ರಾಜ್ಯದಲ್ಲಿ 3 ಹೊಸ ವೈದ್ಯಕೀಯ ಕಾಲೇಜು ಆರಂಭಕ್ಕೆ ಚಿಂತನೆ: ಶರಣ ಪ್ರಕಾಶ್ ಪಾಟೀಲ
ಹೊಸಕೋಟೆ: ಎಐ ತಂತ್ರಜ್ಞಾನವು ದೇಶದ ಅಭಿವೃದ್ಧಿ, ಶಿಕ್ಷಣ ಹಾಗೂ ಎಲ್ಲರ ಒಳಿತಿಗಾಗಿ ಬಳಕೆಯಾಗುವಂತಿದ್ದರೆ ಮಾತ್ರ ದೇಶಕ್ಕೆ ಸಹಕಾರಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ ಹೇಳಿದರು.ನಗರದ ಎಂವಿಜೆ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಬೆಳ್ಳಿ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿಯೇ ರಾಜ್ಯವು ಅತಿ ಹೆಚ್ಚು ವಿಶ್ವವಿದ್ಯಾಲಯ ಹಾಗೂ ವೈದ್ಯಕೀಯ ಕಾಲೇಜ

ಹೊಸಕೋಟೆ: ಎಐ ತಂತ್ರಜ್ಞಾನವು ದೇಶದ ಅಭಿವೃದ್ಧಿ, ಶಿಕ್ಷಣ ಹಾಗೂ ಎಲ್ಲರ ಒಳಿತಿಗಾಗಿ ಬಳಕೆಯಾಗುವಂತಿದ್ದರೆ ಮಾತ್ರ ದೇಶಕ್ಕೆ ಸಹಕಾರಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ ಹೇಳಿದರು.ನಗರದ ಎಂವಿಜೆ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಬೆಳ್ಳಿ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿಯೇ ರಾಜ್ಯವು ಅತಿ ಹೆಚ್ಚು ವಿಶ್ವವಿದ್ಯಾಲಯ ಹಾಗೂ ವೈದ್ಯಕೀಯ ಕಾಲೇಜುಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದಲ್ಲಿ ಈಗಿರುವ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಜೊತೆ ಮತ್ತೆ ಮೂರು ನೂತನ ಕಾಲೇಜುಗಳನ್ನು ಆರಂಭಿಸುವ ಉದ್ದೇಶವಿದೆ’ ಎಂದರು.ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ‘ಎಐ ತಂತ್ರಜ್ಞಾನ ಬಳಸಲ್ಪಡದ ಅಧ್ಯಯನ ಶಿಸ್ತು ಇಂದು ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಜಗತ್ತು ಎಐ ಮಯವಾಗಿದೆ. ಆದ್ದರಿಂದ ವೈದ್ಯರಂಗದಲ್ಲಿ ಎಐ ಸಕ್ರಿಯಗೊಂಡರೆ ಅದೆಷ್ಟೊ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ’ ಎಂದರು.ಕಾರ್ಯಕ್ರಮದಲ್ಲಿ ಎಂವಿಜೆ ಆಸ್ಪತ್ರೆಯ ಅಧ್ಯಕ್ಷ ಎಂ.ಜೆ. ಮೋಹನ್, ಸಿಇಒ ಧರಣಿ ಮೋಹನ್, ರಾಜೀವ್ ಗಾಂಧಿ ವಿಶ್ವವಿಧ್ಯಾನಿಲಯದ ಉಪಕುಲಪತಿ ಭಗವಾನ್ ಬಿಸಿ, ಎಂವಿಜೆ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ್, ಡಿ.ಎಸ್.ರಾಜ್ಕುಮಾರ್, ಡಿವೈಎಸ್ಪಿ ಮಲ್ಲೇಶ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರಸಿಲ್ಲಾ ನಿರ್ಮಲ್, ಕಾಲೇಜು ಸೂಪರಿಡೆಂಟ್ ಡಾ. ಪ್ರಮೋದ್ ಉಪಸ್ಥಿತರಿದ್ದರು.261015-15-1094996721