ಚಾಮರಾಜನಗರ: ‘ರೈತ ದಸರಾ‘ ವಸ್ತುಪ್ರದರ್ಶನ ನಾಳೆ
ಚಾಮರಾಜನಗರ: ಜಿಲ್ಲಾ ದಸರಾ ಅಂಗವಾಗಿ ಜಿಲ್ಲಾಡಳಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳನ್ನು ಆಯೋಜಿಸಿದೆ. ಉತ್ಸವಕ್ಕೆ ಪೂರ್ವಭಾವಿಯಾಗಿ ಕಾರ್ಯಕ್ರಮಗಳು ಆರಂಭವಾಗಲಿದ್ದು ಸಾರ್ವಜನಿಕರಿಗೆ ರಂಜಿಸಲಿವೆ.ಕೃಷಿ ಇಲಾಖೆ ವತಿಯಿಂದ ಅ.16ರಂದು ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ರೈತ ದಸರಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 10.30ಕ್ಕ

ಚಾಮರಾಜನಗರ: ಜಿಲ್ಲಾ ದಸರಾ ಅಂಗವಾಗಿ ಜಿಲ್ಲಾಡಳಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳನ್ನು ಆಯೋಜಿಸಿದೆ. ಉತ್ಸವಕ್ಕೆ ಪೂರ್ವಭಾವಿಯಾಗಿ ಕಾರ್ಯಕ್ರಮಗಳು ಆರಂಭವಾಗಲಿದ್ದು ಸಾರ್ವಜನಿಕರಿಗೆ ರಂಜಿಸಲಿವೆ.ಕೃಷಿ ಇಲಾಖೆ ವತಿಯಿಂದ ಅ.16ರಂದು ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ರೈತ ದಸರಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 10.30ಕ್ಕೆ ನಗರದ ಚಾಮರಾಜೇಶ್ವರ ದೇವಸ್ಥಾನದಿಂದ ಪಚ್ಚಪ್ಪ ವೃತ್ತದ ಮಾರ್ಗವಾಗಿ ಡಾ.ಬಿ.ಆರ್ ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ಸಾಗಲಿದ್ದು ಸ್ತಬ್ಧಚಿತ್ರಗಳು, ಎತ್ತಿನ ಗಾಡಿಗಳು ಹಾಗೂ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ.ಕೃಷಿ ವಸ್ತುಪ್ರದರ್ಶನದಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಪಾರಂಪರಿಕ ಕೃಷಿ ಪರಿಕಗಳ ಪ್ರದರ್ಶನ, ಸಾವಯವ ಉತ್ಪನ್ನಗಳು, ಮಣ್ಣು ಆರೋಗ್ಯ ಪ್ರಯೋಗಾಲಯ, ರೇಷ್ಮೆ ಕೃಷಿ, ಅಲಂಕಾರಿಕ ಮೀನುಗಳ ಪ್ರದರ್ಶನ ಏರ್ಪಡಿಸಲಾಗಿದೆ. ರೈತ ದಸರಾದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.18ರಂದು ಓಟ: ಅ.18ರಂದು ನಗರದಲ್ಲಿ ದಸರಾ ಓಟ ಮತ್ತು ಸ್ಕೇಟಿಂಗ್ ಆಯೋಜಿಸಲಾಗಿದೆ. ಬೆಳಿಗ್ಗೆ 6.30ಕ್ಕೆ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಓಟ ಆರಂಭಗೊಂಡು ಭುವನೇಶ್ವರಿ ವೃತ್ತ, ಜಿಲ್ಲಾ ಆಸ್ಪತ್ರೆ, ಜಿಲ್ಲಾಡಳಿತ ಭವನ ರಸ್ತೆ, ಡಿವೈಎಸ್ಪಿ ಕಚೇರಿಯಿಂದ ಚರ್ಚ್, ರಾಮಸಮುದ್ರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ತಲುಪಿ ವರ್ತಕರ ಭವನ ಮಾರ್ಗವಾಗಿ ನ್ಯಾಯಾಲಯ ರಸ್ತೆಯಿಂದ ಅಂಬೇಡ್ಕರ್ ಭವನ ತಲುಪಿ ಪ್ರವಾಸಿಮಂದಿರದಲ್ಲಿ ಮುಕ್ತಾಯಗೊಳ್ಳಲಿದೆ.