ಈ ಬಾರಿ ರಾಮಲೀಲಾದಲ್ಲಿ ರಾವಣ, ಅಸುರರ ಜೊತೆ ದಹನವಾಗಲಿದೆ ‘ಜಿರಳೆ’
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಸರಾ ಅಂಗವಾಗಿ ನಡೆಯಲಿರುವ ರಾಮಲೀಲಾದಲ್ಲಿ ರಾವಣ, ಕುಂಭಕರ್ಣ, ಮೇಘನಾದರ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ (ಜಿರಳೆ) ಪತ್ರಿಕೃತಿಯು ದಹನವಾಗಲಿದೆ.ಪೀತಂಪುರದಲ್ಲಿ ಶ್ರೀ ಕೇಶವ್ ರಾಮಲೀಲಾ ಸಮಿತಿಯು ರಾಮಲೀಲಾವನ್ನು ಆಯೋಜಿಸುತ್ತಿದೆ. ‘ಈ ಕೀಟವು (ಜಿರಳೆ) ಅಸಹ್ಯ ಮತ್ತು ಕೊಳಕಿನ ಸಂಕೇತವಾಗಿದೆ. ಜಿರಳೆಯ ಪತ್ರಿಕೃತಿ ದಹನವು ಸ್ವ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಸರಾ ಅಂಗವಾಗಿ ನಡೆಯಲಿರುವ ರಾಮಲೀಲಾದಲ್ಲಿ ರಾವಣ, ಕುಂಭಕರ್ಣ, ಮೇಘನಾದರ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ (ಜಿರಳೆ) ಪತ್ರಿಕೃತಿಯು ದಹನವಾಗಲಿದೆ.ಪೀತಂಪುರದಲ್ಲಿ ಶ್ರೀ ಕೇಶವ್ ರಾಮಲೀಲಾ ಸಮಿತಿಯು ರಾಮಲೀಲಾವನ್ನು ಆಯೋಜಿಸುತ್ತಿದೆ. ‘ಈ ಕೀಟವು (ಜಿರಳೆ) ಅಸಹ್ಯ ಮತ್ತು ಕೊಳಕಿನ ಸಂಕೇತವಾಗಿದೆ. ಜಿರಳೆಯ ಪತ್ರಿಕೃತಿ ದಹನವು ಸ್ವಚ್ಛ ಭಾರತ್ ಮತ್ತು ಸ್ವಚ್ಛ ದೆಹಲಿ ಅಭಿಯಾನಗಳ ಭಾಗವಾಗಿದೆಯೇ ಹೊರತು ರಾಜಕೀಯ ಪ್ರೇರಿತ ನಿರ್ಧಾರವಲ್ಲ’ ಎಂದು ಸಮಿತಿಯ ಅಧ್ಯಕ್ಷ ಹಾಗೂ ಬಿಜೆಪಿ ಶಾಸಕ ಅಶೋಕ್ ಗೋಯಲ್ ಹೇಳಿದ್ದಾರೆ.‘ಜಿರಳೆ ಪ್ರತಿಕೃತಿ ಸುಡುವುದರ ಮೂಲಕ ಕೆಟ್ಟದ್ದರ ಮೇಲೆ ಒಳ್ಳೆಯದರ ಗೆಲುವು ಮತ್ತು ಸ್ವಚ್ಛತೆಯ ಸಂದೇಶವನ್ನು ಸಾರಲು ಉದ್ದೇಶಿಸಲಾಗಿದೆ. ಈ ಬಾರಿ ರಾವಣನ ಸೈನ್ಯದಲ್ಲಿರುವ ‘ಅಸುರರ’ ಸಾಲಿನಲ್ಲಿ ‘ಜಿರಳೆ’ ಕೂಡ ಇರಲಿದೆ ಎಂದು ಗೋಯಲ್ ತಿಳಿಸಿದ್ದಾರೆ.ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಸಿಜೆಪಿ ಆರಂಭದಲ್ಲಿ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟಿಸಿತ್ತು. ಇದೀಗ ಎಸ್ಐಆರ್ ವಿಚಾರವಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಲೆದಂಡಕ್ಕೆ ಪಟ್ಟು ಹಿಡಿದಿದೆ. ಜೂನ್ ಮತ್ತು ಜುಲೈನಲ್ಲಿ ಜಂತರ್ ಮಂತರ್ನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಸಿಜೆಪಿ ಪ್ರತಿಭಟನೆ ನಡೆಸಿತ್ತು. ಜುಲೈ 20ರಂದು ಸಂಸತ್ತಿಗೆ ಪಾದಯಾತ್ರೆ ನಡೆಸಿತ್ತು. ಇದು ಅಂತಿಮವಾಗಿ ಪ್ರಧಾನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿತ್ತು.ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್ಐಆರ್) ಅಕ್ರಮ ನಡೆದಿದೆ ಎಂದು ಆರೋಪಿಸಿ ಸಿಇಸಿ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳೊಂದಿಗೆ ಸೇರಿ ಸಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ.ದೆಹಲಿಯಲ್ಲಿ ನಡೆದ ಪ್ರತಿಭಟನೆಗಳು ವಿರೋಧ ಪಕ್ಷಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಬಂಧನಕ್ಕೂ ಕಾರಣವಾಗಿವೆ.