ಹೋರಾಟದ ಟೆಂಟ್ ರಸ್ತೆಬದಿ ಸ್ಥಳಾಂತರ
ಕಲಬುರಗಿ: ನಗರದ ರಾಮಮಂದಿರ ವೃತ್ತದಲ್ಲಿ ಕಬ್ಬು ಬೆಳೆಗಾರರು ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ರಸ್ತೆ ತಡೆ ಹೋರಾಟದ ಟೆಂಟ್ ಅನ್ನು ಪೊಲೀಸರು ಶುಕ್ರವಾರ ಸಂಜೆ 7 ಗಂಟೆ ಹೊತ್ತಿಗೆ ಕಿತ್ತಿಸಿದರು. ಅದಕ್ಕೆ ತೀವ್ರ ಪ್ರತಿರೋಧ ತೋರಿದ 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.ಟೆಂಟ್ ಸ್ಥಳಾಂತರದಿಂದ ನಾಲ್ಕು ದಿನಗಳ ಬಳಿಕ ರಾಮಮ

ಕಲಬುರಗಿ: ನಗರದ ರಾಮಮಂದಿರ ವೃತ್ತದಲ್ಲಿ ಕಬ್ಬು ಬೆಳೆಗಾರರು ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ರಸ್ತೆ ತಡೆ ಹೋರಾಟದ ಟೆಂಟ್ ಅನ್ನು ಪೊಲೀಸರು ಶುಕ್ರವಾರ ಸಂಜೆ 7 ಗಂಟೆ ಹೊತ್ತಿಗೆ ಕಿತ್ತಿಸಿದರು. ಅದಕ್ಕೆ ತೀವ್ರ ಪ್ರತಿರೋಧ ತೋರಿದ 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.ಟೆಂಟ್ ಸ್ಥಳಾಂತರದಿಂದ ನಾಲ್ಕು ದಿನಗಳ ಬಳಿಕ ರಾಮಮಂದಿರ ವೃತ್ತದಲ್ಲಿ ವಾಹನಗಳ ಸಂಚಾರ ಎಂದಿನಂತೆ ಶುರುವಾಯಿತು.ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹5,500 ಬೆಂಬಲ ಬೆಲೆ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ರಾಮಮಂದಿರ ವೃತ್ತದಲ್ಲಿ ವಾಹನಗಳ ಸಂಚಾರ ಸ್ತಬ್ಧಗೊಳಿಸಿ ಅ.13ರಿಂದ ಪ್ರತಿಭಟಿಸುತ್ತಿದ್ದರು. ಗುರುವಾರ ಸ್ಥಳಕ್ಕೆ ಭೇಟಿ ನೀಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಹೋರಾಟವನ್ನು ರಸ್ತೆ ಬದಿಗೆ ಸ್ಥಳಾಂತರಿಸಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸುವಂತೆ ಕೋರಿದ್ದರು. ಹೋರಾಟದ ಮುಂಚೂಣಿಯಲ್ಲಿದ್ದ ಮುಖಂಡರು ಶುಕ್ರವಾರ ಮಧ್ಯಾಹ್ನ ಟೆಂಟ್ ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದರು.ಅದರಂತೆ ಶುಕ್ರವಾರ ಮಧ್ಯಾಹ್ನವೂ ಹೋರಾಟದ ಟೆಂಟ್ ಕಿತ್ತು ರಸ್ತೆಯ ಒಂದು ಬದಿ ಸಂಚಾರಕ್ಕೆ ಮುಕ್ತಗೊಳಿಸುವ ಯತ್ನ ನಡೆಯಿತು. ಅದಕ್ಕೆ ಹೋರಾಟಗಾರರ ಪೈಕಿ ಕೆಲ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಸಂಜೆ ತನಕ ಹೋರಾಟ ಯಥಾಸ್ಥಿತಿಯಲ್ಲೇ ಸಾಗಿತ್ತು. ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು.ಸಂಜೆ ಹೊತ್ತಿಗೆ ಡಿಸಿಪಿಗಳಾದ ಶಾಲೂ ಹಾಗೂ ಪ್ರವೀಣ ನಾಯಕ್ ನೇತೃತ್ವದಲ್ಲಿ ಪೊಲೀಸರು ಟೆಂಟ್ ಸ್ಥಳಾಂತರಕ್ಕೆ ಮುಂದಾದರು. ಅದಕ್ಕೆ ಹಲವರು ಪ್ರತಿಭಟನಕಾರರು ತೀವ್ರ ವಿರೋಧ ತೋರಿದರು. ಕೆಲವರು ರಸ್ತೆಯಲ್ಲೇ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಿದ್ದರಾಮ ಧನ್ನೂರ, ಬಸವರಾಜ ಕೋರಿ, ಮಲ್ಲಿಕಾರ್ಜುನ ಸಾರವಾಡ, ಜಗದೀಶಕುಮಾರ, ಕಾಶೀನಾಥ ಕೂಡಿ, ಬಾಬುರಾವ ಪಾಟೀಲ, ಶಿವಪ್ಪ ಬಿರಾದಾರ, ಶರಣಗೌಡ ಸೇರಿದಂತೆ ಒಂಬತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು. ಅಂತಿಮವಾಗಿ ಹೋರಾಟದ ಟೆಂಟ್ ಅನ್ನು ಮರಗಮ್ಮ ಗುಡಿ ಪಕ್ಕದಲ್ಲಿ ಸ್ಥಳಾಂತರಿಸಿ, ಕಬ್ಬು ಬೆಳೆಗಾರರು ಹೋರಾಟ ಮುಂದುವರಿಸಿದ್ದಾರೆ.ಸ್ಥಳದಲ್ಲಿ ಎಸಿಪಿಗಳಾದ ಬಸವೇಶ್ವರ ಹೀರಾ, ಶರಣಬಸಪ್ಪ ಸುಬೇದಾರ, ಜೇಮ್ಸ್ ಮಿನೇಜಸ್, ಶಿವನಗೌಡ ಪಾಟೀಲ, ಇನ್ಸ್ಪೆಕ್ಟರ್ಗಳಾದ ಚಂದ್ರಶೇಖರ ತಿಗಡಿ, ನಟರಾಜ ಲಾಡೆ, ಹುಸೇನ್ ಬಾಷಾ, ಖಾಜಾ ಹುಸೇನ್, ಅರುಣಕುಮಾರ್, ಮಹಾಂತೇಶ ಪಾಟೀಲ, ಸುಶೀಲಕುಮಾರ್ ಪಾಟೀಲ ಸೇರಿದಂತೆ ಹಲವರು ಸ್ಥಳದಲ್ಲಿದ್ದರು.ದಿನವಿಡೀ ಧರಣಿ: ದಿನವಿಡೀ ನಡೆದ ಧರಣಿಯಲ್ಲಿ ಸುಲಫಲಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಹಲವರು ಭೇಟಿ ನೀಡಿ ರೈತರ ಧರಣಿಗೆ ಬೆಂಬಲ ವ್ಯಕ್ತಪಡಿಸಿದರು. ಕೆಲ ಗ್ರಾಮಗಳ ರೈತರು ಹತ್ತಕ್ಕೂ ಹೆಚ್ಚಿನ ಎತ್ತಿನ ಬಂಡಿಗಳೊಂದಿಗೆ ಬಂದು ಹೋರಾಟದಲ್ಲಿ ಪಾಲ್ಗೊಂಡಿದ್ದರು.ಮಹೇಶಗೌಡ ಸುಬೇದಾರ ಕಾರ್ಯಾಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆರೈತರು ಕಡಿಮೆ ಪೊಲೀಸರು ದೊಡ್ಡ ಸಂಖ್ಯೆಯಲ್ಲಿ ಇದ್ದಿದ್ದರಿಂದ ಹೋರಾಟದ ಟೆಂಟ್ ಸ್ಥಳಾಂತರಿಸಲಾಗಿದೆ. ಅನ್ನದಾತರು ದೊಡ್ಡ ಸಂಖ್ಯೆಯಲ್ಲಿ ಬಂದರೆ ಮತ್ತೆ ಟೆಂಟ್ ವಿಸ್ತರಿಸೋಣಮೌಲಾ ಮುಲ್ಲಾ ರೈತ ಮುಖಂಡಎಕರೆ ಕಬ್ಬು ಬೆಳೆದರೆ ರೈತರಿಗೆ ₹50 ಸಾವಿರ ಸಿಗುತ್ತದೆ. ಆದರೆ ಕಾರ್ಖಾನೆಗಳು ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ವರಮಾನ ಬರುತ್ತದೆ. ಹೀಗಾಗಿ ಟನ್ ಕಬ್ಬಿಗೆ ₹5500 ನೀಡಬೇಕು