ಮ್ಯಾರಥಾನ್ನಲ್ಲಿ ಯುವಕ, ಯುವತಿಯರು, ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳ ಸದಸ್ಯರು, ಅಧಿಕಾರಿಗಳು ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗೆ ಮೊ.ಸಂ 9448999332, 9880664347 ಸಂಪರ್ಕಿಸಬಹುದು.19ರಂದು ಪಾರಂಪರಿಕ ನಡಿಗೆ: ಅ.19ರಂದು ನಗರದಲ್ಲಿ ಪಾರಂಪರಿಕೆ ನಡಿಗೆ ಆಯೋಜಿಸಲಾಗಿದೆ. ಬೆಳಿಗ್ಗೆ 6.30ಕ್ಕೆ ಚಾಮರಾಜೇಶ್ವರ ದೇವಸ್ಥಾನದ ಆವರಣದಿಂದ ಪ್ರಾರಂಭಗೊಳ್ಳುವ ನಡಿಗೆ ಚಾಮರಾಜ ಒಡೆಯರ್ ಅವರ ಜನನ ಮಂಟಪ, ಜೈನರ ಬಸದಿ, ವೀರಭದ್ರಸ್ವಾಮಿ ದೇವಸ್ಥಾನದ ಮಾರ್ಗವಾಗಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ.ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧಿಗಳು ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಹೆಚ್ಚಿನ ಮಾಹಿತಿಗೆ 99164 66659, 99456 15695 ಸಂಪರ್ಕಿಸಬಹುದು.ಮಹಿಳಾ ದಸರಾ ವಿವಿಧ ಸ್ಪರ್ಧೆಅ.17ರಂದು ಮಹಿಳಾ ದಸರಾ ನಡೆಯಲಿದ್ದು ನಗರದ ವರನಟ ಡಾ. ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ 10 ಗಂಟೆಗೆ ರಂಗೋಲಿ ಸ್ಪರ್ಧೆ ನಡೆಯಲಿದೆ, ರಂಗೋಲಿ ಹಾಗೂ ಬಣ್ಣ ಹೊರತಾಗಿ ಇತರೆ ವಸ್ತುಗಳನ್ನು ಉಪಯೋಗಿಸುವಂತಿಲ್ಲ. ವಸ್ತುಗಳನ್ನು ಭಾಗವಹಿಸುವವರೇ ತರಬೇಕು. ಮುಂಚಿತವಾಗಿ ನೋಂದಣಿ ಮಾಡಿಸಿಕೊಳ್ಳಬೇಕು.ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ಲೆಮನ್ ಆನ್ ದಿ ಸ್ಪೂನ್, 10 ರಿಂದ 11 ಗಂಟೆಯವರೆಗೆ ಮ್ಯೂಸಿಕಲ್ ಚೇರ್ ಹಾಗೂ 11 ರಿಂದ 12 ಗಂಟೆಯವರೆಗೆ ಮಡಿಕೆ ಒಡೆಯುವ ಸ್ಪರ್ಧೆ ನಡೆಯಲಿದೆ. ಆಸಕ್ತಿಯುಳ್ಳವರು 8618242166, 7019069546 ಸಂಪರ್ಕಿಸಬಹುದು.17, 18ರಂದು ಗ್ರಾಮೀಣ ಕ್ರೀಡಾಕೂಟಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅ.17 ಮತ್ತು 18ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ದಸರಾ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿದೆ. ಪುರುಷರಿಗೆ ಕಬ್ಬಡಿ, ಕೊಕ್ಕೊ, ಕ್ರಿಕೆಟ್, ಹಗ್ಗ-ಜಗ್ಗಾಟ, ಮ್ಯೂಸಿಕಲ್ ಚೇರ್, ಸೈಕಲ್ ಪೋಲೋ ಹಾಗೂ ಮಹಿಳೆಯರಿಗೆ ಕಬ್ಬಡಿ, ಕೊಕ್ಕೊ, ಲೆಮನ್ ಅಂಡ್ ಸ್ಪೂನ್, ಹಗ್ಗ-ಜಗ್ಗಾಟ, ಮ್ಯೂಸಿಕಲ್ ಚೇರ್ ಸ್ಪರ್ಧೆಗಳು ನಡೆಯಲಿವೆ.261015-37-2079692560