ಸಿಗದ ಅನುದಾನ: ಕಲಹ
ಬೆಂಗಳೂರು: 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಹಂಚಿಕೆ ಮಾಡಲಾಗಿದ್ದ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡದಿರುವುದರಿಂದಾಗಿ ಮೂಲ ಸೌಕರ್ಯ ನಿರ್ವಹಣೆಗೂ ಗ್ರಾಮ ಪಂಚಾಯಿತಿಗಳು ಪರದಾಡುತ್ತಿವೆ. ಇದರ ಪರಿಣಾಮವಾಗಿ ಗುತ್ತಿಗೆದಾರರು–ಅಧಿಕಾರಿಗಳ ಮಧ್ಯೆ ನಿತ್ಯವೂ ‘ಪಂಚಾಯಿತಿ ಕಲಹ’ ನಡೆಯುತ್ತಿವೆ. ರಾಜ್ಯದ ಗ್ರಾಮ ಪಂಚಾತಿಯಿಗಳಿಗೆ 2025–26ನೇ ಸಾಲಿಗೆ ನೀಡಬೇಕಿ
ಬೆಂಗಳೂರು: 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಹಂಚಿಕೆ ಮಾಡಲಾಗಿದ್ದ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡದಿರುವುದರಿಂದಾಗಿ ಮೂಲ ಸೌಕರ್ಯ ನಿರ್ವಹಣೆಗೂ ಗ್ರಾಮ ಪಂಚಾಯಿತಿಗಳು ಪರದಾಡುತ್ತಿವೆ. ಇದರ ಪರಿಣಾಮವಾಗಿ ಗುತ್ತಿಗೆದಾರರು–ಅಧಿಕಾರಿಗಳ ಮಧ್ಯೆ ನಿತ್ಯವೂ ‘ಪಂಚಾಯಿತಿ ಕಲಹ’ ನಡೆಯುತ್ತಿವೆ. ರಾಜ್ಯದ ಗ್ರಾಮ ಪಂಚಾತಿಯಿಗಳಿಗೆ 2025–26ನೇ ಸಾಲಿಗೆ ನೀಡಬೇಕಿದ್ದ ₹2,186 ಕೋಟಿ ಅನುದಾನ ಒಂದೂವರೆ ವರ್ಷಗಳಿಂದ ಸಿಕ್ಕಿಲ್ಲ. ಬಾಕಿ ಬಿಡುಗಡೆಯಾಗುವವರೆಗೂ ತೆರಿಗೆ ಸಂಗ್ರಹ ಕೊರತೆ ಇರುವ ಪಂಚಾಯಿತಿಗಳಿಗೆ ತಲಾ ₹10 ಲಕ್ಷ ತುರ್ತು ನೆರವು ನೀಡಬೇಕು ಎಂಬ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮನವಿಗೆ ರಾಜ್ಯ ಸರ್ಕಾರವೂ ಸ್ಪಂದಿಸಿಲ್ಲ. ಈ ಕುರಿತು ಸಲ್ಲಿಸಿದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದೆ.ಹಣಕಾಸು ಆಯೋಗದ ಶಿಫಾರಸಿನಂತೆ ಹಂಚಿಕೆ ಮಾಡುವ ಅನುದಾನವನ್ನು ಗ್ರಾಮೀಣ ಪ್ರದೇಶಗಳ ಮೂಲ ಸೌಕರ್ಯ ಅಭಿವೃದ್ಧಿ, ದೈನಂದಿನ ನಿರ್ವಹಣೆಗಾಗಿ ಬಳಸಲಾಗುತ್ತದೆ. 