ಸಿನಿಮಾ ಕತೆಯಲ್ಲ, ನಿಜವಾಯ್ತು ಹಾರುವ ಕಾರು – ಗಾಳಿಯಲ್ಲಿ ತೇಲಿ ಲ್ಯಾಂಡ್ ಆಯ್ತು ಟೆಸ್ಲಾ ರೋಡ್ಸ್ಟರ್!
ಟೆಕ್ಸಾಸ್: ಆ್ಯಕ್ಷನ್ ಸಿನಿಮಾಗಳಲ್ಲಿ ಕಾರುಗಳು ಗಾಳಿಯಲ್ಲಿ ಹಾರುವ ದೃಶ್ಯಗಳನ್ನು ನೋಡಿರಬಹುದು. ಆದರೆ ಅಂತಹ ದೃಶ್ಯಗಳು ಇನ್ನು ಮುಂದೆ ಕೇವಲ ತೆರೆಗೆ ಮಾತ್ರ ಸೀಮಿತವಾಗಿರದೆ, ನಿಜ ಜೀವನದಲ್ಲೂ ಕಾಣಸಿಗುವ ದಿನಗಳು ಹತ್ತಿರವಾಗಿವೆ. ಹೌದು, ವಿಶ್ವದ ಖ್ಯಾತ ಉದ್ಯಮಿ ಎಲಾನ್ ಮಸ್ಕ್ (Elon Musk) ಒಡೆತನದ ಟೆಸ್ಲಾ ಕಂಪನಿ, ಹಾರುವ ಎಲೆಕ್ಟ್ರಿಕ್ ಕಾರಿನ ಕನಸನ್ನು ನನಸು ಮ

ಟೆಕ್ಸಾಸ್: ಆ್ಯಕ್ಷನ್ ಸಿನಿಮಾಗಳಲ್ಲಿ ಕಾರುಗಳು ಗಾಳಿಯಲ್ಲಿ ಹಾರುವ ದೃಶ್ಯಗಳನ್ನು ನೋಡಿರಬಹುದು. ಆದರೆ ಅಂತಹ ದೃಶ್ಯಗಳು ಇನ್ನು ಮುಂದೆ ಕೇವಲ ತೆರೆಗೆ ಮಾತ್ರ ಸೀಮಿತವಾಗಿರದೆ, ನಿಜ ಜೀವನದಲ್ಲೂ ಕಾಣಸಿಗುವ ದಿನಗಳು ಹತ್ತಿರವಾಗಿವೆ. ಹೌದು, ವಿಶ್ವದ ಖ್ಯಾತ ಉದ್ಯಮಿ ಎಲಾನ್ ಮಸ್ಕ್ (Elon Musk) ಒಡೆತನದ ಟೆಸ್ಲಾ ಕಂಪನಿ, ಹಾರುವ ಎಲೆಕ್ಟ್ರಿಕ್ ಕಾರಿನ ಕನಸನ್ನು ನನಸು ಮಾಡುವತ್ತ ದೊಡ್ಡ ಹೆಜ್ಜೆಯನ್ನಿಟ್ಟಿದೆ. ಅಮೆರಿಕದ ಟೆಕ್ಸಾಸ್ನಲ್ಲಿರುವ ಸ್ಪೇಸ್ಎಕ್ಸ್ ಕೇಂದ್ರದಲ್ಲಿ ಮರುವಿನ್ಯಾಸಗೊಂಡ ಹೊಸ ಟೆಸ್ಲಾ ರೋಡ್ಸ್ಟರ್ (Roadster) ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಿನ ಸಾಹಸ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಲಾಗಿದೆ. Turns out the future does have flying cars https://t.co/6fexPp6SXI — Elon Musk (@elonmusk) October 16, 2026 ಈ ಪ್ರದರ್ಶನದಲ್ಲಿ ಕಾರು ದೊಡ್ಡ ರ್ಯಾಂಪ್ ಮೇಲೆ ಅತಿ ವೇಗವಾಗಿ ಚಲಿಸಿ, ಕೆಲ ಕ್ಷಣ ತಲೆಕೆಳಗಾಗಿ ಸಾಗಿತು. ಅಷ್ಟೇ ಅಲ್ಲದೆ, ನೋಡನೋಡುತ್ತಿದ್ದಂತೆ ಗಾಳಿಯಲ್ಲಿ ಜಿಗಿದು, ಸ್ವಲ್ಪ ದೂರ ತೇಲಾಡಿ ನಂತರ ಸುರಕ್ಷಿತವಾಗಿ ನೆಲಕ್ಕಿಳಿಯಿತು. ಈ ರೋಮಾಂಚಕ ವಿಡಿಯೊವನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ಎಲಾನ್ ಮಸ್ಕ್, “ಭವಿಷ್ಯದಲ್ಲಿ ಹಾರುವ ಕಾರುಗಳು ನಿಜವಾಗಿಯೂ ಇರುತ್ತವೆ ಎಂಬುದು ಈಗ ಸಾಬೀತಾಗಿದೆ” ಎಂದು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮಹಾ ಕ್ರಾಂತಿ; ನಿಮ್ಮ ಆಯ್ಕೆ ಯಾವುದು? https://t.co/KBWjjWknXe — Elon Musk (@elonmusk) October 16, 2026 ಸಾಧ್ಯವಾಗಿದ್ದು ಹೇಗೆ? ಸ್ಪೇಸ್ಎಕ್ಸ್ ರಾಕೆಟ್ಗಳಲ್ಲಿ ಬಳಸುವ ಕೋಲ್ಡ್-ಗ್ಯಾಸ್ ಥ್ರಸ್ಟರ್ (Cold Gas Thruster) ತಂತ್ರಜ್ಞಾನವನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ. ಇದು ಕಾರಿನೊಳಗಿನ ಒತ್ತಡದ ಅನಿಲವನ್ನು ವೇಗವಾಗಿ ಹೊರಹಾಕಿ, ಕಾರು ಮೇಲಕ್ಕೆ ಜಿಗಿಯಲು ಮತ್ತು ಗಾಳಿಯಲ್ಲಿ ತೇಲಲು ಅಗತ್ಯವಾದ ಬಲವನ್ನು (Thrust) ನೀಡುತ್ತದೆ. ಸಾಮಾನ್ಯ ರಸ್ತೆ ಕಾರುಗಳಲ್ಲಿ ಇಂತಹ ಚಲನೆಗಳನ್ನು ಊಹಿಸಲೂ ಸಾಧ್ಯವಿಲ್ಲ. ಈ ಸಾಹಸವನ್ನು ತಜ್ಞರ ಸಮ್ಮುಖದಲ್ಲಿ, ಅತ್ಯಂತ ಕಟ್ಟುನಿಟ್ಟಾದ ಸುರಕ್ಷಿತ ವಾತಾವರಣದಲ್ಲಿ ಮಾತ್ರ ನಡೆಸಲಾಗಿದೆ. ಸಾಮಾನ್ಯ ರಸ್ತೆಗಳಲ್ಲಿ ಇಂತಹ ಹಾರಾಟ ನಡೆಸಲು ಸದ್ಯಕ್ಕೆ ಯಾವುದೇ ಸರ್ಕಾರಿ ಅಥವಾ ಕಾನೂನು ಅನುಮತಿಗಳಿಲ್ಲ. ಸುರಕ್ಷತೆ ಹಾಗೂ ಜನಸಾಮಾನ್ಯರ ಬಳಕೆಯ ದೃಷ್ಟಿಯಿಂದ ಇನ್ನೂ ಸಾಕಷ್ಟು ಪರೀಕ್ಷೆಗಳು ನಡೆಯಬೇಕಿದೆ. Real life, baby https://t.co/3QEqn18wig — Tesla (@Tesla) October 16, 2026 ಟೆಸ್ಲಾ ಈ ಕಾರನ್ನು ಮೊದಲ ಬಾರಿಗೆ 2017ರಲ್ಲೇ ಪರಿಚಯಿಸಿತ್ತಾದರೂ, ತಾಂತ್ರಿಕ ಕಾರಣಗಳಿಂದ ಉತ್ಪಾದನೆ ತಡವಾಗಿತ್ತು. ವರದಿಗಳ ಪ್ರಕಾರ, ಈ ಹೊಸ ಕಾರಿನ ಉತ್ಪಾದನೆ 2028 ರಿಂದ ಆರಂಭವಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಎಲ್ಲರ ಕೈಗೆಟುಕುವ ದೈನಂದಿನ ವಾಹನವಾಗಲು ಇನ್ನು ಹಲವು ವರ್ಷಗಳು ಬೇಕಾಗಬಹುದಾದರೂ, ಭವಿಷ್ಯದ ಸಾರಿಗೆ ಹೇಗಿರಲಿದೆ ಎಂಬುದಕ್ಕೆ ಟೆಸ್ಲಾ ಅದ್ಭುತ ಮುನ್ನುಡಿ ಬರೆದಿದೆ.