ಹೂವಿನ ಅಲಂಕಾರಕ್ಕೆ 90 ಲಕ್ಷ, ಡಾನ್ಸ್ ಮಾಡೋಕೆ 80 ಲಕ್ಷ – ಹಾಸನಾಂಬ ಜಾತ್ರೆಯ ಖರ್ಚು ಕೇಳಿ ಬೆಚ್ಚಿಬಿದ್ದ ರೇವಣ್ಣ!
– ಸಿಎಂ, ಡಿಸಿಎಂ ಬಂದು ಹೋಗಲು 4 ಲಕ್ಷ, ಕಂಟ್ರೋಲ್ ರೂಮ್ಗೆ 50 ಲಕ್ಷ – ಲ್ಯಾಂಡ್ ಮಾಫಿಯಾ ಜೊತೆ ಜಿಲ್ಲಾಡಳಿತ ಶಾಮೀಲು; ಆರೋಪ ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವದ (Hasanamba Jatra Mahotsava) ಖರ್ಚು ವೆಚ್ಚಗಳ ಕುರಿತು ಹಾಲಿ ಸಚಿವ ಶಿವಲಿಂಗೇಗೌಡ ಅವರ ಬಳಿಕ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೂವಿನ ಅಲಂಕಾರಕ್ಕ

– ಸಿಎಂ, ಡಿಸಿಎಂ ಬಂದು ಹೋಗಲು 4 ಲಕ್ಷ, ಕಂಟ್ರೋಲ್ ರೂಮ್ಗೆ 50 ಲಕ್ಷ – ಲ್ಯಾಂಡ್ ಮಾಫಿಯಾ ಜೊತೆ ಜಿಲ್ಲಾಡಳಿತ ಶಾಮೀಲು; ಆರೋಪ ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವದ (Hasanamba Jatra Mahotsava) ಖರ್ಚು ವೆಚ್ಚಗಳ ಕುರಿತು ಹಾಲಿ ಸಚಿವ ಶಿವಲಿಂಗೇಗೌಡ ಅವರ ಬಳಿಕ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೂವಿನ ಅಲಂಕಾರಕ್ಕೆ 90 ಲಕ್ಷ ರೂ., ಡ್ಯಾನ್ಸ್ ಕಾರ್ಯಕ್ರಮಕ್ಕೆ 80 ಲಕ್ಷ ರೂ. ಹಾಗೂ ಕಂಟ್ರೋಲ್ ರೂಂಗೆ 50 ಲಕ್ಷ ರೂ. ಖರ್ಚು ಮಾಡುತ್ತಿರುವುದನ್ನ ಪ್ರಶ್ನಿಸಿದ್ದಾರೆ. ಸಿಎಂ ಮತ್ತು ಡಿಸಿಎಂ ಬಂದು ಹೋಗಲು 4 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಕ್ಟೋಬರ್ 29ರಿಂದ ನವೆಂಬರ್ 11ರ ವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಬಾರಿಯ ಜಾತ್ರೆಯ ಖರ್ಚು ವೆಚ್ಚಗಳ ಕುರಿತು ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಜಿಲ್ಲಾಡಳಿತದ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೂವಿನ ಅಲಂಕಾರಕ್ಕೆ 90 ಲಕ್ಷ ರೂ. ಖರ್ಚು.. ಅಯ್ಯಯ್ಯಪ್ಪೋ ಇನ್ನೂ ತೋಟಗಾರಿಕೆ ಇಲಾಖೆಯಿಂದ ಹೂವಿನ ಅಲಂಕಾರಕ್ಕೆ 90 ಲಕ್ಷ ರೂ. ಖರ್ಚು ಮಾಡುತ್ತಿರುವುದನ್ನ ಪ್ರಶ್ನಿಸಿದ ರೇವಣ್ಣ, ಭಕ್ತಾಧಿಗಳಿಗೆ ತಿಳಿಸಿದ್ದರೆ ಅವರೇ ಅಲಂಕಾರ ಮಾಡಿಸಿಕೊಡುತ್ತಿದ್ದರು. ದೇವರ ದುಡ್ಡನ್ನು ತೆಗೆದುಕೊಂಡು