ಸೈಟು ಒತ್ತುವರಿದಾರರ ಮಾಹಿತಿ ನೀಡಿ.. 4 ಲಕ್ಷದ ವರೆಗೆ ಬಹುಮಾನ ಗೆಲ್ಲಿ – ಬಿಡಿಎ ಬಂಪರ್ ಆಫರ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಆಸ್ತಿ ಒತ್ತುವರಿ ತಡೆಗೆ ಬಿಡಿಎ ಹೊಸ ಅಸ್ತ್ರ ಪ್ರಯೋಗಿಸಲು ಸಜ್ಜಾಗ್ತಿದೆ. ನಗರದಲ್ಲಿರೋ ಬಿಡಿಎ ನಿವೇಶನಗಳನ್ನ ಒತ್ತುವರಿ (Encroachment) ಮಾಡುವವರ ವಿರುದ್ಧ ಮಾಹಿತಿ ಜೊತೆಗೆ ಸೂಕ್ ದಾಖಲೆ ನೀಡುವವರಿಗೆ 4 ಲಕ್ಷ ರೂ. ವರೆಗೆ ಬಹುಮಾನ ಘೋಷಿಸಿದೆ. ನಿವೇಶನದ ಅಳತೆಗೆ ಅನುಗುಣವಾಗಿ ಬಹುಮಾನದ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಆಸ್ತಿ ಒತ್ತುವರಿ ತಡೆಗೆ ಬಿಡಿಎ ಹೊಸ ಅಸ್ತ್ರ ಪ್ರಯೋಗಿಸಲು ಸಜ್ಜಾಗ್ತಿದೆ. ನಗರದಲ್ಲಿರೋ ಬಿಡಿಎ ನಿವೇಶನಗಳನ್ನ ಒತ್ತುವರಿ (Encroachment) ಮಾಡುವವರ ವಿರುದ್ಧ ಮಾಹಿತಿ ಜೊತೆಗೆ ಸೂಕ್ ದಾಖಲೆ ನೀಡುವವರಿಗೆ 4 ಲಕ್ಷ ರೂ. ವರೆಗೆ ಬಹುಮಾನ ಘೋಷಿಸಿದೆ. ನಿವೇಶನದ ಅಳತೆಗೆ ಅನುಗುಣವಾಗಿ ಬಹುಮಾನದ ಮೊತ್ತ ನಿಗದಿಪಡಿಸಿದ್ದು, ಅಕ್ರಮ ಒತ್ತುವರಿ ತಡೆಗೆ ಬಿಡಿಎ ಮಹತ್ವದ ಹೆಜ್ಜೆ ಇಟ್ಟಿದೆ. ಹೌದು. ಬೆಂಗಳೂರಿನಲ್ಲಿ ನಿವೇಶನ (ಸೈಟು) ತೆಗದುಕೊಂಡು, ಅಲ್ಲಿ ಮನೆ ಕಟ್ಟೋದು ಲಕ್ಷಾಂತರ ಜನರ ಕನಸು, ಆ ಕನಸನ್ನ ನನಸು ಮಾಡಲೆಂದೇ ಬಿಡಿಎ ಅನೇ ವರ್ಷಗಳಿಂದ ಕಾರ್ಯಚರಣೆ ಮಾಡ್ತ ಬಂದಿದೆ. ಹಾಗೇಯೆ ಬಿಇಎ ಜಾಗವನ್ನ ಅನಧಿಕೃತವಾಗಿ ಅಕ್ರಮಿಸಿ ಮನೆ ಕಟ್ಟಿಕೊಂಡವರು ಇದ್ದಾರೆ. ಬಿಡಿಎ ಆಗಾಗ ಅಂತಹ ಸ್ಥಳಗಳನ್ನ ಒತ್ತುವರಿ ತೆರವು ಕಾರ್ಯದ ಮೂಲಕ ಮತ್ತೆ ತಮ್ಮ ಸ್ವಾಧೀನಕ್ಕ ಪಡೆಯುತ್ತಲೂ ಬಂದಿದೆ. ಈಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಆಸ್ತಿಗಳ ಒತ್ತುವರಿ ತಡೆಯಲು ಬಿಡಿಎ ಮತ್ತೊಂದು ಹೆಜ್ಜೆ ಇಟ್ಟಿದೆ. ಬಿಡಿಎ ನಿವೇಶನಗಳು ಹಾಗೂ ಜಾಗಗಳನ್ನ ಅಕ್ರಮವಾಗಿ ಒತ್ತುವರಿ ಮಾಡುವವರ ಬಗ್ಗೆ ಮಾಹಿತಿ ನೀಡುವವರಿಗೆ ನಗದು ಬಹುಮಾನ ನೀಡಲು ನಿರ್ಧರಿಸಿದೆ. ನಿವೇಶನದ ಅಳತೆಗೆ ಅನುಗುಣವಾಗಿ ಬಹುಮಾನದ ಮೊತ್ತ ನಿಗದಿಪಡಿಸಲಾಗಿದೆ. ಯಾವ ಅಳತೆಯ ನಿವೇಶನಕ್ಕೆ ಎಷ್ಟು ಬಹುಮಾನ? * 20*30 ಅಡಿ ನಿವೇಶನ: 50 ಸಾವಿರ ಬಹುಮಾನ.. * 30*40 ಅಡಿ ನಿವೇಶನ: 1 ಲಕ್ಷ ಬಹುಮಾನ.. * 40*60 ಅಡಿ ನಿವೇಶನ: 2 ಲಕ್ಷ ಬಹುಮಾನ. * 50*80 ಅಡಿ ನಿವೇಶನ: 4 ಲಕ್ಷ ಬಹುಮಾನ. ಬಿಡಿಎ ಆಸ್ತಿಗಳ ಒತ್ತುವರಿ ತೆರವುಗೊಳಿಸುವುದು ಪ್ರಾಧಿಕಾರಕ್ಕೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆ ಸಾರ್ವಜನಿಕರಿಂದಲೇ ಮಾಹಿತಿ ಸಂಗ್ರಹಿಸಿ, ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಬಿಡಿಎ ಮುಂದಾಗಿದೆ. ಅಕ್ರಮ ಒತ್ತುವರಿ ತಡೆದು ಬಿಡಿಎ ಆಸ್ತಿಗಳನ್ನು ರಕ್ಷಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯ ಕಾರ್ಯರೂಪಕ್ಕೆ ಅಂತಿಮ ತಯಾರಿ ನಡೆಸಲಾಗಿದ್ದು, ಸೋಮವಾರದಿಂದಲೇ ಜಾರಿಗೆ ಬರುವ ಸಾಧ್ಯತೆಗಳಿವೆ.