, ಅದನ್ನ ನಾನು ಕನ್ನಡದಲ್ಲಿ ಹೇಳಿಬಿಟ್ಟರೆ ಎಲ್ಲಿಗೋ ಹೋಗಿ ನಿಲ್ಲುತ್ತಿತ್ತು.ಸುದೀಪ್ ಸರ್ ದೇವರಿದ್ದಂತೆನಾನಿಲ್ಲಿ ಮಾತನಾಡುವ ಹಾಗೆ ಸುದೀಪ್ ಅವರ ಎದುರು ಮಾತನಾಡಲು ಸಾಧ್ಯವಾಗುವುದಿಲ್ಲ. ಅದು ಭಯಕ್ಕಲ್ಲ. ಸುದೀಪ್ ಅವರು ಆಡುವ ಮಾತಿಗೆ ತೂಕ ಇರುತ್ತದೆ. ದೇವರು ಮಾತಾಡ್ತಾ ಇದ್ದಾರೆ ಎಂದರೆ ಅದನ್ನು ಕೇಳಿಸಿಕೊಳ್ಳಬೇಕು. ಪ್ರತಿಯೊಂದು ಸಮಯದಲ್ಲೂ ನನ್ನ ತಿದ್ದಲು ಪ್ರಯತ್ನಿಸಿದ್ದರು.ಆ ಮನೆಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನೂ ಮಾಡಿದ್ದೇನೆ. ಏಕೆಂದರೆ ನಮ್ಮ ಸುತ್ತಮುತ್ತಲಿನ ವಾತಾವರಣ ಹೇಗಿರುತ್ತದೆ, ಜನ, ಜಗತ್ತಿನ ಮೇಲೆ ನಮ್ಮ ಜೀವನ ನಡೆಯುತ್ತದೆ. ಆದರೆ ಅಲ್ಲಿ, ಸ್ವಲ್ಪ ನಿಯಂತ್ರಣದಲ್ಲಿ ಇದ್ದಿದ್ದರೆ ಕಪ್ ಎತ್ತಿಕೊಂಡೇ ಬರುತ್ತಿದ್ದೆ. ಆದರೆ ತಪ್ಪಿನಿಂದ ಕಪ್ ಕೈತಪ್ಪಿದೆ. ಅದರ ಬಗ್ಗೆನೂ ನನಗೆ ಬೇಜಾರಿದೆ. ಆದರೆ, ಜನಗಳ ಪ್ರೀತಿ, ನಮ್ಮ ಸುದೀಪ್ ಸರ್ ಪ್ರೀತಿ ಪಡೆದುಕೊಂಡು ಬಂದಿದ್ದೇನೆ, ಅದಕ್ಕಿಂತ ಇನ್ನೇನು ಬೇಕು ನಂಗೆ.ಪ್ರತ್ಯುತ್ತರವಾಗಿತ್ತೇ ಹೊರತು ಅಶ್ಲೀಲವಾಗಿ ಮಾತನಾಡಬೇಕೆಂದಲ್ಲಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ನನ್ನ ಆಟ ಮೆಚ್ಚಿ ಮೆಸೇಜ್ ಮಾಡಿದ್ದಾರೆ. ಮನೆಯಲ್ಲಿದ್ದಾಗ ಕೆಲವೊಂದು ಕೆಟ್ಟಪದ, ಅಶ್ಲೀಲ ಪದಗಳು ಯಾವುದೋ ಒಂದು ಮೂಲೆಯಲ್ಲಿ ಬಂದು ಹೋಗಿರೋದು. ಅದೊಂದು ದಿನ 10-15 ನಿಮಿಷ ಮಾತನಾಡಿದ್ದೆ. ಅದನ್ನೇ ಪ್ರತಿ ದಿನ ಮಾತನಾಡಿದ್ದರೆ, ಮೊದಲ ದಿನವೇ ಹೊರಗೆ ಕಳಿಸುತ್ತಿದ್ದರು. ಆ ಕ್ಷಣಕ್ಕೆ ಆ ಸಮಯಕ್ಕೆ ಎದುರುಗಡೆಯಿಂದ ಏನು ಹೇಳುತ್ತಿದ್ದರೋ, ಅದಕ್ಕೆ ಪ್ರತ್ಯುತ್ತರ ನೀಡುತ್ತಿದ್ದೆ. ನನ್ನ ಟ್ರಿಗರ್ ಮಾಡೋದಕ್ಕೆ ಅಲ್ಲಿದ್ದವರು ಪ್ರಯತ್ನ ಮಾಡುತ್ತಿದ್ದರು. ಕರ್ನಾಟಕದ ಜನರ ಮುಂದೆ ಮಾತನಾಡಿದ್ದಕ್ಕೆ ಬೇಸರವಿದೆಬಿಗ್ಬಾಸ್ ಮನೆಯಲ್ಲಿ ಆಡಿರುವ ಮಾತುಗಳನ್ನು ನನ್ನನ್ನು ನೋಡುತ್ತಿರುವ ಅಚ್ಚುಮೆಚ್ಚಿನ ಕರ್ನಾಟಕ ಜನತೆ ಮುಂದೆ ಹೇಳಿದೆ ಎನ್ನುವುದೇ ಬೇಸರ. ಎಲ್ಲರೂ ಗೆಲ್ಲಲು ಬಂದಿದ್ದಾರೆ. ನಾನು ನನ್ನನ್ನು ಪ್ರೀತಿಸೋ ಒಂದಷ್ಟು ಜನಗಳಿಗಾಗಿ ಇದ್ದೆ. ಮನೆಯಲ್ಲಿದ್ದ ಒಬ್ಬ ಪ್ರಬಲ ಸ್ಪರ್ಧಿ ಹೊರಗೆ ಹೋದ ಎಂದಾಗ ಅವರಿಗೆ ಸಂತೋಷ ಆಗಿರುತ್ತದೆ. ಅದಕ್ಕೆ ಉಲ್ಲಾಸ, ಉತ್ಸಾಹ ಎಲ್ಲ ಜಾಸ್ತಿಯಾಗಿರುತ್ತದೆ.ಯಶಸ್ ಅಮ್ಮನ ಬಳಿ ಕ್ಷಮೆ ಕೇಳುವೆಯಶಸ್ ಅವರ ಮನೆಯವರ ಬಗ್ಗೆ ಮಾತನಾಡಿದ್ದು ತಪ್ಪು. ಆ ಪದಗಳನ್ನು ತರಬಾರದಿತ್ತು, ಮಾತಾಡಬಾರದಿತ್ತು. ಕ್ಷಮಿಸಿ ಎಂದು ಅವರ ಮನೆಯವರನ್ನು ಕೇಳುತ್ತೇನೆ. ನನ್ನ ಮತ್ತು ಯಶಸ್ ಜಗಳದ ಭರದಲ್ಲಿ ಆ ಮಾತುಗಳು ಬಂದವು ಅಷ್ಟೇ. ಯಾಕಂದರೆ ನನ್ನ ತಾಯಿ ರೀತಿಯೇ ಜಗತ್ತಲ್ಲಿರೋ ಎಲ್ಲಾ ತಾಯಿ ಒಂದೇ. ಯಶಸ್ ಮೇಲೂ ನನಗೆ ಬೇಸರವಿಲ್ಲ.