15ನೇ ಹಣಕಾಸು ಆಯೋಗದ ಮಾರ್ಗಸೂಚಿಗಳ ಪ್ರಕಾರ ಪ್ರತಿ ಪಂಚಾಯಿತಿಗಳು ತಮಗೆ ಲಭ್ಯವಾದ ಶೇ 60ರಷ್ಟು ಮೊತ್ತವನ್ನು ಕುಡಿಯುವ ನೀರು ಪೂರೈಕೆ, ಕೊಳವೆ ಬಾವಿಗಳ ದುರಸ್ತಿ, ಜಲಮೂಲಗಳ ರಕ್ಷಣೆ ಮತ್ತು ಮಳೆನೀರು ಸಂಗ್ರಹ ಯೋಜನೆಗಳು, ಶೌಚಾಲಯ, ತ್ಯಾಜ್ಯ ನಿರ್ವಹಣೆ, ಚರಂಡಿಗಳ ಸ್ವಚ್ಛತೆಗೆ ವಿನಿಯೋಗಿಸಬೇಕು. ಉಳಿದ ಶೇ 40ರಷ್ಟು ಮೊತ್ತವನ್ನು ವೇತನ ಪಾವತಿ ಹೊರತುಪಡಿಸಿ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಬಳಸಿಕೊಳ್ಳಬಹುದು.ಪ್ರತಿ ಪಂಚಾಯಿತಿಯು ನೂತನ ಆರ್ಥಿಕ ವರ್ಷ ಆರಂಭಕ್ಕೂ ಮೊದಲೇ ರೂಪಿಸುವ ಕ್ರಿಯಾಯೋಜನೆ ಆಧಾರದಲ್ಲೇ ಆಯೋಗದ ಶಿಫಾರಸಿನ ಮೊತ್ತವನ್ನು ಆಯಾ ಪಂಚಾಯಿತಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ಕ್ರಿಯಾ ಯೋಜನೆಯಂತೆ ಪಂಚಾಯಿತಿಗಳು ಕಾಮಗಾರಿ ಕೈಗೊಳ್ಳುತ್ತವೆ. ನಂತರ ಹಂತಹಂತವಾಗಿ ಅನುದಾನ ಬಿಡುಗಡೆಯಾಗುತ್ತದೆ. 2025–26ನೇ ಸಾಲಿನಲ್ಲಿ ಹೀಗೆ ಕೈಗೊಂಡ ಕಾಮಗಾರಿಗಳ ಹಣಕ್ಕಾಗಿ ಗುತ್ತಿಗೆದಾರರು ಪಂಚಾಯಿತಿಗಳಿಗೆ ಅಲೆಯುತ್ತಿದ್ದಾರೆ. ಒಂದೂವರೆ ವರ್ಷವಾದರೂ ಹಣ ನೀಡದ ಪಿಡಿಒಗಳ ಜತೆ ನಿತ್ಯವೂ ವಾಗ್ವಾದ, ಜಗಳ ಸಾಮಾನ್ಯವಾಗಿವೆ.‘ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳು ಸ್ವಂತ ಸಂಪನ್ಮೂಲದಿಂದ ನಿರ್ವಹಣೆ ಮಾಡುವ ಸ್ಥಿತಿಯಲ್ಲಿ ಇಲ್ಲ. ಪಂಚಾಯಿತಿಗಳ ತೆರಿಗೆ ಸಂಗ್ರಹ ಸಾಮರ್ಥ್ಯ ₹5 ಲಕ್ಷದಿಂದ ₹10 ಲಕ್ಷದ ಆಸುಪಾಸಿನಲ್ಲಿದೆ. ಹಿಂದೆ ಸಾಮಗ್ರಿ ಖರೀದಿ, ಕಾಮಗಾರಿಗಳ ಬಾಕಿ ನೀಡದ ಕಾರಣ ವರ್ತಕರು, ಗುತ್ತಿಗೆದಾರರು ಜಗಳ ಆಡುತ್ತಿದ್ದಾರೆ. ಬರಗಾಲದ ಸನ್ನಿವೇಶದಲ್ಲಿ ಕುಡಿಯುವ ನೀರಿನ ಪೈಪ್, ಮೋಟಾರ್ಗಳ ದುರಸ್ತಿ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ನೈರ್ಮಲ್ಯದ ಕೆಲಸಗಳಿಗೂ ಅಡ್ಡಿಯಾಗಿದೆ. ಕೆಲವೆಡೆ ಗ್ರಾಮ ಪಂಚಾಯಿತಿಗಳಿಗೆ ಬೀಗ ಹಾಕುತ್ತಿದ್ದಾರೆ’ ಎನ್ನುತ್ತಾರೆ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ಬಿ.