ನ.1ರಿಂದ ಅಪರಿಚಿತ ಕರೆ ಮಾಡಿದವರ ಹೆಸರೂ ಮೊಬೈಲ್ನಲ್ಲಿ ಪ್ರದರ್ಶನ
ನವದೆಹಲಿ: ಅಪರಿಚಿತ ಮೊಬೈಲ್ ಸಂಖ್ಯೆಗಳಿಂದ ಬರುವ ಕರೆಗಳನ್ನು ಗುರುತಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ನವೆಂಬರ್ 1ರಿಂದ ದೇಶದ ದೂರಸಂಪರ್ಕ ಸೇವಾ ಕಂಪನಿಗಳು ಕಾಲಿಂಗ್ ನೇಮ್ ಪ್ರೆಸೆಂಟೇಷನ್ (Calling Name Presentation) ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ದೂರಸಂಪರ್ಕ (Department of Telecommunications)

ನವದೆಹಲಿ: ಅಪರಿಚಿತ ಮೊಬೈಲ್ ಸಂಖ್ಯೆಗಳಿಂದ ಬರುವ ಕರೆಗಳನ್ನು ಗುರುತಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ನವೆಂಬರ್ 1ರಿಂದ ದೇಶದ ದೂರಸಂಪರ್ಕ ಸೇವಾ ಕಂಪನಿಗಳು ಕಾಲಿಂಗ್ ನೇಮ್ ಪ್ರೆಸೆಂಟೇಷನ್ (Calling Name Presentation) ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ದೂರಸಂಪರ್ಕ (Department of Telecommunications) ಇಲಾಖೆ ಸೂಚಿಸಿದೆ. ಈ ವ್ಯವಸ್ಥೆಯಡಿ ಮೊಬೈಲ್ಗೆ ಕರೆ ಬಂದಾಗ ಕರೆ ಮಾಡುವವರ ಸಂಖ್ಯೆಯ ಜೊತೆಗೆ ಅವರ ಹೆಸರೂ ಪರದೆಯ ಮೇಲೆ ಕಾಣಿಸಿಕೊಳ್ಳಲಿದೆ. ಇದರಿಂದ ಅಪರಿಚಿತ ಕರೆಗಳ (Unknown Calls) ಗುರುತು ಪತ್ತೆಹಚ್ಚಲು ಹಾಗೂ ಸ್ಪ್ಯಾಮ್ ಕರೆಗಳು ಮತ್ತು ಆನ್ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆ ವಹಿಸಲು ಗ್ರಾಹಕರಿಗೆ ಅನುಕೂಲವಾಗಲಿದೆ. ಇದನ್ನೂ ಓದಿ: ಇಸ್ಲಾಂಗೆ ಮತಾಂತರಗೊಂಡ ಹಿಂದೂ ವ್ಯಕ್ತಿಯು ʻಹಿಂದುಳಿದ ವರ್ಗದ ಮುಸ್ಲಿಂʼ ಸ್ಥಾನಮಾನ ಪಡೆಯಲು ಸಾಧ್ಯವಿಲ್ಲ: ಸುಪ್ರೀಂ ಪ್ರಸ್ತುತ, ಮೊಬೈಲ್ನಲ್ಲಿ ಸೇವ್ ಆಗದ ಸಂಖ್ಯೆಯಿಂದ ಕರೆ ಬಂದಾಗ ಸಾಮಾನ್ಯವಾಗಿ ಆ ಸಂಖ್ಯೆಯಷ್ಟೇ ಕಾಣಿಸುತ್ತದೆ. ಆದರೆ ಸಿಎನ್ಎಪಿ ವ್ಯವಸ್ಥೆ ಜಾರಿಯಾದ ಬಳಿಕ, ಗ್ರಾಹಕರ ಸಂಪರ್ಕ ಪಟ್ಟಿಯಲ್ಲಿ ಸೇವ್ ಆಗದ ದೇಶೀಯ ಸಂಖ್ಯೆಯಿಂದ ಕರೆ ಬಂದರೆ ದೂರಸಂಪರ್ಕ ಕಂಪನಿಯ ದಾಖಲೆಗಳಲ್ಲಿರುವ ಹೆಸರನ್ನು ಪ್ರದರ್ಶಿಸಲಾಗುತ್ತದೆ. ಈಗಾಗಲೇ ಸಂಪರ್ಕ ಪಟ್ಟಿಯಲ್ಲಿ ಸಂಖ್ಯೆ ಸೇವ್ ಆಗಿದ್ದರೆ ಆ ಪಟ್ಟಿಯಲ್ಲಿರುವ ಹೆಸರೇ ಕಾಣಿಸುತ್ತದೆ. ಈ ಸೇವೆಗಾಗಿ ಗ್ರಾಹಕರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಥವಾ ಯಾವುದೇ ಹೆಚ್ಚುವರಿ ಆಪ್ ಡೌನ್ಲೋಡ್ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ. ದೂರಸಂಪರ್ಕ ಇಲಾಖೆಯ ಅಕ್ಟೋಬರ್ 13ರ ನಿರ್ದೇಶನದ ಪ್ರಕಾರ, 4G ಮತ್ತು ಅದಕ್ಕಿಂತ ಮುಂದಿನ ತಂತ್ರಜ್ಞಾನ ಆಧಾರಿತ ಮೊಬೈಲ್ಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.ಇದನ್ನೂ ಓದಿ: ಸಿದ್ರಾಮಯ್ಯ, ಪರಮೇಶ್ವರ್ ವಿಡಿಯೋ ಬರಬಹುದು ಅಂತ 2024ರಲ್ಲೇ ರಮೇಶ್ ಜಾರಕಿಹೊಳಿ ಎಚ್ಚರಿಸಿದ್ರು: ಹೆಚ್ಡಿಕೆ ಸಿಎನ್ಎಪಿ ವ್ಯವಸ್ಥೆಯು ಕರೆ ಮಾಡುವವರ ಗುರುತನ್ನು ತಿಳಿಯಲು ಸಹಾಯ ಮಾಡಬಹುದಾದರೂ, ಕರೆ ಮಾಡುವವರ ಹೆಸರು ಕಾಣಿಸಿಕೊಂಡ ಮಾತ್ರಕ್ಕೆ ಆ ಕರೆ ಸುರಕ್ಷಿತವಾಗಿದೆ ಎಂಬ ಖಾತರಿ ಇರುವುದಿಲ್ಲ. ಹೀಗಾಗಿ ಅಪರಿಚಿತ ಕರೆಗಳ ಮೂಲಕ ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರ ಅಥವಾ ಒಟಿಪಿ ಕೇಳಿದರೆ ಎಚ್ಚರಿಕೆ ವಹಿಸುವುದು ಅಗತ್ಯ.ಇದನ್ನೂ ಓದಿ: PUBLiC TV Explainer| ಭಾರತ ಇನ್ನೂ ಸ್ಟಾರ್ಲಿಂಕ್ಗೆ ಅನುಮತಿ ನೀಡಿಲ್ಲ ಯಾಕೆ? ಆತಂಕ ಏನು?