ಲಕ್ಷ್ಮೇಶ್ವರ: ನವರಾತ್ರಿ ಹಬ್ಬದಲ್ಲಿ ದುರ್ಗಾದೌಡ್ ಸಂಭ್ರಮ
ಲಕ್ಷ್ಮೇಶ್ವರ: ನವರಾತ್ರಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ದಸರಾ ಉತ್ಸವ ಸಮಿತಿ ಹಮ್ಮಿಕೊಂಡಿರುವ 5ನೇ ವರ್ಷದ ದುರ್ಗಾದೌಡ್ ಕಾರ್ಯಕ್ರಮ ನಡೆಯುತ್ತಿದೆ.ಗುರುವಾರ ಬಸ್ತಿಬಣದ ಬನಶಂಕರಿ ದೇವಸ್ಥಾನಕ್ಕೆ ದುರ್ಗಾದೌಡ್ ಮೆರವಣಿಗೆ ಆಗಮಿಸಿತು. ಬಸ್ತಿಬಣ ಮ್ಯಾಗೇರಿ ಓಣಿಯ ದುರ್ಗಾದೇವಿ ಗುಡಿಯಿಂದ ಆರಂಭವಾದ ಮೆರಣಿಗೆಯು ಅಗ್ನಿಸೋಮೇಶ್ವರ, ಮೂಕಬಸವೇಶ್ವರ, ಶನೇಶ್ವರ, ಅಯ್ಯಪ್ಪಸ್ವಾಮಿ,

ಲಕ್ಷ್ಮೇಶ್ವರ: ನವರಾತ್ರಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ದಸರಾ ಉತ್ಸವ ಸಮಿತಿ ಹಮ್ಮಿಕೊಂಡಿರುವ 5ನೇ ವರ್ಷದ ದುರ್ಗಾದೌಡ್ ಕಾರ್ಯಕ್ರಮ ನಡೆಯುತ್ತಿದೆ.ಗುರುವಾರ ಬಸ್ತಿಬಣದ ಬನಶಂಕರಿ ದೇವಸ್ಥಾನಕ್ಕೆ ದುರ್ಗಾದೌಡ್ ಮೆರವಣಿಗೆ ಆಗಮಿಸಿತು. ಬಸ್ತಿಬಣ ಮ್ಯಾಗೇರಿ ಓಣಿಯ ದುರ್ಗಾದೇವಿ ಗುಡಿಯಿಂದ ಆರಂಭವಾದ ಮೆರಣಿಗೆಯು ಅಗ್ನಿಸೋಮೇಶ್ವರ, ಮೂಕಬಸವೇಶ್ವರ, ಶನೇಶ್ವರ, ಅಯ್ಯಪ್ಪಸ್ವಾಮಿ, ಮಾರುತಿ, ಕೌಲಪೇಟೆಯ ಗಣಪತಿ, ಸಿದ್ಧಿಪ್ರದಾಯಿನಿ ದೇವಸ್ಥಾನ ಹಾಗೂ ಶಂಖಬಸದಿಗೆ ಭೇಟಿ ನೀಡಿ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಿತು. ಮಹಿಳೆಯರು ಮೆರವಣಿಗೆ ಬರುವ ರಸ್ತೆಯಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿದ್ದರು.ಬಜಾರ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ ಮಾತನಾಡಿ, ‘ದಸರಾ ಹಿಂದೂಗಳ ಪಾಲಿಗೆ ಅತೀ ದೊಡ್ಡ ಹಬ್ಬವಾಗಿದ್ದು, ಇದು ನಾಡಿನ ಪರಂಪರೆ, ಆಚರಣೆ, ಸಾಂಸ್ಕೃತಿಗಳ ಪ್ರತೀಕವಾಗಿ ಇಂದಿಗೂ ಮಹತ್ವ ಉಳಿಸಿಕೊಂಡಿದೆ. ಯುವ ಜನತೆ ದುರ್ಗಾದೌಡಗಳಂಥ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಪ್ರಜೆಗಳಾಗಬೇಕು’ ಎಂದು ತಿಳಿಸಿದರು.ಬಸಣ್ಣ ಅರಳಿ, ನಾಗರಾಜ ಹಣಗಿ, ಮಲ್ಲಿಕಾರ್ಜುನ ನೀರಾಲೋಟಿ, ರವಿ ಲಿಂಗಶೆಟ್ಟಿ ಮಾತನಾಡಿದರು. ಸೋಮೇಶ್ವರ ಭಕ್ತರ ಸೇವಾ ಸಮಿತಿ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ, ತಿಪ್ಪಣ್ಣ ಸಂಶಿ, ಅಶೋಕ ಹೊಂಗಲ, ಶಂಕರ ಬಾಳಿಕಾಯಿ, ಗುಡಗೇರಿ, ಅಶೋಕ ನೀರಾಲೋಟಿ, ಮಲ್ಲೇಶಪ್ಪ ಉಮಚಗಿ, ದೇವಪ್ಪ ಕುಂಬಾರ, ಎಫ್.ಎಚ್. ಮುದಗಲ್ಲ, ಚಂದ್ರು ಧರಣಿ, ಯಲ್ಲಪ್ಪ ಕೋರದಾಳ, ದೇವಪ್ಪ ಗಡೇದ, ಪಾಂಡಪ್ಪ ಹುಬ್ಬಳ್ಳಿ, ಯಲ್ಲಪ್ಪ ಚಕ್ರಸಾಲಿ, ಈಶ್ವರ ಬನ್ನಿಕೊಪ್ಪ, ದೇವಪ್ಪ ಹುಲಮನಿ ಇದ್ದರು.261016-23-312194565