ಎಂ. ದಿಲೀಪ್ ಕುಮಾರ್. ದಿಲೀಪ್ ಕುಮಾರ್ ಬಿ.ಎಂ ರಾಜ್ಯ ಅಧ್ಯಕ್ಷ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘಪ್ರತಿ ಗ್ರಾಮ ಪಂಚಾಯಿತಿಗೂ ತಲಾ ₹10 ಲಕ್ಷ ತುರ್ತು ಅನುದಾನ ನೀಡಬೇಕು. 15ನೇ ಹಣಕಾಸಿನ ಆಯೋಗದ ಶಿಫಾರಸಿನಂತೆ ಹಂಚಿಕೆಯಾದ ಅನುದಾನ ಬಿಡುಗಡೆಯಾದ ನಂತರ ವಾಪಸ್ ಪಡೆಯಬೇಕು ಶ್ವೇತಾ ಬಂಡಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಕೇಂದ್ರ ರಾಜ್ಯಗಳು ಸಂಗ್ರಹಿಸುವ ತೆರಿಗೆ ಹಣದಲ್ಲಿ ಪಂಚಾಯಿತಿಗಳಿಗೂ ಅಧಿಕ ಪಾಲು ನೀಡಬೇಕು. ಅಧಿಕಾರ ವಿಕೇಂದ್ರೀಕರಣವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಬೇಕುಪ್ರಜಾಸೇವೆಗೆ ಗ್ರಾ.ಪಂ ಸಂಪನ್ಮೂಲ: ಆದೇಶಮುಖ್ಯಮಂತ್ರಿಯ ಜನಸ್ಪಂದನ ಸಾರ್ವಜನಿಕರ ಕುಂದುಕೊರತೆಗಳು ಹಾಗೂ ಹೋರಾಟಗಳ ಮೂಲಕ ಸಲ್ಲಿಕೆಯಾಗುವ ಅಹವಾಲುಗಳನ್ನು ಆಲಿಸಿ ಪರಿಹಾರ ಒದಗಿಸಲು ಹೊಸದಾಗಿ ‘ಪ್ರಜಾಸೇವಾ ಇಲಾಖೆ’ ಅಸ್ತಿತ್ವಕ್ಕೆ ತರಲಾಗಿದೆ. ಪ್ರತಿ ಶನಿವಾರ ಜನಸ್ಪಂದನಾ ಸಭೆಗಳನ್ನು ನಡೆಸುವುದು ಕಡ್ಡಾಯಗೊಳಿಸಲಾಗಿದ್ದು ಪ್ರಜಾಸೇವಾ ಅಭಿಯಾನಕ್ಕೆ ಗ್ರಾಮ ಪಂಚಾಯಿತಿ ಸಂಪನ್ಮೂಲ ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳ ಸಂಪನ್ಮೂಲ ಬಳಸಿಕೊಳ್ಳಲು ಸರ್ಕಾರದ ಆದೇಶ ಹೊರಡಿಸಿದೆ. ‘15ನೇ ಹಣಕಾಸಿನ ಅನುದಾನ ವಿಳಂಬ ಬರಗಾಲದ ಪರಿಸ್ಥಿತಿಯಲ್ಲಿ ಜನಸ್ಪಂದನಾ ಕಾರ್ಯಗಳಿಗೆ ಗ್ರಾಮ ಪಂಚಾಯಿತಿ ಸಂಪನ್ಮೂಲ ಬಳಸಿಕೊಳ್ಳಬಾರದು’ ಎಂದು ಗ್ರಾಮ ಪಂಚಾಯಿತಿ ನೌಕರರರು ಸದಸ್ಯರು ಒತ್ತಾಯಿಸಿದ್ದಾರೆ.