ನನ್ನ ಮಾತನ್ನು ಕಿವಿ ಕೊಟ್ಟು ಕೇಳುವವರು ಇರಲಿಲ್ಲಒಂದು ಒಳ್ಳೆ ಅವಕಾಶ ಸಿಕ್ಕಿತ್ತು. ಆದರೆ, ನನ್ನ ಮಾತನ್ನೂ ಕಿವಿ ಕೊಟ್ಟು ಕೇಳುವವರು ಇದ್ದಿದ್ದರೆ ನಾನು ಎಂತಹ ಕವಿ ಎಂದು ತೋರಿಸುತ್ತಿದ್ದೆ. ನನ್ನ ಜೊತೆ ಎಲ್ಲರೂ ಜಗಳವನ್ನು ಮಾಡಿದ್ದರು. ಅವರ ಬಳಿ ಹೋಗಿ 'ಇರು ಒಂದು ಐದು ನಿಮಿಷ ನಿಲ್ಸೋ, ನಾನು ಒಂದು ಕವನ ಹೇಳ್ಬೇಕು' ಎನ್ನುವುದಕ್ಕೆ ಅಗುತ್ತಿರಲಿಲ್ಲ. ಬಡ ಕುಟುಂಬ ನನ್ನದುಅಪ್ಪ, ಅಮ್ಮ, ನಾನು ಮತ್ತು ಇಬ್ಬರು ಹೆಣ್ಣುಮಕ್ಕಳು. ಬಡ ಕುಟುಂಬ ನಮ್ಮದು. ಕಷ್ಟ ಇದ್ದಿದ್ದೇ ಎಲ್ಲರಿಗೂ. ಆದರೆ ಇನ್ನು ಮುಂದೆ ಚೆನ್ನಾಗಿರುತ್ತೇನೆ.ನಾನು ಕಳಿಸಿದ್ದ ವಿಡಿಯೊದಿಂದಲೇ ಅಗ್ನಿಪರೀಕ್ಷೆಯಲ್ಲಿ ಅವಕಾಶ ಸಿಕ್ಕಿತ್ತು. ಈ ವೇದಿಕೆಗೆ ಬರಲು ನನ್ನ ಸರ್ವಸ್ವವನ್ನೂ ಕೊಟ್ಟಿದ್ದೇನೆ. ಆ ಸ್ಟೇಜ್ ಮೇಲೆ ಬರೋದೇ ಒಂದು ದೊಡ್ಡ ಜೀವಮಾನದ ಸಾಧನೆ ಇದ್ದಹಾಗೆ. ಕಷ್ಟಪಟ್ಟು ಬಂದೆ, ಅದೃಷ್ಟ ಸಿಕ್ಕಿತ್ತು. ಆದರೆ ಕೆಲವೊಂದು ಮಾತಿಂದ ಈಗ ಇಲ್ಲಿದ್ದೇನೆ ಅಷ್ಟೇ.ಮಂಜ ಗಿಲ್ಲಿಯಾಗಲು ಸಾಧ್ಯವಿಲ್ಲಗಿಲ್ಲಿಯವರು ಗಿಲ್ಲಿಯವರೇ. ಅವರ ಅಭಿಮಾನಿ ನಾನು. ಗಿಲ್ಲಿನೂ ಮಂಜ ಆಗೋಕೆ ಆಗಲ್ಲ, ಮಂಜನೂ ಗಿಲ್ಲಿ ಆಗೋಕೆ ಆಗಲ್ಲ. ಅದು ಅವರ ಆಟ, ಅವರ ವ್ಯಕ್ತಿತ್ವ, ಚೆನ್ನಾಗಿ ಆಡಿದ್ದರು. ನನ್ನ ಪ್ರಕಾರ ಈಗ ಒಂದು ಒಂದೂವರೆ ತಿಂಗಳಲ್ಲಿ ನಾನು ಏನು ಮಾಡಿದೆ ಅದು ನನ್ನ ಆಟ, ಅದು ನನ್ನ ವ್ಯಕ್ತಿತ್ವ. ಅದರಲ್ಲಿ ಹೋಲಿಕೆ ಮಾಡುವಂತಹದ್ದು ಏನೂ ಇಲ್ಲ. ಆದರೆ ಜನರ ಇಷ್ಟ, ಏನು ಬೇಕಾದರೂ ಹೇಳಬಹುದು. ಎಲ್ಲವನ್ನು ಕೇಳಲು ತಯಾರಿದ್ದೇನೆ. ಅವರ ಆಟ ಅವರದ್ದು, ನನ್ನ ಆಟ ನನ್ನದು' ಎಂದಿದ್ದಾರೆ.