ಸಾಲ ತೀರಿಸಲು ಅಮಿತಾಭ್ ಬಚ್ಚನ್ ದಿನಕ್ಕೆ 18 ಗಂಟೆ ದುಡಿಯುತ್ತಿದ್ದರು: ರಜನಿಕಾಂತ್
ಬಾಲಿವುಡ್ ಹಿರಿಯ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾಗ, ಸಾಲ ತೀರಿಸಲು ತಮ್ಮ 64ನೇ ವಯಸ್ಸಿನಲ್ಲೂ ದಿನಕ್ಕೆ 18 ಗಂಟೆ ದುಡಿಯುತ್ತಿದ್ದ ಎಂಬ ವಿಚಾರವನ್ನು ರಜನಿಕಾಂತ್ ಅವರು ನೆನಪಿಸಿಕೊಂಡಿದ್ದರು. 2024ರಲ್ಲಿ ವೇಟ್ಟೈಯಾನ್ ಸಿನಿಮಾದ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಜನಿಕಾಂತ್, ಬಿಗ್ ಬಿ ಅವರ ದೃಢಸಂಕಲ್ಪವನ್ನು ಕೊಂ

ಬಾಲಿವುಡ್ ಹಿರಿಯ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾಗ, ಸಾಲ ತೀರಿಸಲು ತಮ್ಮ 64ನೇ ವಯಸ್ಸಿನಲ್ಲೂ ದಿನಕ್ಕೆ 18 ಗಂಟೆ ದುಡಿಯುತ್ತಿದ್ದ ಎಂಬ ವಿಚಾರವನ್ನು ರಜನಿಕಾಂತ್ ಅವರು ನೆನಪಿಸಿಕೊಂಡಿದ್ದರು. 2024ರಲ್ಲಿ ವೇಟ್ಟೈಯಾನ್ ಸಿನಿಮಾದ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಜನಿಕಾಂತ್, ಬಿಗ್ ಬಿ ಅವರ ದೃಢಸಂಕಲ್ಪವನ್ನು ಕೊಂಡಾಡಿದ್ದರು. ಬಸ್ ಕಂಡಕ್ಟರ್ ಎಂದು ಹೆಮ್ಮೆಯಿಂದ ನನ್ನನ್ನು ಗುರುತಿಸಿಕೊಳ್ಳುತ್ತೇನೆ: ರಜನಿಕಾಂತ್ತೆರೆ ಮೇಲೆ ಅಬ್ಬರಿಸಿದ ತಲೈವಾ.. ‘ಜೈಲರ್ 2’ ಮೊದಲ ದಿನ ಗಳಿಸಿದ್ದೆಷ್ಟು? That Is #AmitabhBachchan Haters in Mumbai Laughed at AB, Saying “He's Doing Ads For Money”Just 3 years… Age 64 1000 Problems in the body… He Worked 18 hours per day & Paid All DebtBrought the same house & 3 more on the same road.~ #Rajinikanth ji pic.twitter.com/bHZf7HmqJk— ʜᴀɴɪ ᴀᴅᴀᴠ (@JrYadav1409) October 13, 2026 ಅಮಿತಾಭ್ ಬಚ್ಚನ್ ಬಗ್ಗೆ ರಜನಿಕಾಂತ್ ಹೇಳಿದ್ದಿಷ್ಟು...‘ಅಮಿತಾಭ್ ಬಚ್ಚನ್ ಅವರು ಕಷ್ಟದಲ್ಲಿದ್ದಾಗ ಜಾಹೀರಾತುಗಳಲ್ಲಿ ನಟಿಸುತ್ತಿದ್ದುದನ್ನು ನೋಡಿ ಮುಂಬೈನ ಕೆಲವರು ಹಣಕ್ಕಾಗಿ ಇಳಿವಯಸ್ಸಿನಲ್ಲೂ ಆ್ಯಡ್ ಮಾಡುತ್ತಿದ್ದಾರೆ ಎಂದು ಗೇಲಿ ಮಾಡಿದ್ದರು. ಆದರೆ ದೇಹದಲ್ಲಿ ಸಾವಿರ ಆರೋಗ್ಯ ಸಮಸ್ಯೆಗಳಿದ್ದರೂ, 64ನೇ ವಯಸ್ಸಿನಲ್ಲಿ ದಿನಕ್ಕೆ 18 ಗಂಟೆ ಸತತ ಮೂರು ವರ್ಷ ಕೆಲಸ ಮಾಡಿ, ತಮಗಿದ್ದ ಎಲ್ಲಾ ಸಾಲಗಳನ್ನು ತೀರಿಸಿದ್ದಲ್ಲದೆ, ಒಂದೇ ರಸ್ತೆಯಲ್ಲಿ ಮೂರು ಐಷಾರಾಮಿ ಮನೆಗಳನ್ನು ಖರೀದಿಸಿದರು. ಅದು ಅಮಿತಾಭ್ ಬಚ್ಚನ್ ಎಂದರೆ’ ಎಂದು ರಜನಿಕಾಂತ್ ಹೆಮ್ಮೆಯಿಂದ ಹೇಳಿದ್ದರು.1990ರ ದಶಕದ ಕೊನೆಯಲ್ಲಿ ಅಮಿತಾಭ್ ಬಚ್ಚನ್ ಅವರ ಸ್ವಂತ ನಿರ್ಮಾಣ ಸಂಸ್ಥೆ ‘ಎಬಿಸಿಎಲ್’ ದಿವಾಳಿಯಾಗಿ ₹90 ಕೋಟಿಯಷ್ಟು ಸಾಲದ ಸುಳಿಗೆ ಸಿಲುಕಿದ್ದರು. ಜೀವಮಾನದ ಸಂಪಾದನೆಯನ್ನೆಲ್ಲ ಕಳೆದುಕೊಂಡಿದ್ದ ಬಿಗ್ ಬಿ, 2000ನೇ ಇಸವಿಯಲ್ಲಿ ಪ್ರಸಾರವಾದ ‘ಕೌನ್ ಬನೇಗಾ ಕರೋಡ್ಪತಿ’ ರಿಯಾಲಿಟಿ ಶೋ ಮೂಲಕ ಕಮ್ಬ್ಯಾಕ್ ಮಾಡಿ, ಸಂಪೂರ್ಣ ಆರ್ಥಿಕ ಚೇತರಿಕೆ ಕಂಡಿದ್ದರು.ಅಮಿತಾಭ್ ಬಚ್ಚನ್ ಹಾಗೂ ರಜನಿಕಾಂತ್ ಅವರು ‘ಅಂಧಾ ಕಾನೂನು’, ‘ಹಮ್’, ‘ಗೆರಾಫ್ತಾರ್’ ಹಾಗೂ ಇತ್ತೀಚಿನ ‘ವೇಟ್ಟೈಯಾನ್’ ಚಿತ್ರಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದಾರೆ. ಇಂದಿಗೂ ಈ ಇಬ್ಬರ ಸ್ನೇಹ, ಪ್ರೀತಿ, ಒಡನಾಟ ಹಾಗೆಯೇ ಇದೆ.