ಶಾಂತಿಯುತ ಪ್ರತಿಭಟನೆಯಿಂದಲ್ಲ, ಸರ್ಕಾರದ ನಿರ್ಬಂಧಗಳಿಂದ ಉದ್ಯಮಕ್ಕೆ ನಷ್ಟ: ದೀಪ್ಕೆ
ನವದೆಹಲಿ: ಶಾಂತಿಯುತ ಪ್ರತಿಭಟನೆಗಳಿಂದ ಉದ್ಯಮಗಳಿಗೆ ಯಾವುದೇ ನಷ್ಟವಾಗುವುದಿಲ್ಲ. ಆದರೆ ಸರ್ಕಾರವೇ ಇಡೀ ನಗರವನ್ನು ಬಂದ್ ಮಾಡಿ, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿ, ನಾಗರಿಕರ ಸಂಚಾರವನ್ನು ತಡೆದಾಗ ಉದ್ಯಮಗಳು ಸಂಕಷ್ಟಕ್ಕೆ ಸಿಲುಕುತ್ತವೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಹೇಳಿದ್ದಾರೆ.ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ
ನವದೆಹಲಿ: ಶಾಂತಿಯುತ ಪ್ರತಿಭಟನೆಗಳಿಂದ ಉದ್ಯಮಗಳಿಗೆ ಯಾವುದೇ ನಷ್ಟವಾಗುವುದಿಲ್ಲ. ಆದರೆ ಸರ್ಕಾರವೇ ಇಡೀ ನಗರವನ್ನು ಬಂದ್ ಮಾಡಿ, ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿ, ನಾಗರಿಕರ ಸಂಚಾರವನ್ನು ತಡೆದಾಗ ಉದ್ಯಮಗಳು ಸಂಕಷ್ಟಕ್ಕೆ ಸಿಲುಕುತ್ತವೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಹೇಳಿದ್ದಾರೆ.ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ನಡೆಸಲು ಉದ್ದೇಶಿಸಿರುವ 'ತಿರಂಗಾ ಯಾತ್ರೆ'ಗೂ ಮುನ್ನ ತಮ್ಮ ಚಳವಳಿಯು ಅಹಿಂಸಾತ್ಮಕ ಹೋರಾಟ ಎಂದು ಪ್ರತಿಪಾದಿಸಿದ್ದಾರೆ.'ತಿರಂಗಾ ಯಾತ್ರೆ' ನಡೆಸಬೇಡಿ: ಅಭಿಜಿತ್ ದೀಪ್ಕೆಗೆ ದೆಹಲಿ ಪೊಲೀಸರ ಸೂಚನೆರಾವಣ, ರಾಕಿ, ರಾಯ, ರಾಜಾಹುಲಿ ಏನೇ ಆದರೂ ನಾನು ‘ರಾಧಿಕಾಪತಿ’ ಎಂದ ನಟ ಯಶ್ ಮುಂಬೈ, ಪುಣೆ, ಜೈಪುರ, ಲಖನೌ, ಬೆಂಗಳೂರು ಮತ್ತು ನಾಗಪುರದಲ್ಲಿ ಸಿಜೆಪಿ ಈಗಾಗಲೇ ಪ್ರತಿಭಟನೆಗಳನ್ನು ಆಯೋಜಿಸಿತ್ತು, ಎಲ್ಲವೂ ಸಂಪೂರ್ಣ ಶಾಂತಿಯುತವಾಗಿ ನಡೆದಿವೆ. ಜೈಪುರದಲ್ಲಿ ತಮ್ಮ ಮೇಲೆ ವೈಯಕ್ತಿಕವಾಗಿ ಹಲ್ಲೆಯಾಗಿದ್ದರೂ, ಹಿಂಸೆಗೆ ಹಿಂಸೆಯಿಂದ ಉತ್ತರಿಸುವುದು ತಮ್ಮ ಚಳವಳಿಯ ತತ್ವಕ್ಕೆ ವಿರುದ್ಧವಾದ್ದರಿಂದ ತಾವು ಪ್ರತಿದಾಳಿ ನಡೆಸಲಿಲ್ಲ ಎಂದು ದೀಪ್ಕೆ ನೆನಪಿಸಿಕೊಂಡಿದ್ದಾರೆ.