ಬಾಲಕಿ ಮೇಲಿನ ಅತ್ಯಾಚಾರ ಆರೋಪ ಸಾಬೀತು: ಅಪರಾಧಿಗೆ 20 ವರ್ಷ ಜೈಲು
ದಾವಣಗೆರೆ: ಪುಸಲಾಯಿಸಿ 17 ವರ್ಷದ ಬಾಲಕಿಯನ್ನು ಮದುವೆಯಾಗಿ ಅತ್ಯಾಚಾರ ಎಸಗಿದ ಅಪರಾಧಿ ಕಾರ್ತಿಕ್ (22) ಎಂಬಾತನಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹ 40,000 ದಂಡ ವಿಧಿಸಿ ಆದೇಶಿಸಿದೆ.ಕೆಟಿಜೆ ನಗರದ ನಿವಾಸಿ ಕಾರ್ತಿಕ್ 2022ರ ಮಾರ್ಚ್ 10ರಂದು ಬಾಲಕಿಯನ್ನು ಪುಸಲಾಯಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ

ದಾವಣಗೆರೆ: ಪುಸಲಾಯಿಸಿ 17 ವರ್ಷದ ಬಾಲಕಿಯನ್ನು ಮದುವೆಯಾಗಿ ಅತ್ಯಾಚಾರ ಎಸಗಿದ ಅಪರಾಧಿ ಕಾರ್ತಿಕ್ (22) ಎಂಬಾತನಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹ 40,000 ದಂಡ ವಿಧಿಸಿ ಆದೇಶಿಸಿದೆ.ಕೆಟಿಜೆ ನಗರದ ನಿವಾಸಿ ಕಾರ್ತಿಕ್ 2022ರ ಮಾರ್ಚ್ 10ರಂದು ಬಾಲಕಿಯನ್ನು ಪುಸಲಾಯಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದನು. ಎನ್ಜಿಆರ್ ಬಡಾವಣೆಯ ಗಣೇಶ ದೇವಸ್ಥಾನದಲ್ಲಿ ಅರಿಶಿಣದ ಕೊಂಬಿನ ದಾರ ಕಟ್ಟಿ ಮದುವೆ ಆಗಿರುವುದಾಗಿ ನಂಬಿಸಿ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು.ಬಾಲಕಿ ಕಾಣೆಯಾಗಿರುವ ಬಗ್ಗೆ ಪಾಲಕರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಕಾರ್ತಿಕ್ ಬಂಧಿಸಿ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಅವರು ಅಪರಾಧಿಗೆ ವಿಧಿಸಿದ ₹ 40,000 ದಂಡದ ಮೊತ್ತ ಹಾಗೂ ಸರ್ಕಾರ ₹ 5 ಲಕ್ಷ ಪರಿಹಾರ ನೀಡುವಂತೆ ಶಿಫಾರಸು ಮಾಡಿದ್ದಾರೆ.
Read the complete story at Prajavani