3 ಲಕ್ಷ ಲಂಚ ಪಡೆಯುವಾಗ ʻಲೋಕಾʼ ದಾಳಿ – ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿ
ರಾಯಚೂರು: ಭೂ ಪರಿವರ್ತನೆಗೆ 3.5 ಲಕ್ಷ ರೂ. ಲಂಚ (Bribe) ಪಡೆಯುತ್ತಿದ್ದ ಮಾನ್ವಿ ನಗರ ಯೋಜನಾ ಪ್ರಾಧಿಕಾರ ಸಹಾಯಕ ನಿರ್ದೇಶಕ ಕಚೇರಿಯ ಪ್ರಭಾರ ನಗರ ಯೋಜನಾ ಸದಸ್ಯ ಕಾರ್ಯದರ್ಶಿಯನ್ನು ಲೋಕಾಯುಕ್ತ (Lokayukta) ಪೊಲೀಸರು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಯಾದಗಿರಿ (Yadgiri) ಹಾಗೂ ಮಾನ್ವಿ (Manvi) ಎರಡು ಕಡೆ ಶರಣಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಎನ್ಎ ಭೂ

ರಾಯಚೂರು: ಭೂ ಪರಿವರ್ತನೆಗೆ 3.5 ಲಕ್ಷ ರೂ. ಲಂಚ (Bribe) ಪಡೆಯುತ್ತಿದ್ದ ಮಾನ್ವಿ ನಗರ ಯೋಜನಾ ಪ್ರಾಧಿಕಾರ ಸಹಾಯಕ ನಿರ್ದೇಶಕ ಕಚೇರಿಯ ಪ್ರಭಾರ ನಗರ ಯೋಜನಾ ಸದಸ್ಯ ಕಾರ್ಯದರ್ಶಿಯನ್ನು ಲೋಕಾಯುಕ್ತ (Lokayukta) ಪೊಲೀಸರು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಯಾದಗಿರಿ (Yadgiri) ಹಾಗೂ ಮಾನ್ವಿ (Manvi) ಎರಡು ಕಡೆ ಶರಣಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ಎನ್ಎ ಭೂಮಿಯನ್ನ ಕಮರ್ಷಿಯಲ್ ಭೂಮಿಗೆ ಬದಲಾವಣೆ ಮಾಡಲು 3.5 ಲಕ್ಷ ರೂ. ಲಂಚಕ್ಕೆ ಅವರು ಬೇಡಿಕೆ ಇಟ್ಟಿದ್ದರು. ಲೇಔಟ್ನ ಕೆಲ ಭಾಗವನ್ನ ಕಮರ್ಷಿಯಲ್ ಮಾಡಲು ಲಂಚ ಕೇಳಿದ್ದ ಹಿನ್ನೆಲೆ ಭೂ ಮಾಲೀಕ ಸುಧಾಕರ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಪತಿಯನ್ನು ಕೊಂದು ಮೈಮೇಲೆ ಹಲ್ಲಿಲ್ಲದ ಹಾವು ಬಿಟ್ಟಿದ್ದ ಪತ್ನಿ, ಪ್ರಿಯಕರನಿಗೆ ಮರಣದಂಡನೆ! ಭೂ ಮಾಲೀಕನಿಂದ 3 ಲಕ್ಷ ರೂ. ಲಂಚ ಪಡೆಯುವಾಗ ಚಾಲಕ ಸಂತೋಷ ಹಾಗೂ ಅಧಿಕಾರಿ ಶರಣಪ್ಪ ಇಬ್ಬರು ಲೋಕಾ ಬಲೆಗೆ ಬಿದ್ದಿದ್ದಾರೆ. ಯಾದಗಿರಿ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಯಾದಗಿರಿಗೆ ಬಂದು ಹಣ ಕೊಡುವಂತೆ ಅಧಿಕಾರಿ ಒತ್ತಾಯಿಸಿದ್ದ. ಸಿಕ್ಕಿಬಿದ್ದ ಅಧಿಕಾರಿ ಹಾಗೂ ಚಾಲಕನನ್ನ ವಶಕ್ಕೆ ಪಡೆದು ರಾಯಚೂರು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಬಾಡಿಗೆ ಮನೆಯಲ್ಲಿ ಟೆಕ್ಕಿ ಅನುಮಾನಾಸ್ಪದ ಸಾವು; 6 ತಿಂಗಳ ಬಳಿಕ ತನಿಖೆಯಲ್ಲಿ ಸತ್ಯ ರಿವೀಲ್