ಸಿಜೆಪಿ ಕಾರ್ಯಕರ್ತರನ್ನು 'ಅರಾಜಕತಾವಾದಿಗಳು' ಎಂದು ಬಿಂಬಿಸುವ ಪ್ರಯತ್ನಗಳನ್ನು ತಳ್ಳಿಹಾಕಿದ ಅವರು, 'ಸರ್ಕಾರವನ್ನು ಪ್ರಶ್ನಿಸುವುದು, ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಮತ್ತು ಸಾರ್ವಜನಿಕ ಹುದ್ದೆಯಲ್ಲಿರುವವರನ್ನು ಜವಾಬ್ದಾರರನ್ನಾಗಿ ಮಾಡುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕು. ಆಡಳಿತಾರೂಢ ಪಕ್ಷವು ವಿರೋಧ ಪಕ್ಷದಲ್ಲಿದ್ದಾಗ ತಾನೂ ಪ್ರತಿಭಟನೆಗಳನ್ನು ನಡೆಸಿತ್ತು, ಆದರೆ ಈಗ ಅದೇ ಮಾದರಿಯ ಧರಣಿಗಳನ್ನು ಕಾನೂನು ಸುವ್ಯವಸ್ಥೆಗೆ ಬೆದರಿಕೆ ಎಂದು ಬಿಂಬಿಸುತ್ತಿರುವುದು ಅದರ ದ್ವಂದ್ವ ನೀತಿಯನ್ನು ತೋರಿಸುತ್ತದೆ' ಎಂದು ಟೀಕಿಸಿದ್ದಾರೆ.ಬರದಲ್ಲೂ ಇಳುವರಿ ಪಡೆದ ಯುವ ರೈತ; ಜೇಡಿ ಮಣ್ಣಲ್ಲೂ ಫಲ ನೀಡಿದ ಡ್ರ್ಯಾಗನ್ ಹಣ್ಣುಹಿರೇಕೆರೂರು: ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಆಧಾರ್ ಕೆಲಸಕ್ಕೆ ಜನ ಪರದಾಟ ಜಂತರ್ ಮಂತರ್ ಪ್ರತಿಭಟನಾ ಸ್ಥಳವಲ್ಲ ಎಂದು ದೆಹಲಿ ಪೊಲೀಸರು ಭಾನುವಾರ ಆದೇಶ ಹೊರಡಿಸಿದ್ದರು. ಇದನ್ನು ಖಂಡಿಸಿ ಸಿಜೆಪಿ ಕಾರ್ಯಕರ್ತರು ಜಂತರ್ ಮಂತರ್ಗೆ ನುಗ್ಗಿ ಪ್ರತಿಭಟನೆ ನಡೆಸಿದ್ದರು. ಜಂತರ್ ಮಂತರ್ಗೆ ‘ಅತಿಕ್ರಮ ಪ್ರವೇಶ’ ಮಾಡಿದ್ದಕ್ಕಾಗಿ ಸಿಜೆಪಿ ನಾಯಕರಾದ ಸೌರವ್ ದಾಸ್ ಹಾಗೂ ಅಶುತೋಷ್ ರಾಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಕನ್ನಾಟ್ ಪ್ಲೇಸ್ನಲ್ಲಿರುವ ಸೆಂಟ್ರಲ್ ಪಾರ್ಕ್ ಹಾಗೂ ದೇಶದ ಇತರ ಕಡೆಗಳಲ್ಲಿ 'ಲೆಹರಾ ದೋ ತಿರಂಗಾ' (ತ್ರಿವರ್ಣ ಧ್ವಜ ಹಾರಿಸಿ) ಪ್ರತಿಭಟನೆ ನಡೆಸುವಂತೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಕರೆ ನೀಡಿದ್ದರು.