ಬರಗಾಲದ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ ಮಾಡುತ್ತಿದ್ದಾರೆ. ಈ ಬರಗಾಲದಲ್ಲಿ ಜಿಲ್ಲಾಡಳಿತಕ್ಕೆ ಇನ್ನೆಲ್ಲಿಂದ ದುಡ್ಡು ಬರುತ್ತೆ? ಎಂದು ಪ್ರಶ್ನಿಸಿದ್ದಾರೆ. ಕಂಟ್ರೋಲ್ ರೂಂಗೆ 50 ಲಕ್ಷ, ಡ್ಯಾನ್ಸ್ಗೆ 80 ಲಕ್ಷ! ಕಂಟ್ರೋಲ್ ರೂಂಗೆ 50 ಲಕ್ಷ ರೂ. ಮೀಸಲಿಟ್ಟಿರುವುದಕ್ಕೂ ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೆಚ್ಚದ ಬಗ್ಗೆ ಸಚಿವರೇ ತಲೆ ಚಚ್ಚಿಕೊಳ್ಳುತ್ತಿದ್ದರು. ಹಾಗಾದರೆ ಸಚಿವರ ಮಾತಿಗೆ ಬೆಲೆ ಇಲ್ಲದಂತಾಯಿತು. ಡಾನ್ಸ್ ಕಾರ್ಯಕ್ರಮಕ್ಕೆ 80 ಲಕ್ಷ ಅಂತಿದ್ದಾರೆ. ಲ್ಲಾ ಉಸ್ತುವಾರಿ ಸಚಿವರನ್ನು ಹೊಗಳಲು ಇಂತಹ ಕಾರ್ಯಕ್ರಮಗಳನ್ನ ರೂಪಿಸಲಾಗಿದೆಯೇ?ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ, ಡಿಸಿಎಂ ಬಂದು ಹೋಗಲು 4 ಲಕ್ಷ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಬಂದು ಹೋಗಲು ನಾಲ್ಕು ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ನಾವು ಗಣ್ಯರಲ್ಲ ಎಂದು ಹೇಳಿದ ಅವರು, ಜಿಲ್ಲಾಧಿಕಾರಿಗೆ ಎಷ್ಟು ದುರಹಂಕಾರವಿದೆ ಎಂಬುದನ್ನ ಟೈಂ ಬಂದಾಗ ಹೇಳುತ್ತೇನೆ. ನಮಗೆ ಕೊಟ್ಟಿರೋ ದಸರಾ ಆಹ್ವಾನ ಪತ್ರಿಕೆ ಕೊಡಲ್ಲ. ರ್ಮಿತಿ ಕೇಂದ್ರ ಡಿಸಿ ಕಂಟ್ರೋಲ್ನಲ್ಲಿ ಇದೆ. ಅದರ ಮೂಲಕ ಮೂರು ಕೋಟಿ ಕೆಲಸ ಆಗ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಿರಾಕಿ ಅವನಲ್ಲ ನಮಗೆ ಇದುವರೆಗೆ ಒಂದು ನಾಟಕ ಕೊಟ್ಟಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲ್ಯಾಂಡ್ ಮಾಫಿಯಾ ಜೊತೆ ಜಿಲ್ಲಾಡಳಿತ ಶಾಮೀಲು ಆರೋಪ ಜಿಲ್ಲಾ ಮಂತ್ರಿನಾ ಹೊಗಳಬೇಕು, ಒಂದೇ ಟೆಂಡರ್ಗೆ ತಲೆ ಚಚ್ಚಿಕೊಂಡಿದ್ದಾರೆ. ಇದು ದೇವರ ದುಡ್ಡು, ಮುಖ್ಯ ಕಾರ್ಯದರ್ಶಿ ತನಿಖೆ ನಡೆಸುತ್ತಾರಾ? ತಿಂದು ಹಾಳು ಬಿದ್ದು ಹೋಗಲಿ, ನಾವು ಮೊದಲು ರೈತರು ಉಳಿಸಿಕೊಳ್ಳೋಣ. ಬರಗಾಲ ರೈತರಿಗೆ ಇದೆ, ಜಿಲ್ಲಾಡಳಿತಕ್ಕೆ ಬರಗಾಲ ಇದೆಯಾ? ಯಾವ ಆಫೀಸ್ಗೆ ಹೋದರೂ ದುಡ್ಡು. ಲ್ಯಾಂಡ್ ಮಾಫಿಯಾದವರ ಜೊತೆ ಜಿಲ್ಲಾಡಳಿತ ಸೇರಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.